Breaking News

ಸಾವಳಗಿ: ರಾಜಕೀಯ ಇಚ್ಛಾಶಕ್ತಿಕೊರತೆಯಿಂದ ಡಾಂಬರ ಕಾಣದ ರಸ್ತೆ

Savalgi: A road without asphalt due to lack of political will

•ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರು ಏನ್ನೂ ಪ್ರಯೋಜನವಾಗಿಲ್ಲ

•ಸಾವಳಗಿ ತುಬಚಿ 2 ಕಿ.ಮೀ ಡಾಂಬರ ಯಾವಾಗ ?

  • ಈ ರಸ್ತೆಗೆ ಮುಕ್ತಿ ಯಾವಾಗ ?

ಅಧಿಕಾರಿಗಳು- ಜನಪ್ರತಿನಿಧಿಗಳ ಕಣ್ಣಿಗೆ ಕಾಣದ ರಸ್ತೆ

ಸಚೀನ ಜಾಧವ ಸಾವಳಗಿ: ಈ ರಸ್ತೆಯು ಬರಿ ಧೂಳಿನಿಂದ ಕೂಡಿದ ರಸ್ತೆ, ಮತ್ತು ಕೆಲವು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅನುದಾನದಲ್ಲಿ ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ ಗದ್ದಿಗೌಡರ್ ಅವರ ಹಸ್ತದಿಂದ ಗುದ್ದಲಿ ಪೂಜೆಯಾದ ರಸ್ತೆ ಇದಾಗಿದೆ, ರಸ್ತೆಯು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಹೌದು ಇದು ಜಮಖಂಡಿ ತಾಲೂಕಿನ ಸಾವಳಗಿ-ತುಬಚಿ ರಸ್ತೆ 2-3 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆಯು ಜಂಬಗಿ, ತುಂಗಳ, ಶೂರ್ಪಾಲಿ, ತುಬಚಿ, ಝುಂಜರವಾಡ, ಅಥಣಿ ಸೇರಿದಂತೆ ಅನೇಕ ಗ್ರಾಮವನ್ನು ತಲುಪುವ ರಸ್ತೆ ಇದ್ದಾಗಿದೆ. ಸಾವಳಗಿ ತುಂಗಳ ರಸ್ತೆಯಿಂದ ಪ್ರಾರಂಭವಾಗಬೇಕೆಂದು ಕೂಡ ಸಾವಳಗಿ ಗ್ರಾಮದ ಕಡೆಯ ಅಂದಾಜು ಎರಡು ಕಿಲೋಮೀಟರ್ ರಸ್ತೆ ಆಗಿರುವುದಿಲ್ಲ ಇದರ ಬಗ್ಗೆ ಯಾವ ಅಧಿಕಾರಿಯೂ ಸ್ವಲ್ಪ ಗಮನಹರಿಸಿಲ್ಲ, ದ್ವಿಚಕ್ರ ವಾಹನ, ಸಾವಿರಾರು ಸರಕು ಸಾಗಣೆ, ಸಾರ್ವಜನಿಕ ಸಾರಿಗೆ ವಾಹನಗಳು ಸಂಚಾರ ಮಾಡುತ್ತಿವೆ.

ಮಳೆ ಹಾಗೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಯ ನೀರು ರಸ್ತೆಗೆ ಬಂದು ಗುಂಡಿಗಳಲ್ಲಿ ನೀರು ನಿಂತು ವಾಹನಗಳು ಬಂದಾಗ ಗುಂಡಿಯಲ್ಲಿನ ನೀರು ಅಕ್ಕ ಪಕ್ಕದ ಅಂಗಡಿಗಳಿಗೆ ಸಿಡಿಯುತ್ತವೆ.

ಪ್ರತಿ ಚುನಾವಣೆ ಸಂದರ್ಭದಲ್ಲಿ ಮತದಾರರು ಈ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಸುಧಾರಸಬೇಕೆಂಭ ಬೇಡಿಕೆ ಇಟ್ಟಿರು ಜನಪ್ರತಿನಿಧಿಗಳು ಕೇವಲ ಆಶ್ವಾಸನೆಗೆ ಸೀಮಿತವಾಗಿದ್ದಾರೆ ಗ್ರಾಮ ಪಂಚಾಯತ ಸದಸ್ಯರು ಮನಸು ಮಾಡಿದರೆ ಗ್ರಾಮ ಪಂಚಾಯತ ಅನುದಾನದಲ್ಲಿ ರಸ್ತೆ ಸುಧಾರಿಸಬಹುದು ಅವರೇ ಗ್ರಾಮ ಪಂಚಾಯಿತಿ ಸದಸ್ಯರನ್ನು ಗೆದ್ದು ಬಂದ ನಂತರ ಇದ್ದ ಕಡೆ ಹಾಕುವುದಿಲ್ಲ ಎನ್ನುವುದು ನಿವಾಸಿಗಳ ಮಾತಾಗಿದೆ ಇದು ಬಹು ದಿನಗಳ ಬೇಲಿಕೆಯ ರಸ್ತೆ ಈ ಪ್ರದೇಶದಲ್ಲಿ ಗ್ರಾಮದ ಎಲ್ಲಾ ವಾರ್ಡಿನ ಸದಸ್ಯರು ಇಲ್ಲಿ ವಾಸಿಸುವುದು ಮತ್ತೊಂದು ವಿಷಯ.

ಸ್ಥಳೀಯ ನಾಯಕರ ಹಾಗೂ ರಾಜಕೀಯ ಇಚ್ಚಾ ಶಕ್ತಿ ಕೊರತೆಯಿಂದ ಸಾವಳಗಿ-ತುಂಗಳ ರಸ್ತೆಯು ತುಬಚಿ ಗ್ರಾಮದಿಂದ ಪ್ರಾರಂಭವಾಗಿದೆ.

ಇದು ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ ಗದ್ದಿಗೌಡರ್ ಅವರು ರಸ್ತೆಯ ಭೂಮಿ ಪೂಜೆ ಮಾಡಿದಾಗಲೇ ಸ್ಥಳೀಯ ನಾಯಕರಿಗೆ ಗೊತ್ತಿದ್ದರೆ ಸುಮ್ಮನಾಗಿರುವುದು ರಾಜಕೀಯ ಕುತಂತ್ರವಾಗಿದೆ.

ಈಗಲಾದರೂ ಸ್ಥಳೀಯ ನಾಯಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಯಾವುದಾದರೂ ದೊಡ್ಡ ಅನಾಹುತ ಸಂಭವಿಸುವ ಮೊದಲಿ ರಸ್ತೆಯನ್ನು ಸುಧಾರಿಸಬೇಕು ಎಂಬುದು ಪ್ರಜ್ಞಾವಂತ ಜನರ ಮಾತಾಗಿದೆ.

  • ಬಾಕ್ಸ್: ಸಾವಳಗಿ-ತುಬಚಿ ರಸ್ತೆ 2 ಕಿ.ಮೀ ರಸ್ತೆ ಹದಗೆಟ್ಟಿದು ನನ್ನ ಗಮನಕ್ಕೆ ಬಂದಿದೆ, ಕ್ರಿಯಾಯೋಜನೆಯಲ್ಲಿ ಹಾಕಿದ್ದೇವೆ, ಈಗಾಗಲೇ ಒಪ್ಪಿಸಿದೇವೆ ಆದಷ್ಟು ಬೇಗ ಹಣ ಬಿಡುಗಡೆಯಾದರೆ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು.

ನಾಡೋಜ ಜಗದೀಶ್ ಗುಡಗುಂಟಿ
ಜಮಖಂಡಿ ಶಾಸಕ

•ಬಾಕ್ಸ: ಕರೆ ಮಾಡಿದರೆ ಸರಿಯಾಗಿ ಸ್ಪಂದಿಸದ ಸಂಸದ

ಪತ್ರಿಕೆಯಲ್ಲಿ ಒಂದು ಸ್ಟೇಟ್ಮೆಂಟ್ ಕೇಳಲು ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ. ಸಿ ಗದ್ದಿಗೌಡರಗೆ ಕರೆ ಮಾಡಿದರೆ ಅವರ ಆಪ್ತ ಸಹಾಯಕ ಮಾತನಾಡಿ ಸರಿಯಾಗಿ ಸ್ಪಂದಿಸಲಿಲ್ಲಾ ಕರೆ ಸತತ ಕಾಲ ಕರೆ ಮಾಡಿದರೆ ಮೂರು ದಿನವೂ ಅವರ ಆಪ್ತ ಸಹಾಯಕ ಮಾತನಾಡಿ ಸರ್ ಮೀಟಿಂಗನಲ್ಲಿ ಇದ್ದಾರೆ ಎಂದು ಹೇಳಿ ಕರೆ ಕಟ್ ಮಾಡುತ್ತಾರೆ.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.