Breaking News

ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ 5000 ನೋಟು ಬುಕ್ಕುಗಳನ್ನು ನಾರಾಯಣಪ್ಪ ನಾಯಕ ಅವರಿಂದ ವಿತರಣೆ

Narayanappa Nayaka distributed 5000 notebooks to poor students of government schools

ಜಾಹೀರಾತು

ಗಂಗಾವತಿ23: ಕಳೆದ 15 ವರ್ಷಗಳಿಂದ ಜೋಗದ ನಾರಾಯಣಪ್ಪ ನಾಯಕ ಸೇವಾ ಸಮಿತಿಯಿಂದ
ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟಪುಸ್ತಕ ವಿತರಣೆ ನಡೆಸುತ್ತಾ ಬರಲಾಗಿದೆ ಅಲ್ಲದೆ ತಾಲೂಕಿನ 20 ಅಧಿಕ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಪ್ರತಿವರ್ಷ ವಿತರಿಸಲಾಗುತ್ತದೆ ಎಂದು ಜೋಗದ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಜೋಗದ ನಾರಾಯಣಪ್ಪ ನಾಯಕ ಹೇಳಿದರು.
ಅವರು ಶುಕ್ರವಾರದಂದು ತಮ್ಮ ನಿವಾಸದಲ್ಲಿ ಗಂಗಾವತಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸುಮಾರು 5 ಸಾವಿರಕ್ಕೂ ಅಧಿಕ ನೋಟು ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರ ತಮ್ಮ ಶಾಲೆಗಳಿಗೆ ಬಿಸಿಊಟ ಕ್ಷೀರ ಭಾಗ್ಯ ಸೇರಿದಂತೆ ಪುಸ್ತಕಗಳನ್ನು ಮಾತ್ರ ವಿತರಿಸುತ್ತದೆ ಆದರೆ ಅಗತ್ಯ ಇರುವ ನೋಟು ಪುಸ್ತಕ ಹಾಗೂ ಇತರೆ ಕಲಿಕಾ ಸಾಮಗ್ರಿಗಳ ತೊಂದರೆಗಳನ್ನು ಅನುಭವಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತಮ್ಮ ಸೇವಾ ಸಮಿತಿಯ ನೇತೃತ್ವದಲ್ಲಿ ಕುಟುಂಬದವರ ಸಹಕಾರದಿಂದ ಪ್ರತಿ ವರ್ಷ ನಡೆಸುತ್ತಾ ಬರಲಾಗಿದ್ದು ಈ ಹಿನ್ನೆಲೆಯಲ್ಲಿ ಸಮಾಜದಲ್ಲಿರುವ ಧಾನಿಗಳು
ಆಯಾ ಶಾಲೆಗಳಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಇಂತಹ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕೆಂದು ಕರೆ ನೀಡಿದರು. ಯಾವುದೇ ಒಂದು ಸಮಾಜ ಗ್ರಾಮ, ತಾಲೂಕು ಸೇರಿದಂತೆ ರಾಜ್ಯದ ಪ್ರಗತಿ ಗೊಳ್ಳಬೇಕಾದರೆ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ ಶಿಕ್ಷಣದಿಂದ ಮಾತ್ರ ದೇಶ ಸಮೃದ್ಧಿಗೊಳ್ಳುತ್ತದೆ ಎಂಬ ಭಾವನೆಯಿಂದ ಈ ಕಾರ್ಯವನ್ನು ನಡೆಸುತ್ತಾ ಬರಲಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಾದ ಬೆಂಡರವಾಡಿ. ಸಿದ್ದಿಕೇರಿ. ವಡ್ಡರಹಟ್ಟಿ. ಗದ್ವಾಲ್ ಕ್ಯಾಂಪ್. ಎಸ್ಸಿ ಎಸ್ಟಿ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯ. ತಿಮ್ಮಣ್ಣ ನಾಯಕ ಪ್ರೌಢ ಶಾಲೆ. ಲಂಬಾಣಿ ತಾಂಡ ಬಸಾಪಟ್ಟಣ. ಡಗ್ಗಿ ಕ್ಯಾಂಪ್ ಲಿಂಗಾಯಿತರ ವಸತಿ ನಿಲಯ. ಕಲ್ಲಯ್ಯ ಕ್ಯಾಂಪು. ಉಳೆನೂರು ಸೇರಿದಂತೆ 20 ಅಧಿಕ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು ಆಯಾ ಶಾಲೆಯ ಮುಖ್ಯ ಗುರುಗಳಿಗೆ ಹಂಚಿದರು ಈ ಸಂದರ್ಭದಲ್ಲಿ ಜೋಗದ ಭರಮಪ್ಪ, ನಾಯಕ. ಜೋಗದ ಹೊನ್ನಪ್ಪ ನಾಯಕ ಜೋಗದ ಕೃಷ್ಣ ನಾಯಕ. ಹನುಮಂತಪ್ಪ ನಾಯಕ ಕನಕಪ್ಪ, ಚಂದ್ರು.ಸುರೇಶ. ಗಾದಿಲಿಂಗಪ್ಪ ನಾಯಕ . ದಯಾನಂದ.ಕೇಶವ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *