Breaking News

ಕೂಸಿನ ಮನೆಗಳು ಮಾದರಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿ-ಮಹಾಂತಗೌಡಪಾಟೀಲ್

Let nursing homes act as model centres-Mahant Gowda Patil

ಜಾಹೀರಾತು
IMG 20241231 WA0286

ಗಂಗಾವತಿ: ಕೂಸಿನ ಮನೆ ಕೇಂದ್ರಗಳು ಮಾದರಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಅವರು ಹೇಳಿದರು.

ಗಂಗಾವತಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಶ್ರಯದಲ್ಲಿ ಕನಕಗಿರಿ ತಾಲೂಕಿನ ಕೂಸಿನ ಮನೆ ಮಕ್ಕಳ ಆರೈಕೆದಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೂಸಿನ ಮನೆ ನಿರ್ವಹಣೆಯ ಕುರಿತು ನಡೆಯುವ ಈ ತರಬೇತಿ ಕಾರ್ಯಗಾರದಲ್ಲಿ ಎಲ್ಲರೂ ಏಳು ದಿನ ತಪ್ಪದೇ ಪಾಲ್ಗೋಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಕೂಸಿನಮನೆ ಸ್ಥಾಪನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ದಿಕತೆ, ಮಾನಸಿಕ, ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆರೈಕೆದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ನಂತರ ಕೂಸಿನ ಮನೆ ತರಬೇತುದಾರರಾದ ವಿದ್ಯಾವತಿ ಅವರು ಮಾತನಾಡಿ, ಮಕ್ಕಳ ಆರೈಕೆದಾರರ ತರಬೇತಿಯು ಏಳು ದಿನಗಳವರೆಗೆ ನಡೆಯುತ್ತಿದ್ದು, ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು. ಏಳು ದಿನವೂ ಕಡ್ಡಾಯವಾಗಿ ಹಾಜರಾಗಬೇಕು. ತರಬೇತಿ ಪಡೆದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೂಸಿನ ಮನೆ ತರಬೇತಿದಾರರಾದ ಈರಮ್ಮ, SIRD ಸಂಸ್ಥೆಯ ಸಿಬ್ಬಂದಿಗಳಾದ ದೇವರಾಜ್, ಶೇಖರಪ್ಪ, ತಾ.ಪಂ ವಿಷಯ ನಿರ್ವಾಹಕರಾದ ಶಿವಮೂರ್ತಿ ಕಂಪಾಪುರಮಠ, ಪವನಕುಮಾರ್, ಕನಕಗಿರಿ ತಾ.ಪಂ ಐಇಸಿ ಸಂಯೋಜಕರಾದ ಶಿವಕುಮಾರ್ ಕೆ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿಗಳ ಕೂಸಿನ ಮನೆ ಕೇರ್ ಟೇಕರ್ ಗಳು ಹಾಜರಿದ್ದರು.

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.