Due to the move of the organizers, the students are in trouble without referees in the district level sports event.
ವರದಿ: ಬಂಗಾರಪ್ಪ .ಸಿ.
ಹನೂರು :ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜು ಹನೂರು, ಜೆಎಸ್ಎಸ್ ಪದವಿ ಪೂರ್ವ ಕಾಲೇಜು ರಾಮಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ
ಜಿಲ್ಲಾ ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ಜಿಲ್ಲೆಯ ನಾನಾ ಭಾಗದಿಂದ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದರು ಆದರೆ ಕ್ರೀಡೇಯ ಅಂತಿಮ ಅಂತದಲ್ಲಿ ಆಯೋಜಕರ ಸಮಯ ಪ್ರಜ್ಞೆಯ ಯಡವಟ್ಟಿನಿಂದ ತೀರ್ಪುಗಾರರೆ ಇಲ್ಲದಂತಾಗಿದೆ ಇದರಿಂದ ಕೆರಳಿದ ವಿದ್ಯಾರ್ಥಿಗಳು ಹಾಗೂ ಕೆಲವು ಶಿಕ್ಷಕರು ನಾವು ದೂರದ ಊರಿನಿಂದ ಬಂದಿದ್ದು ನಮಗೆ ವಾಪಸ್ಸು ಹೋಗಲು ಬೇಗನೆ ಕ್ರೀಡೆ ಮುಗಿಸಿ ಅವಕಾಶ ಮಾಡಿಕೋಡಿ ಎಂದು ಎಷ್ಟೋ ಬಾರಿ ಕೇಳಿದರು ಅಯೋಜಕರು ನಮಗೆ ಸ್ಪಂದಿಸುತ್ತಿಲ್ಲ ಎಂದು ತಮ್ಮ ಆಕ್ರೋಶ ಹೋರಹಾಕಿದರು. ಕ್ರೀಡೆಯಿಂದ ಹೊರ ನಡೆದ ವಿದ್ಯಾರ್ಥಿಗಳು ಇದನ್ನು ವೀಕ್ಷಿಸಲು ಆಗಮಿಸಿದ ಸಾರ್ವಜನಿಕರು ಆಯೋಜಕರ ವಿರುದ್ದ ಘೋಷಣೆ ಕೂಗುತ್ತ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪೈನಲ್ ಪಂದ್ಯಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.