Teacher’s Day Celebration at Little Hearts School
ಗಂಗಾವತಿ:ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಭಾರತದಾದ್ಯಂತ ಆಚರಿಸಲಾಗುತ್ತಿದೆ. “ವರ್ಣಮಾತ್ರಂ ಕಲಿಸಿದಾತಂ ಗುರು” ಎನ್ನುವಂತೆ ಮಕ್ಕಳಿಗೆ ಸಣ್ಣವರಿದ್ದಾಗಲೆ ಅವರಿಗೆ ವಿದ್ಯೆ ಬುದ್ದಿ ಸಂಸ್ಕಾರ ಕಲಿಸಿ ಒಳ್ಳೆಯ ಪ್ರಜೆಯಾಗಿ ಜೀವನ ನಡೆಸುವಂತೆ ಅನುಭವ ಪಾಠ ಹೇಳಿಕೊಟ್ಟ ಗುರುಗಳಿಗೆ ಇಂದು ಅಂದರೆ ಸೆಪ್ಟೆಂಬರ್ 5 -2024 ವಂದಿಸುವ ದಿನವಾಗಿದೆ.
ಈ ಶಿಕ್ಷಕರ ದಿನಾಚರಣೆಯನ್ನು ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ವಿಶಿಷ್ಟವಾಗಿ ಆಚರಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳಾದ 10ನೇ ವರ್ಗದ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಮೊದಲಿಗೆ ಶಾಲೆಯ ಎಲ್ಲ ಶಿಕ್ಷಕರಿಗೆ ಶುಭಾಷಯ ಕೋರಿ ಅವರ ಆಶೀರ್ವಾದ ಪಡೆದರು. ಶಾಲೆಯ ವೇದಿಕೆಯಲ್ಲಿ ಎಲ್ಲ ಶಿಕ್ಷಕರನ್ನು ಕೂರಿಸಿ ತಮ್ಮ ಅನುಭವ ಹಂಚಿಕೊಂಡರು. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ
ಪೂಜೆ ಸಲ್ಲಿಸಿ ಸಿಹಿಯಾದ ಕೇಕ್ ನ್ನು ತಂದು ಎಲ್ಲ ಶಿಕ್ಷಕರಿಂದ ಅದನ್ನು ಕತ್ತರಿಸುವಂತೆ ಹೇಳಿ ಎಲ್ಲರಿಗೂ ಸಿಹಿ
ಹಂಚಿದರು. ಅಲ್ಲದೇ ಎಲ್ಲ ಶಿಕ್ಷಕರಿಗೂ ನೆನಪಿನ ಕಾಣಿಕೆಯನ್ನು ನೀಡಿ ಎಲ್ಲರನ್ನು ಗೌರವಿಸಿದರು.
ವೇದಿಕೆ ಮೇಲೆ ಲಿಟಲ್ ಹಾರ್ಟ್ಸ್ ಶಾಲೆಯ ಕಾರ್ಯದರ್ಶಿ ಶ್ರೀಜಗನ್ನಾಥ ಆಲಂಪಲ್ಲಿ ಆಸೀನರಾಗಿದ್ದರು. ಅವರು ವಿದ್ಯಾರ್ಥಿಗಳಿಗೆ ತಮ್ಮ ಭಾಷಣದಲ್ಲಿ ಗುರುಗಳ ಮಹತ್ವವನ್ನು ತಿಳಿಸಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ತಾವೇ ನಡೆಸಿದ ಆಟೋಟಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಣೆ ಮಾಡಿದರು. ವೇದಿಕೆ ಮೇಲೆ ಶಿಕ್ಷಕ/ಕಿಯರಾದ ಶ್ರೀಮತಿ ರಾಧಿಕಾ ಪೋಲಿನ, ಶ್ರೀ ನೀಲಕಂಠಪ್ಪ, ಶ್ರೀಮತಿ ದಿವ್ಯ, ಶ್ರೀಮತಿ ಆಲಿಯಾ, ಕುಮಾರಿ ಕವಿತಾ ಹಾಗೂ ಇತರರು ಉಪಸ್ಥಿತರಿದ್ದರು.