Breaking News

ದೇಶದಲ್ಲಿಅಧಿಕಾರಶಾಹಿ ಪದ್ಧತಿನಿರ್ಮೂಲವಾಗಬೇಕು : ಡಾ.ಕೆ ಎಸ್ ಜನಾರ್ದನ್

Bureaucracy should be eradicated in the country: Dr. KS Janardhan

ಜಾಹೀರಾತು

ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಬುಧವಾರ ದಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ವಿಜಯನಗರ ಜಿಲ್ಲಾ ಪ್ರಥಮ ಸಮ್ಮೇಳನ ನಡೆಸಲಾಯಿತು.

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಪ್ರಥಮ ವಿಜಯನಗರ ಜಿಲ್ಲಾ ಸಮ್ಮೇಳನವನ್ನು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಸಂಚಾಲಕ ಡಾ.ಕೆ ಎಸ್ ಜನಾರ್ದನ್  ರವರು ಹಲೆಗೆ ಬಾರಿಸುವ ಮೂಲಕ  ಸಮ್ಮೇಳನಕ್ಕೆ ಚಾಲನೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಅಧಿಕಾರಶಾಹಿ ಪದ್ಧತಿ ನಿರ್ಮಾಣವಾಗಿದೆ ಇದರಿಂದ ಆರ್ಥಿಕ ಸ್ವಾವಲಂಬನೆಗೆ ಧಕ್ಕೆ ತರುವ ಚಿತ್ರಣ ಎದ್ದು ಕಾಣುತ್ತದೆ. ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಸಂಚಾಲಕ ಡಾ.ಕೆ ಎಸ್ ಜನಾರ್ದನ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಧರ್ಮವನ್ನು ಕೊನೆಗಾಣಿಸಲು ಪಣ ತೊಡಬೇಕು. ಅನ್ಯಾಯದ ವಿರುದ್ಧ ಪ್ರತಿಭಟಿಸಿದಾಗ ಮಾತ್ರ ನ್ಯಾಯದ ಹಾದಿ ಸುಗಮವಾಗಲು ಸಾದ್ಯ. ಪ್ರಜ್ಞಾವಂತರು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕು ಎಂದರು.ಅಖಿಲ ಭಾರತ ಕಿಸಾನ್ ಸಭಾ ವಿಜಯನಗರ ಜಿಲ್ಲಾ ಅಧ್ಯಕ್ಷ ಗುಡಿಹಳ್ಳಿ ಹಾಲೇಶ, ಮಾತನಾಡಿ ಹೇಳಿದರು

ಈ ದೇಶದಲ್ಲಿ  ಪರಿಶಿಷ್ಟ ಪಂಗಡ –  ಪರಿಶಿಷ್ಟ ಜಾತಿ  ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ.  ಈ ದೌರ್ಜನ್ಯದಿಂದ ಹೊರಬರಲು  ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆಯು  ನಿಮಗೆ ರಕ್ಷಣೆ ನೀಡುತ್ತದೆ. ಈ ಸಂಘಟನೆ ಉದ್ದೇಶ ಏನೆಂದರೆ ಅನ್ಯಾಯದಿಂದ ಒಳಗಾದ ಶೋಷಿತ ವರ್ಗದ ಜನರಿಗೆ  ನ್ಯಾಯ ಕೊಡಿಸುವುದು ಮತ್ತು ಅವರ ಪರವಾಗಿ ಕೆಲಸ ಮಾಡುವ ಸಂಘಟನೆ ಆಗಿದೆ. ಎಂದು ಹಲಗಿ ಸುರೇಶ್, ಕೆ ಕೊಟ್ರೇಶ್ ಕೊಟ್ಟೂರು, ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ, ರಮೇಶ್ ನಾಯ್ಕ ಮಾತನಾಡಿದರು

ದ್ವಾರಕೇಶ್ ಅವರು ಕಮಿನಿಷ್ಟ್ ಸಿದ್ದಾಂತದ ಸೊಗಸಾದ ಹಾಡುಗಳನ್ನು ಹಾಡಿದ್ದು ಕಾರ್ಯಕ್ರಮಗೆ ಮೆರುಗು ಬಂದಿತು

ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ದಂಡೇಮ್ಮ, ಎ ಐ ಆರ್ ಡಿ ಎಂ ತಾಲೂಕು  ಅಧ್ಯಕ್ಷರು ಹಡಗಲಿ ಪಿ. ಜಯನಾಯ್ಕ,
ಹೆಚ್ ಹನುಮತಪ್ಪ ಹರಪನಹಳ್ಳಿ, ಗಂಗಾಧರ್ ಹಗರಿಬೊಮ್ಮನಹಳ್ಳಿ, ಕೆ ಮಧು ನಾಯ್ಕ್,ದಡ್ಯಮ್ಮ ಹಡಗಲಿ, ಕೊಟೇಪ್ಪ ಹರಪನಹಳ್ಳಿ, ನಾಗರಾಜಪ್ಪ ನಿವೃತ್ತ ಶಿಕ್ಷಕರು ಹಡಗಲಿ, ಅಂಜಿನಪ್ಪ, ಕೊಟ್ರೇಶ್ ತಗ್ಗಿನಕೇರಿ, ರಮೇಶ್ ನಾಯ್ಕ , ಕೆ ರೇಣುಕಮ್ಮ,ಎ ದುರುಗಪ್ಪ,ರಾಮಪ್ಪ,ಪಿ ಚಂದ್ರಶೇಖರ್, ಮಂಜುನಾಥ್,ಮುದಿಯಪ್ಪ, ಗಣೇಶ್, ಕಾರ್ಯಕರ್ತರು ಉಪಸ್ಥಿತರಿದ್ದರು

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.