Breaking News

ಮಹಾತ್ಮ ಗಾಂಧೀಜಿ ಅವರ ಆದರ್ಶಗಳು ಎಲ್ಲರೂ ಪಲಿಸಲಿ – ಮನೀಯರ್

Mahatma Gandhi’s ideals should be followed by all – Maniyar

ಜಾಹೀರಾತು

ಗಂಗಾವತಿ,ಆ 02: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೆ ಜಯಂತಿಯ ಪ್ರಯುಕ್ತ ಇಂದು ನಡೆದ ಕಾಲ್ನಡಿಗೆ ಜಾಥಾವನ್ನೂ ನಗರದ ಗಾಂಧಿ ವೃತ್ತದಿಂದ ಇಂದಿರಾ ಗಾಂಧಿ ವೃತ್ತದ(ಜುಲೈ ನಗರ) ವರೆಗೆ ಸುಮಾರು ಒಂದೂವರೆ ಕಿಲೋ ಮೀಟರ್ವರೆಗೆ ಕಾಲ್ನಡಿಗೆ ಮೂಲಕ ನಡೆದು ಗಾಂಧಿ ನಡಿಗೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು. ಈ ಗಾಂಧಿ ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು,ಅನೇಕ ಮಹಿಳೆಯರು, ಯುವಕರು ,ಹಿರಿಯ ಮುಖಂಡರು ಭಾಗವಹಿಸಿ ಜಾಥಾ ಕಾರ್ಯಕ್ರಮ ಮೆರುಗು ಹೆಚ್ಚಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಅಲ್ಪ ಸಂಖ್ಯಾತರ ಉಪಾಧ್ಯಕ್ಷರು ಮತ್ತು ಗಾಂಧಿ ನಡಿಗೆ ಕಾರ್ಯಕ್ರಮದ ವೀಕ್ಷಕರು ಆದ ಸೈಯದ್ ಅಲಿ ಮಕoದರ್ ಖಾನ್ ಮಾತನಾಡಿದ ಇವರು ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಮುನ್ನುಡಿ ಬರೆದರು. ಅದರಂತೆ ಅವರ ಅನೇಕ ಉಪವಾಸ ಸತ್ಯಾಗ್ರಹಗಳು,ಸಂದೇಶಗಳು ಇನ್ನು ಅನೇಕ ವಿಚಾರಗಳಿಂದ ಅವರು ನಮ್ಮುಟ್ಟಿಗೆ ಇದ್ದಾರೆ. ಅವರ ವಿಚಾರಗಳನ್ನು ಎಲ್ಲರೂ ಪಾಲಿಸಬೇಕೆಂದು ಕರೆ ಕೊಟ್ಟರು.

ಶಮಿದ್ ಮನಿಯಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಂಗಾವತಿ ಇವರು ಮಾತನಾಡಿ ಇಂದು ಮಹಾತ್ಮ ಗಾಂಧೀಜಿ ಅವರ 155ನೆ ಜಯoತಿಯನ್ನು ನಮ್ಮ ಕೆಪಿಸಿಸಿ ಕಚೇರಿಯ ಆದೇಶದ ಮೇರೆಗೆ ಇಂದು ಗಂಗಾವತಿಯಲ್ಲಿ ಮಹಾತ್ಮ ಗಾಂಧಿ ವೃತ್ತದಿಂದ ಇಂದಿರಾ ಗಾಂಧಿ ವೃತ್ತದವರೆಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ. ಗಾಂಧೀಜಿಯವರ ಅಹಿಂಸಾ ತತ್ವ ಮಾರ್ಗ, ಅವರ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶೈಲಜಾ ಕಾಂಗ್ರೆಸ್ ಪಕ್ಷದ ವಕ್ತಾರರು ಗಂಗಾವತಿ ಇವರು ಮಹಾತ್ಮ ಗಾಂಧೀಜಿ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖಕರು,ಅವರು ಹಾಕಿಕೊಟ್ಟ ಅಹಿಂಸಾತ್ವ, ಶಾಂತಿ ಸಹೃದತೆಯಿಂದ ಇವರ ಆಶಯಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.ಜೊತೆಯಲ್ಲಿ ಇಂದು ಇನ್ನೋರ್ವ ಮಾಜಿ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯು ಇಂದು ಇರುವುದು ಇಬ್ಬರ ಮಹಿನಿಯರ ಜಯಂತಿಯ ಶುಭಾಶಯಗಳು ತಿಳಿಸಿದರು.

ಗಾಂಧಿ ನಡಿಗೆ ಜಾಥಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂದಿದ್ದ ಗಾಂಧಿ ವಾದಿಗಳು ಕಾಂಗ್ರೆಸ್ ನ ಹಿರಿಯ ಜೀವಿಗಳು,ಸ್ವಾತಂತ್ರ್ಯ ಹೋರಾಟಗಾರರಾದ ವಿ.ಲ್. ನಾಡಗೌಡರ್ ಮುಂಡರಗಿ ಮಾತನಾಡಿ ನಮ್ಮ ಕಾಲದಲ್ಲಿ ಸ್ವಾತoತ್ರ್ಯಕ್ಕಾಗಿ ಸಾಕಷ್ಟು ಬಲಿದಾನಗಳು ನಡೆದವು,ಹೋರಾಟಗಾರರು ಜೈಲು ಪಾಲಾದರು ಇಷ್ಟಾದರೂ ಸಹ ಎದೆಗುಂದದೆ ಸ್ವಾತಂತ್ಯ ವನ್ನೂ ಪಡೆಯಲು ಹೋರಾಟ ಮಾಡಿದ್ದು ಆ ಸಂದರ್ಭದಲ್ಲಿ ಭಾಗವಹಿಸಿದ್ದು ನಮ್ಮ ಪುಣ್ಯ ಎಂದರು.

ಇದೇ ಸಂದರ್ಭದಲ್ಲಿ ಶರಣಯ್ಯ ಗೌಡರ್ ಮಾಲಿ ಪಾಟೀಲ್ ಕಾಂಗ್ರೆಸ್ ನ ಹಿರಿಯ ಮುಖಂಡರು, ಮಲ್ಲೇಶ್ ದೇವರಮನಿ ಬ್ಲಾಕ್ ಕಾಂಗ್ರೆಸ್ ಉಪಧ್ಯಕ್ಷರು, ಅಜಮ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳು, ಮಹಮದ್ ಆಶೀಪ್ ಯುವ ಕಾಂಗ್ರೆಸ್ ಗಂಗಾವತಿ, ದಲಿತ ಹಿರಿಯ ಮುಖಂಡರಾದ ಬೋಜಪ್ಪ, ಬಸವರಾಜ್,ರವಿ ಬಾಬು ಆರತಿ, ಭೀಮಣ್ಣ ಕರಿಮೊತಿ, ಹುಸೇನಪ್ಪ ಕಲ್ಮನಿ, ಯಲ್ಲಮ್ಮ, ಈರಮ್ಮ, ಪ್ರಭಾವತಿ, ಹಾಗೂ ಕಾಂಗ್ರೆಸ್ ನ ಅನೇಕ ಕಾರ್ಯಕರ್ತರು,ಯುವಕರು ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.