Tribute to former minister Srirangadevarayalu
ಗಂಗಾವತಿ: ಮಾಜಿ ಸಚಿವ ಹಾಗೂ ಆನೆಗೊಂದಿ ರಾಜವಂಶಸ್ಥರಾದ ಶ್ರೀರಂಗದೇವರಾಯಲು ನಿಧನಕ್ಕೆ ಹಾಲುಮತ ಕುರುಬ ಸಮಾಜದ ವತಿಯಿಂದ ನಗರದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಬೀರಲಿಂಗೇಶ್ವರ ಕುರುಬರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ನಾಗೇಶಪ್ಪ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ ಮಾತನಾಡಿ, ಶ್ರೀರಂಗದೇವರಾಯಲು ಸರಳ ವ್ಯಕ್ತಿತ್ವದಿಂದ ಕನಕಗಿರಿ ಗಂಗಾವತಿ ಕ್ಷೇತ್ರದಲ್ಲಿ ಐದು ಭಾರಿ ಶಾಸಕರಾಗಿ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಸ್ವತಹ ಆಗಮಿಸಿ ಮಾಡುತ್ತಿದ್ದರು. ರಾಜವಂಶದಲ್ಲಿ ಜನಿಸಿದರೂ ಸರಳತೆಯಿಂದ ಜನರ ಕೆಲಸ ಮಾಡುತ್ತಿದ್ದರು ಎಂದು ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಮುಖಂಡರಾದ ಅಶೋಕಗೌಡ, ಲಕ್ಷö್ಮಣಗೌಡ, ದುರುಗಪ್ಪ ಆಗೋಲಿ, ಬೆಟದಪ್ಪ ಹುರಕಡ್ಲಿ, ಬೆಟದಪ್ಪ ಕಂಪ್ಲೆಪ್ಪ, ಪುಂಡಗೌಡ, ಮಲ್ಲಿಕಾರ್ಜುನ, ಯಮನೂರಪ್ಪ, ಶಿವಪ್ಪ, ಶಿವಬಸವನಗೌಡ, ಶರಣಪ್ಪ, ರಾಮಕೃಷ್ಣ, ಬಿ.ರಾಮಣ್ಣ, ಬಿ.ಶರಣಪ್ಪ, ಚಂದ್ರಶೇಖರ ಜಂಗತಲ್ ವೆಂಕಟೇಶ ಸೇರಿ ಅನೇಕರಿದ್ದರು.
ಬಾಕ್ಸ್
ಭೂಮಿಪೂಜೆ ಮುಂದೂಡಿಕೆ
ಗAಗಾವತಿ: ಮಾಜಿ ಸಚಿವ ಶ್ರೀರಂಗದೇವರಾಯಲು ನಿಧನ ನಿಮಿತ್ತ ಆ.೨೩ ರಂದು ಬುಧವಾರ ಹಮ್ಮಿಕೊಂಡಿದ್ದ ಶ್ರೀಬೀರಲಿಂಗೇಶ್ವರ ದೇವಾಲಯ ನಿರ್ಮಾಣದ ಭೂಮಿಪೂಜಾ ಕಾರ್ಯಕ್ರಮವನ್ನು ಆ.೨೪ ಕ್ಕೆ ಮುಂದೂಡಲಾಗಿದೆ ಎಂದು ಸಮಾಜದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಟೋ೨೨-ಜಿವಿಟಿ-೦೨
ಗಂಗಾವತಿ: ಶ್ರೀರಂಗದೇವರಾಯಲು ಅವರಿಗೆ ಹಾಲುಮತದವರಿಂದ ಶ್ರದ್ಧಾಂಜಲಿ ನುಡಿನಮನ ಸಲ್ಲಿಸಲಾಯಿತು.