Breaking News

ನೂರಾರು ಕೋಟಿ ಬೆಲೆ ಬಾಳುವ ಬಿಡಿಎ ಆಸ್ತಿ ಡಿನೋಟಿಫಿಕೇಷನ್: ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಆರೋಪ

Denotification of BDA assets worth hundreds of crores: Allegation against former chief minister

ಜಾಹೀರಾತು
serious allegation former chief ministers kumaraswamy yediyurappa

ರಾಜ್ಯದಲ್ಲಿ ಮತ್ತೆ ಡಿನೋಟಿಫಿಕೇಷನ್ ಹಗರಣ ಸದ್ದು ಮಾಡುವ ಸೂಚನೆ ಸಿಕ್ಕಿದೆ. ಇದೀಗ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಬಿಎಸ್‌ ಯಡಿಯೂರಪ್ಪ ಅವರ ಹೆಸರು ಕೇಳಿಬಂದಿದ್ದು, ಬೆಂಗಳೂರಿನ ಹೃದಯಭಾಗದಲ್ಲಿರುವ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಾಗವನ್ನು ಹೆಚ್‌ಡಿಕೆ ಮತ್ತು ಬಿಎಸ್‌ವೈ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಿನ.ಕಾಂ ನ್ಯೂಸ್‌ ವೆಬ್‌ಸೈಟ್ ಈ ಬಗ್ಗೆ ದಾಖಲೆ ಸಮೇತ ವರದಿ ಮಾಡಿದೆ.

೨೦೦೭ರಲ್ಲಿ ಬಿಜೆಪಿ ಜೊತೆಗೂಡಿ ಹೆಚ್‌ಡಿ ಕುಮಾರಸ್ವಾಮಿ ೨೦-೨೦ ರ‍್ಕಾರ ರಚನೆ ಮಾಡಿದ್ದ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಬಿಡಿಎ ಸ್ವತ್ತನ್ನು ಗುಳುಂ ಮಾಡಲು, ಹೆಚ್‌ಡಿ ಕುಮಾರಸ್ವಾಮಿ ಪ್ರಯತ್ನ ಮಾಡಿದ್ದು, ಕೊನೆಗೆ ಅದು ಬಿಎಸ್‌ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಪ್ರಯತ್ನ ಯಶಸ್ವಿಯಾಗಿದೆ.
ಹಗರಣ ಶುರುವಾಗಿದ್ದು ಹೀಗೆ ೨೦೦೭ರಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಶೇಖರಯ್ಯ ಎನ್ನುವವರು ರ‍್ಜಿ ಕೊಡುವ ಮೂಲಕ, ಹಗರಣದ ಅಧ್ಯಾಯ ಶುರುವಾಗುತ್ತದೆ. ೨೦೦೭ರ ಆಗಸ್ಟ್ ೨೨, ರಾಜಶೇಖರಯ್ಯ ಹೆಸರಿನ ವ್ಯಕ್ತಿಯೊಬ್ಬ ಬೆಂಗಳೂರಿನ ಗಂಗೇನಹಳ್ಳಿ (ಗಂಗಾನಗರ)ದಲ್ಲಿರುವ ನಮ್ಮ ಕುಟುಂಬಕ್ಕೆ ಸೇರಿದ ೧ ಎಕರೆ ೧೧ ಗುಂಟೆ ಜಮೀನನ್ನು ಬಿಡಿಎ ಒತ್ತುವರಿ ಮಾಡಿಕೊಂಡಿದ್ದು, ಡಿ ನೋಟಿಫಿಕೇಷನ್ ಮಾಡಿಕೊಡಬೇಕು ಎಂದು ಸಿಎಂ ಕಚೇರಿಗೆ ರ‍್ಜಿ ಕೊಡುತ್ತಾರೆ. ಅಚ್ಚರಿ ಎಂದರೆ ಅದೇ ದಿನ ಸಿಎಂ ಆಗಿದ್ದ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಸೆಕ್ರೆಟರಿಯಾಗಿದ್ದ ರಾಕೇಶ್ ಸಿಂಗ್ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಪ್ರಧಾನ ಕರ‍್ಯರ‍್ಶಿ ಸಿಎಂ ಪರವಾಗಿ ಪತ್ರ ಬರೆದು ಬೆಂಗಳೂರು ನಗರದ ಮೇಕ್ರಿ ರ‍್ಕಲ್ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಗಂಗೇನಹಳ್ಳಿ (ಗಂಗಾನಗರ) ೭/೧ಬಿ, ೭/೧ಸಿ, ೭/೧ಡಿ ಮೂರು ರ‍್ವೆ ನಂಬರ್ ಗಳ ಒಟ್ಟು ೧.೧೧ ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ, ಮನವಿಯನ್ನು ಪರಿಶೀಲನೆ ಮಾಡಿ ಇಲಾಖೆ ಅಭಿಪ್ರಾಯದೊಂದಿಗೆ ಮುಖ್ಯಮಂತ್ರಿಯವರ ಅವಗಾಹನೆ/ಆದೇಶಕ್ಕೆ ಮಂಡಿಸುವಂತೆ ನರ‍್ದೇಶನ ನೀಡಲಾಗಿತ್ತು.

ಮೂಲತಃ ಜಿ. ತಿಮ್ಮಾರೆಡ್ಡಿ, ಟಿ. ನಾಗಪ್ಪ, ಮುನಿಸ್ವಾಮಪ್ಪ ಮೂವರ ಹೆಸರಿನಲ್ಲಿ ತಲಾ ೧೭ ಗುಂಟೆಯಂತೆ ಒಟ್ಟು ೧ ಎಕರೆ ೧೧ ಗುಂಟೆ ಜಮೀನು ಮೂಲ ಮಾಲೀಕತ್ವ ಹೊಂದಿದ್ದು, ಬಳಿಕ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು.
ಈ ಜಮೀನು ಪ್ರತಿಷ್ಠಿತ ಎಂಎಲ್‌ಎ ಬಡಾವಣೆಗೆ ಹೊಂದಿಕೊಂಡಂತಿದೆ. ಚನ್ನಪಟ್ಟಣ ಟಿಕೆಟ್‌ಗಾಗಿ ಕಮಲ-ದಳ ನಾಯಕರ ಫೈಟ್;‌ ನನಗೆ ಟಿಕೆಟ್‌ ಎಂದ ಸಿಪಿವೈ: ನಿಖಿಲ್‌ ಏನಂದ್ರು? ೧೬-೦೩-೧೯೭೬ರಲ್ಲಿ ಬಿಡಿಎ ಬಡಾವಣೆ ನರ‍್ಮಾಣಕ್ಕಾಗಿ ಪ್ರಾಥಮಿಕ ಅಧಿಸೂಚನೆ ನೀಡಿದ್ದರು. ರ‍್ವೆ, ಪರಿಹಾರ ಮೊತ್ತ ನಿಗದಿ ಸೇರಿ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ೧೯೭೭ ಡಿಸೆಂಬರ್ ೮ರಂದು ಗೆಜೆಟ್‌ನಲ್ಲಿ ಪ್ರಕಟವಾಗುತ್ತದೆ. ಹಲವರು ಈ ಜಮೀನು ನಮಗೆ ಸೇರಿದ್ದು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು, ೧೨ ರ‍್ಷಗಳ ವಿಚಾರಣೆ ಬಳಿಕ ೨೧-೦೪-೧೯೮೮ ರಲ್ಲಿ ಭೂಸ್ವಾಧೀನ ಕಾಯ್ದೆ ಸೆಕ್ಷನ್ ೧೬/೨ರ ಅಡಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ.
(ಸೆಕ್ಷನ್ ೧೬/೨ ರ ಪ್ರಕಾರ ಯಾವುದೇ ತಕರಾರು, ಋಣಭಾರ ಇಲ್ಲದೆ ಸ್ವತ್ತು ಸಂಪರ‍್ಣವಾಗಿ ರ‍್ಕಾರದ ಒಡೆತನದಲ್ಲಿದೆ ಎಂರ‍್ಥ). ಅಂತಿಮ ಅಧಿಸೂಚನೆಯ ೧೯ ರ‍್ಷಗಳ ಬಳಿಕ ೨೦೦೭ರಲ್ಲಿ ಡಿನೋಟಿಫಿಕೇಷನ್ ಫೈಲ್ ಅನ್ನು ಯುಡಿಡಿ ೪೨೪ ಬೆಂಗಳೂರು ಭೂಸ್ವಾಧೀನ ೨೦೦೭ ಅನ್ನುವ ನಂಬರ್ ಸೃಷ್ಟಿಸಿ ಮಾಡಿ, ಈ ಕೂಡಲೇ ದಾಖಲೆ ಸಿದ್ದಪಡಿಸಲು ಅಧಿಕಾರಿಗಳಿಗೆ ಆಗಿನ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಸೂಚನೆ ಕೊಡುತ್ತಾರೆ.
ಚನ್ನಪಟ್ಟಣ ಉಪಚುನಾವಣೆ: ಬಿಜೆಪಿ ನಡೆಸಿದ ಸಮೀಕ್ಷೆಯಲ್ಲಿ ಯಾರಿಗೆ ಜಯ? ಯಾರಿಗೆ ಸಿಗಲಿದೆ ಟಿಕೆಟ್?‌ ದಾಖಲೆಗಳನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು ಡಿನೋಟಿಫಿಕೇಶನ್ ಸಾಧ್ಯವಿಲ್ಲ ಎಂದು ವರದಿ ನೀಡುತ್ತಾರೆ, ಆದರೆ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಅಧಿಕಾರಿಗಳಿಗೆ ಪತ್ರ ಬರೆದು ಜಮೀನನನ್ನು ವಾಸ್ತವಿಕವಾಗಿ ಸ್ವಾಧೀನಕ್ಕೆ ಪಡೆಯಲಾಗಿದೆಯಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ರ‍್ಜಿದಾರ ರಾಜಶೇಖರಯ್ಯ ಮತ್ತು ಬಿಡಿಎಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ಸೂಚನೆ ಕೊಡುತ್ತಾರೆ. ನಗರಾಭಿವೃದ್ಧಿ ಇಲಾಖೆ ಕರ‍್ಯರ‍್ಶಿಯಾಗಿದ್ದ ಜ್ಯೋತಿ ರಾಮಲಿಂಗಂ ಇದು ಡಿ ನೋಟಿಫಿಕೇಷನ್ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸುತ್ತಾರೆ. ೯-೧೦-೨೦೦೭ರಲ್ಲಿ ಹೆಚ್‌ಡಿ ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರೆ. ಬಿಎಸ್‌ ಯಡಿಯೂರಪ್ಪ ಅವಧಿಯಲ್ಲಿ ಮುನ್ನಲೆಗೆ ೨೦೦೮ ಸಿಎಂ ಆಗಿ ಬಿಎಸ್‌ವೈ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣಕ್ಕೆ ಮತ್ತೆ ಜೀವ ಬರುತ್ತದೆ. ಇಬ್ಬರು ಅಷ್ಟು ದ್ವೇಷ, ಆಕ್ರೋಶದಲ್ಲಿ ಮಾತನಾಡಿದರೂ ಯುಡಿಡಿ ೪೨೪ ಬೆಂಗಳೂರು ಭೂಸ್ವಾಧೀನ ೨೦೦೭ ಫೈಲ್‌ಗೆ ಜೀವ ಬರುತ್ತದೆ. ಬಿಎಸ್‌ವೈ ಕರ‍್ಯರ‍್ಶಿಯಾಗಿದ್ದ ಬಿ.ಜಿ. ನಂದಕುಮಾರ್ ನಗರಾಭಿವೃದ್ಧಿ ಇಲಾಖೆ ಪತ್ರ ಬರೆದು ಕಡತ ಸಂಖ್ಯೆ ಯುಡಿಡಿ ೪೨೪ ಬೆಂಗಳೂರು ಭೂಸ್ವಾಧೀನ ೨೦೦೭ರ ಸ್ಪಷ್ಟ ಮಾಹಿತಿ ಮತ್ತು ಅಭಿಪ್ರಾಯದೊಂದಿಗೆ ಮುಖ್ಯಮಂತ್ರಿ ಅವಗಾಹನೆಗೆ ಕಳಿಸಿಕೊಡಲು ಆದೇಶ ನೀಡಲಾಗಿದೆ ಎಂದು ಪತ್ರ ಬರೆಯುತ್ತಾರೆ.
೨೦೦೧ರಲ್ಲೇ ಫೈಲ್ ಕ್ಲೋಸ್ ಮಾಡಿ ರ‍್ಕಾರಕ್ಕೆ ವಶಪಡಿಸಿಕೊಂಡಿದ್ದು ದಾಖಲೆ ಲಭ್ಯವಿರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಾರೆ. ಆದರೂ ಬಿಎಸ್‌ವೈ ಸುಮ್ಮನೆ ಕೂರುವುದಿಲ್ಲ, ಭೂಸ್ವಾಧೀನದಿಂದ ಕೈಬಿಡಲು ಆದೇಶಿಸಿದೆ ಎಂದು ಒಂದೇ ಸಾಲಿನಲ್ಲಿ ಆದೇಶ ಹೊರಡಿಸುತ್ತಾರೆ. ಜೂನ್ ೫ ರಂದು ಅವರು ಸಹಿ ಹಾಕಿದ ಬಳಿಕ ಜೂನ್ ೭ರಂದು ರ‍್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗುತ್ತದೆ. ಭೂಸ್ವಾಧೀನವನ್ನು ಕೈಬಿಡಲಾಗಿದೆ ಎಂದು ಆದೇಶ ನೀಡಲಾಗುತ್ತೆ. ಸಮೂಹ ವಸತಿ ಸಮುಚ್ಛಯ ಕಟ್ಟಲು ಕಾಯ್ದಿರಿಸಿದ್ದ ಜಮೀನು ಆಗಿದ್ದ ಕಾರಣ ಯೋಜನೆಯನ್ನೇ ರದ್ದು ಮಾಡಲಾಗಿತ್ತು. ಹೆಚ್‌ಡಿ ಕುಮಾರಸ್ವಾಮಿಗೆ ಲಾಭ ಏನು? ಪ್ರಕರಣದ ಅಸಲಿ ಸಂಗತಿ ತಿಳಿಯಬೇಕು ಎಂದರೆ, ಈ ಜಾಗದ ಮೇಲೆ ಯಾರ ಕಣ್ಣಿತ್ತು ಎನ್ನುವುದು ತಿಳಿಯಬೇಕು. ೨೨-೦೮-೨೦೦೭ ರಲ್ಲಿ ಸಿಎಂ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ ೧೮ ದಿನಗಳ ಬಳಿಕ ೧೦-೦೯-೨೦೦೭ರಲ್ಲಿ ಈ ೧ ಎಕರೆ ೧೧ ಗುಂಟೆ ಜಮೀನು ಮೂಲ ಮಾಲೀಕರ ೨೧ ಜನ ವಾರಸುದಾರರಿಂದ ವಿಮಲ ಎನ್ನುವರರ ಹೆಸರಿಗೆ ರಿಜಿಸ್ಟರಡ್ ಜಿಪಿಎ ಆಗುತ್ತದೆ.
ಈ ವಿಮಲ ಬೇರೆ ಯಾರು ಅಲ್ಲ, ಹೆಚ್‌ಡಿ ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ತಾಯಿ. ಡಿನೋಟಿಫಿಕೇಶನ್ ರ‍್ಜಿ ರಾಜಶೇಖರಯ್ಯ ಮತ್ತಿತರರು ಎನ್ನುವ ಹೆಸರಿನಲ್ಲಿ ರ‍್ಜಿ ಸಲ್ಲಿಸಲಾಗಿದ್ದು, ಕೇವಲ ರಾಜಶೇಖರಯ್ಯ ಎನ್ನುವವರು ಮಾತ್ರ ಸಹಿ ಮಾಡಿದ್ದು, ಉಳಿದವರು ಯಾರು, ರಾಜಶೇಖರಯ್ಯನವರಿಗೂ ಜಮೀನು ಮೂಲ ಮಾಲೀಕರ ಕುಟುಂಬಕ್ಕೂ ಏನು ಸಂಬಂಧ ಎನ್ನುವ ಮಾಹಿತಿಯೇ ಇಲ್ಲ. ವಿಮಲ ಎನ್ನುವವರಿಗೆ ಜಿಪಿಎ ಕೊಟ್ಟಿರುವ ಜಮೀನು ವಾರಸುದಾರರಲ್ಲಿ ರಾಜಶೇಖರಯ್ಯ ಎನ್ನುವ ಹೆಸರಿನವರೇ ಇಲ್ಲ. ಇದೊಂದು ಬೇನಾಮಿ ರ‍್ಜಿಯಾಗಿದೆ ಎನ್ನುವುದು ಮತ್ತೊಂದು ಆರೋಪ. ೫-೬-೨೦೧೦ರಲ್ಲಿ ಜಿ. ತಿಮ್ಮಾರೆಡ್ಡಿ, ಟಿ. ನಾಗಪ್ಪ, ಮುನಿಸ್ವಾಮಪ್ಪ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದ್ದು, ಆ ಸಮಯದಲ್ಲಿ ಜಮೀನು ಮೂಲಕ ಮಾಲೀಕರು ಯಾರು ಜೀವಂತವಾಗಿರಲಿಲ್ಲ.
ಅದಾದ ಒಂದು ತಿಂಗಳ ಬಳಿಕ ಈ ಜಮೀನಿಗೆ ೫-೦೭-೨೦೧೦ ರಲ್ಲಿ ವಿಮಲ ಅವರಿಂದ ಟಿಎಸ್‌ ಚನ್ನಪ್ಪ ಹೆಸರಿಗೆ ಕ್ರಯಪತ್ರ ರಿಜಿಸ್ಟರ್ ಆಗುತ್ತದೆ.
ಈ ಟಿಎಸ್‌ ಚನ್ನಪ್ಪ ವಿಮಲ ಅವರ ಸ್ವಂತ ಮಗ, ಹೆಚ್‌ಡಿ ಕುಮಾರಸ್ವಾಮಿ ಅವರ ಬಾಮೈದ. ೨೦೧೫ರಲ್ಲಿ ಸಾಮಾಜಿಕ ಕರ‍್ಯರ‍್ತ ಜಯಕುಮಾರ್ ಹಿರೇಮಠ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದು. ಒಂದು ವಾರ ದಾಖಲೆಗಳ ಪರಿಶೀಲನೆ ಮಾಡಿದ ಬಳಿಕ, ಎಫ್‌ಐಆರ್ ರಿಜಿಸ್ಟರ್ ದಾಖಲಾಗುತ್ತದೆ. ಪ್ರಕರಣದಲ್ಲಿ ಎ೧ ಬಿಎಸ್‌ ಯಡಿಯೂರಪ್ಪ, ಎ೨ ಹೆಚ್‌ಡಿ ಕುಮಾರಸ್ವಾಮಿ, ಎ೩ ವಿಮಲ, ಎ೪ ಟಿಎಸ್‌ ಚನ್ನಪ್ಪ, ಎ೫ ರಾಜಶೇಖರಯ್ಯ ಎಂದು ನಮೂದಿಸಲಾಗಿದೆ. ೧೩/೧, ೧೩/೧ಡಿ, ೧೩/೨ ಸೆಕ್ಷನ್ ಐಪಿಸಿ ೪೨೦ ಸೆಕ್ಷನ್, ಐಪಿಸಿ ೪೦೯ (ವಿಶ್ವಾಸದ್ರೋಹ), ಐಪಿಸಿ ೪೧೮ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಡಿನೋಟಿಫಿಕೇಷನ್ ಆರೋಪದಲ್ಲಿ ಪ್ರಕರಣ ದಾಖಲಾಗಿ ೧೦ ರ‍್ಷವಾದರೂ ಈ ಪ್ರಕರಣ ಧೂಳು ಹಿಡಿಯುತ್ತಿದೆ. ಈ ಪ್ರಕರಣದ ಬಗ್ಗೆ ಒಂದು ನೋಟಿಸ್ ಕೊಟ್ಟಿಲ್ಲ, ವಿಚಾರಣೆ ಮಾಡಿಲ್ಲದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.