Breaking News

ದೆಹಲಿ ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ, ನೂತನ ರ‍್ಕಾರ ರಚನೆಗೆ ಹಕ್ಕು ಮಂಡಿಸಿದ ಅತಿಶಿ

Kejriwal’s resignation from the post of Delhi CM, Atishi claims to form a new government

ಜಾಹೀರಾತು
ಜಾಹೀರಾತು

ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಅತಿಶಿ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಆರು ತಿಂಗಳು ಜೈಲುವಾಸ ಮುಗಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಸಂಜೆ ಲೆಫ್ಟಿನೆಂಟ್ ಗರ‍್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿ ರಾಜೀನಾಮೆ ಸಲ್ಲಿಸಿದ್ದಾರೆ.

ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇಂದು ಸಂಜೆ ೪.೩೦ಕ್ಕೆ, ನಿಯೋಜಿತ ಮುಖ್ಯಮಂತ್ರಿ ಅತಿಶಿ ಸೇರಿದಂತೆ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ರಾಜಭವನಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು.

ನಂತರ ಅತಿಶಿ ಅವರು ಸಕ್ಸೇನಾ ಅವರನ್ನು ಭೇಟಿಯಾಗಿ, ದೆಹಲಿಯಲ್ಲಿ ಹೊಸ ರ‍್ಕಾರ ರಚಿಸಲು ಹಕ್ಕು ಮಂಡಿಸಿದರು ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ.
ಅತಿಶಿ ಅವರು ದೆಹಲಿ ಸಿಎಂ ಆಗುತ್ತಿರುವ ಮೂರನೇ ಮಹಿಳೆ ಮತ್ತು ಸಿಎಂ ಸ್ಥಾನ ಅಲಂಕರಿಸುತ್ತಿರುವ ಅತ್ಯಂತ ಕಿರಿಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದ ಮಮತಾ ಬ್ಯಾರ‍್ಜಿ ನಂತರ ಅತಿಶಿ(೪೩) ಅವರು ದೇಶದ ಎರಡನೇ ಪ್ರಸ್ತುತ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ.

ಅತಿಶಿ ಅವರಿಗಿಂತ ಮೊದಲು ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ದೆಹಲಿ ಮಹಿಳಾ ಮುಖ್ಯಮಂತ್ರಿಗಳಾಗಿದ್ದರು. ೧೯೯೮ ರಿಂದ ೨೦೧೩ ರವರೆಗೆ ೧೫ ರ‍್ಷಗಳ ಕಾಲ ಶೀಲಾ ದೀಕ್ಷಿತ್ ಅವರು ದೆಹಲಿ ಮುಖ್ಯಮಂತ್ರಿಯಾಗಿ ಸುದರ‍್ಘ ಸೇವೆ ಸಲ್ಲಿಸಿದ್ದರು. ಆದರೆ ಸ್ವರಾಜ್ ಅವರು ೧೯೯೮ ರಲ್ಲಿ ಕೇವಲ ೫೨ ದಿನಗಳ ಕಾಲ ಸಿಎಂ ಆಗಿದ್ದರು.

ದೀಕ್ಷಿತ್ ಅವರು ದೆಹಲಿಯ ಮುಖ್ಯಮಂತ್ರಿಯಾದಾಗ ಅವರಿಗೆ ೬೦ ರ‍್ಷವಾಗಿತ್ತು. ಸ್ವರಾಜ್ ಅವರು ೪೬ನೇ ವಯಸ್ಸಿನಲ್ಲಿ ಸಿಎಂ ಹುದ್ದೆಯನ್ನು ಅಲಂಕರಿಸಿದ್ದರು.

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.