Breaking News

ಕಾರಟಗಿ ನಗರಕ್ಕೆ ಆಗಮಿಸದಪಾದಯಾತ್ರೆ,ಕರ್ನಾಟಕ ರೈತ ಜನಸಂಘದರಾಜ್ಯಾಧ್ಯಕ್ಷರಾದ ವೀರನಗೌಡ ಮಾಲಿಪಾಟೀಲ್ ಸ್ವಾಗತಿಸಿದರು

Veerana Gowda Malipatil, State President of Karnataka Raitha Jan Sangh, welcomed the Padayatra, which did not arrive in the city of Karatagi.

ಜಾಹೀರಾತು

ಕಾರಟಗಿ , ಆ-17:ತುಂಗಭದ್ರ ಬೋರ್ಡನ್ನು ರಾಜ್ಯದಲ್ಲಿ ನಿರ್ಮಿಸಲು ಒತ್ತಾಯ.

ಕರ್ನಾಟಕ ರೈತ ಸಂಘದ ರಾಯಚೂರು ಜಿಲ್ಲಾ ಮಹಿಳಾ ಅಧ್ಯಕ್ಷರಾದ ಅನಿತಾ ಮಂತ್ರಿಯವರ ನೇತೃತ್ವದಲ್ಲಿ ಸಿರಿವಾರದಿಂದ ತುಂಗಭದ್ರಾ ಡ್ಯಾಮ್ ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಕಾರಟಗಿ ನಗರಕ್ಕೆ ಪಾದಯಾತ್ರೆ ಆಗಮಿಸಿತು.ಕರ್ನಾಟಕ ರೈತ ಜನ


ಸಂಘದ ರಾಜ್ಯಾಧ್ಯಕ್ಷರಾದ ವೀರನಗೌಡ ಮಾಲಿಪಾಟೀಲ್ ಪಾದಯಾತ್ರೆಯನ್ನು ಸ್ವಾಗತಿಸಿ ಬೆಂಬಲಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ತುಂಗಭದ್ರಾ ಡ್ಯಾಮಿನ 19ನೇ ಕ್ರಸ್ಟ್ ಗೇಟು ನೀರಿಗೆ ಕಿತ್ತು ಹೋಗಿದ್ದು, ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಗೆ ನೀರು ಸಿಗುವುದೋ ಇಲ್ಲವೋ ಎನ್ನುವ ಆತಂಕ ಶುರುವಾಗಿದೆ. ಮತ್ತು ರೈತರು ಬೆಳೆದ ಭತ್ತವೂ ಹಾಗೂ ಇನ್ನಿತರ ಬೆಳೆಗಳು ಏನಾಗಬಹುದು ಎನ್ನುವ ಆತಂಕದಲ್ಲಿದ್ದಾರೆ.

ಈ ವರ್ಷದಲ್ಲಿ ಒಳ್ಳೆಯ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಡ್ಯಾಮಿಗೆ ನೀರು ತುಂಬಿದ್ದರಿಂದ ಈ ವರ್ಷದಲ್ಲಿ ರೈತರು ಎರಡು ಬೆಳೆಗಳನ್ನು ಬೆಳೆಯಬಹುದು ಎನ್ನುವ ಖುಷಿಯಲ್ಲಿದ್ದರು. ಆದರೆ ಟಿಬಿ ಡ್ಯಾಮಿನ 19 ನೆ ಕ್ರಸ್ಟ್ ಗೇಟಿನ ಚೈನ್ ಲಿಂಕ್ ಕಳಚಿ ನೀರಿಗೆ ಕೊಚ್ಚಿ ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗಿದೆ.1953 ಇಸವಿಯಲ್ಲಿ ತುಂಗಭದ್ರ ಅಣೆಕಟ್ಟು ನಿರ್ಮಾಣವಾಗಿತ್ತು. ಅಲ್ಲಿಂದ 04 ಸಲ ದೊಡ್ಡ ದೊಡ್ಡ ಪ್ರಮಾದಗಳು ಕಾಣಿಸಿಕೊಂಡಿದ್ದವು. 1973 ರಲ್ಲಿ 19 ಮತ್ತು 32 ನೇ ಕ್ರೆಸ್ಟ್ ಗೇಟ್ ಗಳು ತುಕ್ಕು ಹಿಡಿದು ಜಾಮ್ ಆಗಿದ್ದವು, ಆ ಸಮಯದಲ್ಲಿ ಇದನ್ನು ಸರಿಪಡಿಸಲಾಯಿತು. ಈ ತೊಂದರೆಗಳು ಮುಂದಿನ ದಿನಗಳಲ್ಲಿ ಮತ್ತೆ ಕಾಣಿಸಬಹುದೆಂದು ಗಮನ ಹರಿಸದೆ ಅಲ್ಲಿನ ತುಂಗಭದ್ರಾ ಬೋರ್ಡಿನ ಹಾಗೂ ಕಾಡ ಅಭಿವೃದ್ಧಿ ಅಧಿಕಾರಿಗಳು ಇತ್ತಕಡೆ ಗಮನ ಕೊಡದೆ ಇದ್ದಾರಾ ಕಾರಣವಾಗಿ ಇಂದು ಇಂತ ದೊಡ್ಡ ದುರಂತಕ್ಕೆ ಕಾರಣವಾಗಿದ್ದಾರೆ. ಎಂದು ದೂರಿದರು.

ತುಂಗಭದ್ರ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಸುಮಾರು 90 ಹಳ್ಳಿಗಳು ಮುಳುಗಿವೆ, 55 ಸಾವಿರ ಜನ ಸ್ಥಳಾಂತರ ಗೊಂಡಿದ್ದಾರೆ. ಕರ್ನಾಟಕದಲ್ಲಿ ಈ ಅಣೆಕಟ್ಟು ಇದೆ, ಆದರೂ ಸಹ ಈ ತುಂಗಭದ್ರ ಅಭಿವೃದ್ಧಿ ಬೋರ್ಡ್ ಆಂಧ್ರಪ್ರದೇಶದಲ್ಲಿ ಇರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದರಿಂದ 17 ಗೇಟ್ ಗಳು ಅವರ ಕೈಯಲ್ಲಿ ಇದ್ದು ಇನ್ನುಳಿದ ಗೇಟ್ ಗಳು ನಮ್ಮ ಕರ್ನಾಟಕ ಕೈಯಲ್ಲಿದೆ ಆಂಧ್ರಪ್ರದೇಶದ ಅಧಿಕಾರಿಗಳು ತಮಗೆ ಯಾವಾಗ ಬೇಕು ಅವಾಗ ಗೇಟ್ಗಳನ್ನು ಎತ್ತಿ ನೀರು ಬಿಟ್ಟುಕೊಳ್ಳುತ್ತಿದ್ದಾರೆ ಆದರೆ ನಮ್ಮ ಕರ್ನಾಟಕದ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಅಂದಿನ ದಿನಗಳಲ್ಲಿ ಹೈದರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಎಂದು ಎರಡು ಭಾಗಗಳಿದ್ದವು. ಅಂತ ಸಂದರ್ಭದಲ್ಲಿ ತುಂಗಭದ್ರ ಬೋರ್ಡನ್ನು ಆಂಧ್ರಪ್ರದೇಶದಲ್ಲಿ ಸ್ಥಾಪಿಸಲಾಯಿತು.ಆದರೆ ಇಂದು ಸಂಪೂರ್ಣವಾಗಿ ಕರ್ನಾಟಕ ವಶವಾಗಿದ್ದರಿಂದ ತುಂಗಭದ್ರ ಬೋರ್ಡನ್ನು ಕರ್ನಾಟಕದಲ್ಲಿ ಹೊಸಪೇಟೆ ಭಾಗದಲ್ಲಿ ನಿರ್ಮಿಸಬೇಕೆಂದು ಹೇಳಿದರು.
19ನೇ ಕ್ರೆಸ್ಟ್ ಗೇಟ್ ಕಳಚಿದ ಸಂದರ್ಭದಲ್ಲಿ ಖುದ್ದಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾದ ಶಿವರಾಜ್ ತಂಗಡಿಗಿಯವರು ಹಾಗೂ ಜಮೀರ್ ಅಹ್ಮದ್ ಖಾನ್ ಮತ್ತು ಸಂಸದ ರಾಜಶೇಖರ್ ಇಟ್ನಾಳ್ ಹಗಲೆರಳು ಇವರು ಅಲ್ಲೇ ಇದ್ದು ಕೆಲಸ ಮಾಡಿಸಿದ್ದಾರೆಂದು ಹೇಳಿದರು. ಇವಾಗ 19ನೇ ಕ್ರಸ್ಟ್ ಗೇಟ್ನಾ 5 ಎಲಿಮೆಂಟರಿಗಳಲ್ಲಿ ಒಂದನ್ನು ಸುಲಭವಾಗಿ ಇಳಿಸಿದ್ದಾರೆ. ಇನ್ನುಳಿದ ಲಿಮೆಂಟಲ್‌ಗಳನ್ನು ಆದಷ್ಟು ಬೇಗನೆ ಇಳಿಸಿ ನೀರನ್ನು ಪೋಲಾಗದಂತೆ ತಡೆಯುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ರೈತರು ಎರಡು ಬೆಳೆಗಳನ್ನು ಬೆಳೆದ ನಂತರ ಈ ಗೇಟ್ ಗಳ ದುರಸ್ತಿ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸಿದರು.

ಕಾಡ ಅಭಿವೃದ್ಧಿ ಸಮಿತಿಯು ನಮ್ಮ ರಾಜ್ಯದಲ್ಲಾಗಬೇಕು. ತುಂಗಭದ್ರ ಬೋರ್ಡ್ ನಮ್ಮ ಜಿಲ್ಲೆಯಲ್ಲಿ ಆಗಬೇಕು. ನಮ್ಮ ರಾಜ್ಯದಲ್ಲಿ ಐಸಿಸಿ ಮೀಟಿಂಗ್ಗಳ ನಡೆಯಬೇಕು. ಎಲ್ಲಾ ಕ್ರಸ್ಟ್ ಗೇಟುಗಳ ದುರಸ್ತಿಕಾರಿ ಆಗಬೇಕು.ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಬೇಕೆಂದು ಒತ್ತಾಯ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಶರಣಪ್ಪ ದೊಡ್ಮನೆ , ಹಾಗೂ ಇನ್ನಿತರ ಪಾದದಿಕಾರಿಗಳು ಇದ್ದರೂ.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.