On September 22nd and 23rd, a massive free eye surgery camp led by the Lions Club,
ಗಂಗಾವತಿ 13,, ಲಯನ್ಸ್ ಕ್ಲಬ್ ಗಂಗಾವತಿ, ಭಾರತೀಯ ವೈದ್ಯಕೀಯ ಸಂಘ, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಕೊಪ್ಪಳ, ಇವರ ಸಹಯೋಗದೊಂದಿಗೆ ಇದೇ ದಿನಾಂಕ 22 ಹಾಗೂ 23 ರಂದು, ಉಚಿತ ನೇತ್ರ ಶಸ್ತ್ರ ಚಿಕಿತಾ ಶಿಬಿರವನ್ನು,ಆಯೋಜಿಸಲಾಗಿದೆ ಎಂದು, ಲಯನ್ಸ್ ಕ್ಲಬ್ ಡಾಕ್ಟರ್ ಅಮರೇ ಶ್ ಪಾಟೀಲ್, ಹಾಗೂ ಕಾರ್ಯದರ್ಶಿ ರವಿ ಚೈತನ್ಯ ರೆಡ್ಡಿ, ಹೇಳಿದರು, ಅವರು ಬುಧವಾರದಂದು ಕ್ಲಬ್ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ, ಉಚಿತ, ನೇತ್ರ ಶಸ್ತ್ರಚಿಕಿತಾ ಶಿಬಿರವನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ ಅವರು, ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೇವಾಶ್ರಮ ನೇತ್ರ ಶಸ್ತ್ರ ಚಿಕಿಸ್ತಾ ಶಿಬಿರವನ್ನು ನಡೆಸಿಕೊಡಲಿದ್ದಾರೆ, ಸರ್ಕಾರದ ನಿಯಮಾವಳಿಯಂತೆ 250 ಜನರಿಗೆ, ಅವಕಾಶ ಕಲ್ಪಿಸಲಾಗಿದ್ದು, ಶಿಬಿರಕ್ಕೆ ಆಗಮಿಸುವ ಫಲಾನುಭವಿಗಳು, ತಮಗೆ ಇರುವ ಬಿಪಿ, ಸಕ್ಕರೆ ಕಾಯಿಲೆ, ತಪಾಸನೇಯ ಪ್ರಮಾಣ ಪತ್ರವನ್ನು, ತೆಗೆದುಕೊಂಡು ಲಯನ್ಸ್ ಕ್ಲಬ್ ಹಾಗೂ ಭಾರತೀಯ ವೈದ್ಯಕೀಯ ಭವನಕ್ಕೆ ಆಗಮಿಸಿ, ತಪಾಸಣೆ ಗೊಂಡ ಬಳಿಕ ಸಾರ್ವಜನಿಕ ಉಪ ವಿಭಾಗದ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗುವುದು, ಜೊತೆಗೆ ಔಷಧಿ, ಕನ್ನಡಕ, ಫಲಾನುಭವಿ ಜೊತೆಗೆ ಆಗಮಿಸುವರಿಗೆ ವ್ಯಕ್ತಿ ಅವರಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು, ಕಾರ್ಯದರ್ಶಿ ರವಿ ಚೈತನ್ಯ ರೆಡ್ಡಿ ಮಾತನಾಡಿ, ಪ್ರಸ್ತುತ ದುಬಾರಿ ವೈದ್ಯಕೀಯ ವೆಚ್ಚದಲ್ಲಿ 15 ರಿಂದ 20 ಸಾವಿರ ವೆಚ್ಚ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಬರಿಸಲಾಗುತ್ತಿದ್ದು, ಪ್ರಯುಕ್ತ ಬಡವರಿಗೆ, ಉಚಿತವಾಗಿ ನಡೆಸಲಾಗುತ್ತದೆ ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು,, ಈ ಸಂದರ್ಭದಲ್ಲಿ ಕ್ಲಬ್ಬನ ಸದಸ್ಯರುಗಳಾದ ಜೀವನ್ ಕುಮಾರ್, ಬಾಬಣ್ಣ, ರಾಘವೇಂದ್ರ ಸಿರಿಗೇರಿ, ಚೇತನ ಹಿರೇಮಠ್, ಚಂದ್ರೇಗೌಡ ಜಗನ್ನಾಥದಾಸ್ ಇತರರು ಉಪಸ್ಥಿತರಿದ್ದರು ,