Breaking News

ವಕೀಲರಿಗೆಲೋಕಾಯುಕ್ತ ಕಾಯ್ದೆಯ ಬಗ್ಗೆ ಉಪನ್ಯಾಸ

Lecture on Lokayukta Act for lawyers

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ವಕೀಲರ ಪಾತ್ರ ಅತ್ಯವಶ್ಯಕ: ನ್ಯಾ ಕೆ.ಎನ್. ಫಣೀಂದ್ರ

ಕೊಪ್ಪಳ ಅಕ್ಟೋಬರ್ 09 (ಕರ್ನಾಟಕ ವಾರ್ತೆ): ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ವಕೀಲರ ಪಾತ್ರ ಅತ್ಯವಶ್ಯಕವಾಗಿದೆ ಎಂದು ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾ. ಕೆ.ಎನ್. ಫಣೀಂದ್ರ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿರುವ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಅಕ್ಟೋಬರ್ 09ರಂದು ಹಮ್ಮಿಕೊಂಡಿದ್ದ “ವಕೀಲರಿಗೆ ಲೋಕಾಯುಕ್ತ ಕಾಯ್ದೆಯ ಬಗ್ಗೆ ಉಪನ್ಯಾಸ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟ ಸಂದರ್ಭದಿಂದಲು ವಕೀಲರಿಂದ ದೇಶ ಕಟ್ಟುವ ಕೆಲಸವಾಗಿದೆ. ನ್ಯಾಯದಾನ ದೇವರ ಕೆಲಸವಾಗಿದ್ದು, ಈ ಕೆಲಸಕ್ಕೆ ದೇವರು ವಕೀಲರನ್ನು ಆಯ್ಕೆ ಮಾಡಿದ್ದಾನೆ. ಕಾನೂನುಗಳು, ಶಾಸನಗಳು, ನಿಯಮಗಳನ್ನು ರಚಿಸುವಂತಹ ಕೆಲಸ ಶಾಸಕಾಂಗದ್ದಾಗಿದೆ. ಅವಶ್ಯಕತೆಯಿಲ್ಲದ ನಿಯಮಗಳನ್ನು ಅಥವಾ ಕಾನೂನುಗಳನ್ನು ತೆಗೆದು ಹಾಕಲು ಸರ್ಕಾರದ ಗಮನ ತರುವ ಕೆಲಸವನ್ನು ಕಾನೂನು ಅರಿವು ಇರುವ ವ್ಯಕ್ತಿಗಳು ಹಾಗೂ ವಕೀಲರು ಮಾಡುತ್ತಾರೆ. ವಕೀಲರು ಕಾನೂನು ವಿಶ್ಲೇಷಣೆ ಮಾಡುತ್ತಾರೆ. ಸಾರ್ವಜನಿಕ ಅಭಿವೃದ್ಧಿಗೆ, ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಸಮರ್ಪಕ ಅನುಷ್ಠಾನ ಮಾಡುವುದು ಕಾರ್ಯಾಂಗದ ಕರ್ತವ್ಯ. ಸರ್ಕಾರದ ಸೇವೆ ಪಡೆಯಲು ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಅಥವಾ ತೊಂದರೆ ಉಂಟಾದಲ್ಲಿ ಅವರಿಗೆ ನ್ಯಾಯ ದೊರಕಿಸಿಕೊಡಲು ವಕೀಲರು ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಿದರು.
`ಸರ್ವರಿಗೂ ಸಮ ಬಾಳು, ಸಮಪಾಲು’ ಎನ್ನುವ ಆಶಯದಡಿ ಎಲ್ಲರಿಗೂ ನ್ಯಾಯಾ ಒದಗಿಸುವುದು ನ್ಯಾಯಾಲಯದ ಧಯೋದ್ದೇಶವಾಗಿದೆ. ಸಾಮಾಜಿಕ ಜೀವನದಲ್ಲಿ ತೊಂದರೆಗೊಳಗಾದ ಸಾರ್ವಜನಿಕಕರಿಗೆ ನ್ಯಾಯ ಒದಗಿಸುವಲ್ಲಿ ವಕೀಲರ ಕಾರ್ಯ ಮಹತ್ವದ್ದು. ಲೋಕಾಯುಕ್ತ ಸಂಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೆ ಲೋಕಾಯುಕ್ತ ಸಂಸ್ಥೆಯೊಂದಿಗೂ ವಕೀಲರು ಕೈಜೊಡಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಸಹಕರಿಸಬೇಕು ಎಂದರು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ್ ಸಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ ಕಣವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತದ ವಿಚಾರಣಗಳ ಹೆಚ್ಚುವರಿ ನಿಂಬಂಧಕರಾದ ಸುದೇಶ ರಾಜಾರಂ ಪರದೇಶಿ, ಕರ್ನಾಟಕ ಲೋಕಾಯುಕ್ತದ ವಿಚಾರಣಗಳ ನಿಂಬಂಧಕರಾದ ಎಂ.ವಿ ಚೆನ್ನಕೇಶವ ರೆಡ್ಡಿ, ಗೌರವಾನ್ವಿತ ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳಾದ ಕಿರಣ ಪ್ರಹ್ಲಾದರಾವ್ ಮುತಾಲಿಕ್ ಪಾಟೀಲ, ಕೊಪ್ಪಳ ತ್ವರಿತಗತಿ ವಿಶೇಷ ಪೋಕ್ಸೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕುಮಾರ ಡಿ.ಕೆ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಭವಾನಿ ಎಲ್.ಜೆ., ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಹರೀಶ ಕುಮಾರ ಎಂ., ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಆಸೀಫ್ ಅಲಿ, ಜಿಲ್ಲಾ ಸರ್ಕಾರಿ ವಕೀಲರಾದ ರಾಜಶೇಖರ ಗಣವಾರಿ, ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಅಪರ್ಣಾ ಬಂಡಿ, ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ, ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಎಸ್.ಎಂ. ಮೆಣಸಿನಕಾಯಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ದಿವಾಕರ್ ಜಿ ಬಾಗಲಕೋಟೆ, ಕಾರ್ಯದರ್ಶಿಗಳಾದ ಬಿ.ವಿ ಸಜ್ಜನ್, ಜಂಟಿ ಕಾರ್ಯದರ್ಶಿಗಳಾದ ಎಲ್.ಹೆಚ್ ಹಿರೇಗೌಡ್ರು, ಖಜಾಂಜಿ ಸಿ.ಎಂ ಪೋಲೀಸ್ ಪಾಟೀಲ್, ಜಿಲ್ಲಾ ವಕೀಲರ ಸಂಘದ ಮಹಿಳಾ ಪ್ರತಿನಿಧಿಗಳಾದ ಪುಷ್ಪಾ ಬೇವೂರು ಸೇರಿದಂತೆ ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಕೀಲರಾದ ಸುರೇಶ ಹಳ್ಳಿಗುಡಿ ಕಾರ್ಯಕ್ರಮ ನಿರೂಪಿಸಿದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.