Breaking News

ನಾಯಿ ಹಾವಳಿಗೆ ವಯೋ ವೃದ್ಧರು ರಸ್ತೆಗಳಲ್ಲಿಓಡಾಡುವಾಗ ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ನಿರ್ಮಾಣ”

IMG 20250124 WA0151

ಪಟ್ಟಣದಲ್ಲಿ ಎಲ್ಲೆಡೆ ಸ್ವಾನಗಳ. ಹಾವಳಿ ,ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ

ಜಾಹೀರಾತು

ಕೊಟ್ಟೂರು ಪಟ್ಟಣದ ವಿಚಾರಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸ್ನಾನಗಳ ಹಾವಳಿ ಹೆಚ್ಚಾಗುತ್ತಿದೆ ಆದರೆ ಪಟ್ಟಣ ಪಂಚಾಯಿತಿ ಯಿಂದ ಜಾಣ ಕುರುಡು ಪ್ರದರ್ಶನ ಮುಂದುವರಿದಿದೆ.

ಮುಖ್ಯವಾಗಿ ಪುಟ್ಟರಾಜು ಬಡಾವಣೆ, ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆ, ಬಸವೇಶ್ವರ ಬಡಾವಣೆ, ಮುದುಕನ ಕಟ್ಟೆ, ಕೆಳಗೇರಿ ರಾಜೀವ ನಗರ ನಾಯಿ ಗಳ ಹಾವಳಿ ಬಹಳವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು ಸಣ್ಣ ಮಕ್ಕಳು ರಸ್ತೆಯಲ್ಲಿ ಆಟ ಆಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯ ನಾಗರಿಕರು ವಯೋ ವೃದ್ಧರು ರಸ್ತೆಗಳಲ್ಲಿ ಓಡಾಡುವಾಗ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ಬಂದೊದಗಿದೆ.

ನಾಯಿಗಳ ಹಾವಳಿಯ ಬಗ್ಗೆ ಸಾರ್ವಜನಿಕರು ಹಲವಾರು ಸಂಘ ಸಂಸ್ಥೆಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ.

ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್‌ಗಳ ಮೂಲಕ ಅಲ್ಲಲ್ಲಿ ನಾಯಿಗಳು ಆಟವಾಡುತ್ತಿರುವ ಮಕ್ಕಳ ಮೇಲೆ. ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳುವ ಮಹಿಳೆಯರು, ಹಿರಿಯ ನಾಗರಿಕರಿಗೆ ತೊಂದರೆ ಕೊಡುತ್ತಾ ಹಲ್ಲೆ ಆಗಿರುವ ಘಟನೆಗಳು ಈ ಹಿಂದೆ ನಡೆದಿವೆ ಮುಂದಿನ ದಿನಗಳಲ್ಲಿ ನಡೆದಂತೆ ಕ್ರಮವಹಿಸುವಂತೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರಾದ ಹಿರಿಯ ನಾಗರಿಕರ ಮಹಾಂತೇಪ್ಪ, ಮಂಜುನಾಥ್ ,  ಮಂಡಕ್ಕಿ ಪ್ರಕಾಶ್,ಶಫೀ ಪತ್ರಿಕೆಗೆ ತಿಳಿಯಪಡಿಸಿದ್ದಾರೆ.

ಕೊಟ್ -1
ಕೊಟ್ಟೂರು ಪಟ್ಟಣದ್ಯಂತ ಒಂದು ಅಂದಾಜನ ಪ್ರಕಾರ  500 ರಿಂದ 600ಕ್ಕೂ ಹೆಚ್ಚು ನಾಯಿಗಳಿದ್ದು ಹಲವಾರು ಬಡಾವಣೆಗಳಲ್ಲಿ ಇವುಗಳ ತೊಂದರೆ ಬಹಳ ಮಿತಿಮೀರಿ ಹೋಗಿದೆ ಈ ಹಿಂದೆ ಹಲವಾರು ಮಕ್ಕಳಿಗೆ. ಯುವಕರಿಗೆ ವೃದ್ಧರಿಗೆ ಕಚ್ಚಿ ಬಹಳಷ್ಟು ತೊಂದರೆ ಕೊಡುತ್ತಿವೆ ಕೆಲವರು ಪಟ್ಟಣ ಪಂಚಾಯಿತಿ ಸದಸ್ಯರ ಬಳಿ ದೂರುತ್ತಾರೆ.ಕೆಲವರು ದೂರಿದರೂ ಪ್ರಯೋಜನ ವಿಲ್ಲ ಎಂದು ತಮ್ಮ ಪಾಡಿಗೆ ತಾವು ಚಿಕಿತ್ಸೆಯನ್ನ ಮಾಡಿಸಿಕೊಳ್ಳುತ್ತಾರೆ.

ಪಟ್ಟಣ ಪಂಚಾಯಿತಿ ಸದಸ್ಯರುಗಳು ತಮ್ಮ ವಾರ್ಡ್ಗಳಲ್ಲಿ ಓಡಾಡುವುದೇ ತೊಂದರೆಯಾಗಿದೆ ಹಲವಾರು ರೀತಿಯಲ್ಲಿ ಬೈಗುಳ ತಿನ್ನಬೇಕಾಗಿದೆ .ಪಟ್ಟಣ ಪಂಚಾಯಿತಿ  ದೂರಿದರೆ ಅಧಿಕಾರಿಗಳಿಂದ ಯಾವುದೇ ಕ್ರಮ ಇಲ್ಲ ಇದರಿಂದ ಸಾರ್ವಜನಿಕರು ಹಾಗೂ ಋಷಿ ಹೋಗಿದ್ದೇವೆ ಕೂಡಲೇ ಇದಕ್ಕೊಂದು ಪರಿಹಾರ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಎಂದು ಹೆಸರು ಇಚ್ಛೆಸದ ಪಟ್ಟಣ ಪಂಚಾಯಿತಿ ಸದಸ್ಯರು

ಕೊಟ್ -2
ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು ಹಾವಳಿ ಹೆಚ್ಚಾಗಿದ್ದು .ಸಾರ್ವಜನಿಕರಿಗೆ ತೊಂದರೆ ಆಗದಂತೆ ಈ ವಿಷಯದ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಗಮನಕ್ಕೆ ತಂದು ಸರಿಪಡಿಸಲು ತಿಳಿಸುತ್ತೇವೆ. ಎಂದು ಪಟ್ಟಣ ಪಂಚಾಯತಿ ಸದಸ್ಯೆ ಲಕ್ಷ್ಮಿ ಚನ್ನಪ್ಪ ಅವರು ತಿಳಿಸಿದರು

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.