Two separate thefts in Arala village of Gangavati taluk. Thieves who stole money and goods

ವರದಿ : ಪಂಚಯ್ಯ ಹಿರೇಮಠ.
ಗಂಗಾವತಿ : ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆ ಬೀಗಿ ಮುರಿದು ಅಲಮಾರದಲ್ಲಿದ್ದ 2.15 ಲಕ್ಷ ರೂಪಾಯಿ ಮತ್ತು 3.45 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಾಲೂಕಿನ ಆರಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ವೀರೇಶ ಅಡಿವೆಪ್ಪ ಪಟ್ಟಣ ಶೆಟ್ಟಿ ಎನ್ನುವರ ಮನೆಯಲ್ಲಿ ಕಳ್ಳತನ ನಡೆದಿದೆ.
ಉಡಮಕಲ್ ರಸ್ತೆಯ ಮಾರ್ಗದಲ್ಲಿರುವ ವೀರೇಶ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದಾರೆ. ಪತ್ನಿ ಮತ್ತು ಮಗಳು ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮೆನೆಯ ಬೀಗ ಮುರಿದು ಮನೆಯ ಅಲಮಾರದಲ್ಲಿದ್ದ ಹಣ, ಚಿನ್ನದ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ. ವೀರೇಶ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಣೆಗೆ ವಿಭೂತಿ ಹಚ್ಚಿ 12 ಸಾವಿರ ಅಪಹರಣ,,
ಆರಾಳ ಗ್ರಾಮದಲ್ಲಿ ಮತ್ತೋಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವಿ ಬಟ್ಟೆ ಧರಿಸಿ ಬಂದ ಪೂಜಾರಿಗಳು ವ್ಯಕ್ತಿಯ ಹಣೆಗೆ ವಿಭೂತಿ ಹಚ್ಚಿ 12 ಸಾವಿರ ರೂಪಾಯಿ ಅಪಹರಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಮನೆಯೊಂದಕ್ಕೆ ಹೋಗಿದ್ದ ನಾಲ್ವರು ಕಾವಿಧಾರಿಗಳು ಕಾಣಿಕೆ ಕೊಡುವಂತೆ ಕೋರಿದ್ದಾರೆ. ಆಗ ಮನೆಯಲ್ಲಿದ್ದ ವ್ಯಕ್ತಿ 20 ರೂಪಾಯಿ ನೀಡಲು ಮುಂದಾಗಿದ್ದಾರೆ. ಅದನ್ನು ನಿರಾಕರಿಸಿದ ಕಾವಿಧಾರಿಗಳು ದೇವಸ್ಥಾನಕ್ಕೆ 2 ಚೀಲ ಸಿಮೇಂಟ್ ಕೇಳಿದ್ದಾರೆ. ಅಲ್ಲದೆ ಕುಡಿಯಲು ನೀರು ಕೇಳಿದ್ದಾರೆ. ನೀರು ಕೊಟ್ಟು 100ರೂಪಾಯಿ ಕಾಣಿಕೆ ನೀಡಿ ನಮಸ್ಕರಿಸುತ್ತಿದ್ದಾಗ ಹಣೆಗೆ ವಿಭೂತಿ ಹಚ್ಚಿದ್ದಾರೆ. ಕೆಲವೇ ಕ್ಷಣದಲ್ಲಿ ವ್ಯಕ್ತಿ 12 ಸಾವಿರ ನೀಡಿದ್ದಾರೆ.
ಆ ಸಂದರ್ಭ ವಿಭೂತಿ ಹಚ್ಚಿಸಿಕೊಂಡಿದ್ದ ವ್ಯಕ್ತಿಗೆ ಪ್ರಜ್ಞೆ ಇಲ್ಲದಂತಾಗಿದೆ. ಎಚ್ಚರವಾಗಿ ನೋಡಿದಾಗ ಕಾವಿಧಾರಿಗಳು ಇರಲಿಲ್ಲ. ಮನೆಯಲ್ಲಿದ್ದ 12 ಸಾವಿರ ಕೊಟ್ಟಿದ್ದು ನೆನಪಿಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.