Breaking News

ಮಾಹಿತಿ ಹಕ್ಕು ಕಾಯ್ದೆ ಉಪಯೋಗಮಾಡಿಕೊಳ್ಳಿ, ದುರುಪಯೋಗ ಮಾಡಿಕೊಳ್ಳಬೇಡಿಮಾಹಿತಿಹಕ್ಕುಬಳಕೆದಾರರಿಗೆ: ಸಿ.ಹೆಚ್ ನಾರಿನಾಳ್ ಸಲಹೆ

Use the RTI Act, don’t misuse it Right to Information Users: Advice by CH Narinal

ಗಂಗಾವತಿ: ನಗರದ ಸರ್ಕಿಟ್ ಹೌಸ್‌ನಲ್ಲಿ ಮಾಹಿತಿ ಹಕ್ಕು ಸಂಘಟನೆಯ ಪದಾಧಿಕಾರಿಗಳ ನೇಮಕ ಕಾರ್ಯಕ್ರಮವನ್ನು ಮಾಹಿತಿ ಹಕ್ಕು ಸಂಘಟನೆಯ ರಾಜ್ಯಾಧ್ಯಕ್ಷರಾದ ಹೇಮಂತ್ ನಾಗರಾಜು ಉದ್ಘಾಟಿಸಿ ಮಾತನಾಡಿ ಇವತ್ತಿನ ದಿನಮಾನಗಳಲ್ಲಿ ಸಂವಿಧಾನದ ಆಡಳಿತ ಯಂತ್ರದಲ್ಲಿ ಪಾರದರ್ಶಕತೆ ತರಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಸೇವೆಗೆ ಮುಕ್ತವಾಗಿಸಲು ಕೇಂದ್ರ ಸರಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆ ಸಾರ್ವಜನಿಕರಿಗೆ ಒಂದು ಪ್ರಬಲವಾದ ಅಸ್ತç ಇದ್ದಂತೆ. ಇದನ್ನು ಸರಿಯಾಗಿ ಬಳಸಿಕೊಂಡು ಭ್ರಷ್ಟ ಅಧಿಕಾರಿಗಳು ಮಾಡಿದ ಹಗರಣವನ್ನು ಬಯಲಿಗೆ ಎಳೆಯುವಂತಹ ಪ್ರಯತ್ನ ನಿಮ್ಮದಾಗಬೇಕೆಂದು ಹಕ್ಕು ಬಳಕೆ ಮಾಡುವ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನಂತರ ಸಿ ಹೆಚ್ ನಾರಿನಾಳ್ ಸರ್ ಮಾತನಾಡಿ. ಮಾಹಿತಿ ಹಕ್ಕು ಎಂಬ ಕಾಯ್ದೆ ಜಾರಿಗೆ ತಂದಿರುವುದು ಈ ದಿನಮಾನಗಳಲ್ಲಿ ಬಹಳ ಸಂತೋಷ ತರುವಂತ ವಿಷಯ ಮತ್ತು ಈ ಕಾಯ್ದೆಯ ಅವಶ್ಯಕತೆ ಇತ್ತು ಮತ್ತು ಈ ಕಾಯ್ದೆಯು ಭ್ರಷ್ಟ ಅಧಿಕಾರಿಗಳಿಗೆ ಮೂಗುದಾಣದಂತೆ ಕಾರ್ಯನಿರ್ವಹಿಸುತ್ತಿದೆ. ಈಗಿನ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ತಿಳಿಯಲು ಈ ಕಾಯ್ದೆಯು ಸಾರ್ವಜನಿಕರಿಗೆ ಬಹಳ ಉಪಯೋಗವಾಗುವಂತಹ ಕಾಯ್ದೆಯಾಗಿದೆ. ಈ ಕಾಯ್ದೆ ಜಾರಿಯಾದ ಆರಂಭದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ಕಂಡಿತಾದರೂ ನಂತರದ ದಿನಗಳಲ್ಲಿ ಮತ್ತೆ ಅದೇ ಹಳೇ ಕಥೆ ಆರಂಭವಾಗಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಅತೀ ಹೆಚ್ಚಾಗಿ ಬಳಸುವ ಮಾಹಿತಿ ಹಕ್ಕು ಹೋರಾಟಗಾರರನ್ನು ಬ್ಲಾಕ್‌ಮೇಲ್‌ಗಳಂತೆ ಕಾಣಲಾಗುತ್ತಿದೆ. ಅಧಿಕಾರಿ ವರ್ಗಗಳಲ್ಲಿ ಮಾಹಿತಿ ಹಕ್ಕು ಹೋರಾಟಗಾರರನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಹೀಗಾಗಿ ಈ ಕಾಯ್ದೆ ಸದ್ಯಕ್ಕೆ ನಿರುಪಯುಕ್ತವಾದಂತಿದೆ. ಪ್ರತಿ ಇಲಾಖೆಗೂ ದಿನನಿತ್ಯ ಏನಿಲ್ಲವೆಂದರೂ ೧೦೦-೨೦೦ ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗುತ್ತವೆ. ನಂತರ ಅರ್ಜಿಗಳು ಕಸದಪುಟ್ಟಿ ಸೇರುತ್ತವೆಯಾ ಎಂಬ ಅನುಮಾನಗಳು ಮೂಡುತ್ತಿವೆ. ಮಾಹಿತಿ ಅರ್ಜಿಗಳ ಉತ್ತರಕ್ಕೆ ಅಥವಾ ವಿಲೇವಾರಿಗೆ ೩೦ ದಿನಗಳ ಕಾಲಾವಧಿ ನಿಗಧಿಪಡಿಸಲಾಗಿದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳು ಅರ್ಜಿಗಳಿಗೆ ಉತ್ತರ ನೀಡದೇ ತಪ್ಪಿಸಿಕೊಳ್ಳಲು ನೆಪಮಾಡಿಕೊಂಡಿದ್ದಾರೆ. ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಈ ಮಾಹಿತಿ ಹಕ್ಕು ಸಂಘಟನೆ ಪ್ರಾರಂಭ ಮಾಡುವುದು ತುಂಬಾ ಒಳ್ಳೆಯ ವಿಷಯ. ಆದರೆ ಈ ಮಾಹಿತಿ ಹಕ್ಕುನ್ನು ಯಾವುದೇ ಕಾರಣಕ್ಕೂ ತಾವುಗಳು ದುರ್ಬಳಕೆ ಮಾಡಿಕೊಳ್ಳದೆ. ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡು ಭ್ರಷ್ಟರ ವಿರುದ್ಧ ಸಿಂಹಸ್ವಪ್ನಗಳAತೆ ಹೋರಾಡಿ ಯಾವುದಕ್ಕೂ ಎದೆಗುಂದದೆ ಮುನ್ನುಗ್ಗಿ ಭ್ರಷ್ಟ ಅಧಿಕಾರಿಗಳನ್ನು ನಿರ್ಮೂಲನೆ ಮಾಡುವಂತ ಕೆಲಸ ನಿಮ್ಮದಾಗಬೇಕೆಂದು ಹೇಳಿದರು.
ನಂತರ ಮಾಹಿತಿ ಹಕ್ಕು ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಜಿಲ್ಲಾ ಅಧ್ಯಕ್ಷರಾಗಿ ಪಿ. ಶಿವನಾರಾಯಣ, ಜಿಲ್ಲಾ ಗೌರವಾಧ್ಯಕ್ಷರಾಗಿ ಜುಮ್ಮಣ್ಣ, ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕೆ. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಂಜುನಾಥ್ ಕಲ್ಮಂಗಿ ವಕೀಲರು. ಜಿಲ್ಲಾ ಖಜಾಂಚಿಯಾಗಿ ಮಾರ್ಕಂಡೇಯ ಸೋಮನಾಳ, ಜಿಲ್ಲಾ ಸದಸ್ಯರನ್ನಾಗಿ ಆರ್. ಚನ್ನಬಸವ ಮಾನ್ವಿ, ಜಿಲ್ಲಾ ಮಾಧ್ಯಮ ಸಲೆಹೆಗಾರಾರನ್ನಾಗಿ ಸಿದ್ದನಗೌಡ ಹೊಸಮನಿ ಮತ್ತು ಜಿಲ್ಲಾ ಸಲಹೆ ಸದಸ್ಯರನ್ನಾಗಿ ಚನ್ನಬಸವ ಇವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಂಘಟನಾ ಸಂಚಾಲಕರು ಮತ್ತು ಇತರರು ಭಾಗವಹಿಸಿದರು

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.