Breaking News

ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

Application Invitation for the post of Guest Lecturer




ಕೊಪ್ಪಳ ಜುಲೈ 15 (ಕ.ವಾ.):ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕನಕಗಿರಿಯಲ್ಲಿ ನಡೆಯುತ್ತಿರುವ ಎಲೆಕ್ಟಿçಸಿಯನ್ ಮತ್ತು ಫಿಟ್ಟರ್ ಟ್ರೇಡಗಳಿಗೆ 2023-24ನೇ ಸಾಲಿನಲ್ಲಿ ತರಬೇತಿ ನೀಡಲು ಅತಿಥಿ ಬೋಧಕರ ಅವಶ್ಯಕತೆ ಇದ್ದು, ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಲೆಕ್ಟ್ರಿಷಿಯನ್ 1 ಹುದ್ದೆಗೆ ಐಟಿಐ ಅಥವಾ ಎಟಿಎಸ್ ಅಥವಾ ಡಿಇಇ ಅಥವಾ ಬಿಇ ಎಲೆಕ್ಟ್ರಿಕಲ್ ವಿದ್ಯಾರ್ಹತೆ ಇರಬೇಕು. ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು.
ಫಿಟ್ಟರ್ 2 ಹುದ್ದೆಗಳಿಗೆ ಐಟಿಐ ಅಥವಾ ಎಟಿಎಸ್ ಅಥವಾ ಡಿಎಂಇ ಅಥವಾ ಬಿಇ (ಮೆಕ್ಯಾನಿಕ್) ವಿದ್ಯಾರ್ಹತೆ ಹೊಂದಿರಬೇಕು. ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು.
ಅರ್ಜಿಗಳನ್ನು ಜುಲೈ 28ರ ಸಂಜೆ 5 ಗಂಟೆಯೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿ (ಮೊ:9448259832) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಜಾಹೀರಾತು

About Mallikarjun

Check Also

ನಗರಾಭಿವೃದ್ಧಿ ಇಲಾಖೆಯಲ್ಲಿ ಮುಂಬಡ್ತಿ ಪಡೆದ 13 ಉಪ ನಿರ್ದೇಶಕರಿಗೆ ಸ್ಥಳ ನಿಯೋಜನೆಗೆ ಸಚಿವ ಭೈರತಿ ಸುರೇಶ್ ನಿಷ್ಕಾಳಜಿ

Minister Bhairati Suresh Nishkalaji for allotment of places for 13 deputy directors promoted in Urban …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.