Breaking News

ತಿಪಟೂರಿನಲ್ಲಿ ಒಂದೇ ವೇದಿಕೆಯಡಿ ಮೆರೆವ ದೇವರ ಮೂರ್ತಿಗಳು, ಧಾರ್ಮಿಕತೆ ಮೆರೆದ ಕೆಪಿಸಿಸಿಸದಸ್ಯವಿ.ಯೋಗೇಶ್.

Idols of God paraded under one stage in Tipatur, religious KPCC member Yogesh.

ಜಾಹೀರಾತು

ತಿಪಟೂರು: ನಮ್ಮ ತಂದೆ ದಿ॥ ಟಿ.ವೀರಯ್ಯನವರ ಹೆಸರು ಚಿರಶಾಶ್ವತವಾಗಿ ಉಳಿಯಲೆಂದು ಮತ್ತು ಅವರ ಸವಿನೆನಪಿನೊಂದಿಗೆ, ದೇವರುಗಳಲ್ಲಿ ಪ್ರಾರ್ಥಿಸುತ್ತ ತಾಲೂಕಿಗೆ ಉತ್ತಮವಾದ ಮಳೆ ಬೆಳೆಯಾಗಿ ರೈತರಲ್ಲಿ ಮಂದಹಾಸ ಮೂಡಿ, ಸುಖದಿಂದ ಜೀವನ ನಡೆಸಲೆಂದು ಮತ್ತು ಧಾರ್ಮಿಕತೆಗೆ ಹೆಸರಾದ ತಿಪಟೂರನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯಲೆಂದು ನಮ್ಮ ತಾಲೂಕಿನ,ಅಕ್ಕಪಕ್ಕ ತಾಲೂಕುಗಳಾದ ಅರಸೀಕೆರೆ ಮತ್ತು ಚಿಕ್ಕನಾಯಕನಹಳ್ಳಿ ಒಳಗೊಂಡ ಸುಮಾರು 45ಕ್ಕೂ ಹೆಚ್ಚು ಗ್ರಾಮದೇವರ ಶಕ್ತಿದೇವರಗಳನ್ನು ಒಂದೇ ವೇದಿಕೆಯಡಿ ಕರೆತಂದು, ಸಮ್ಮಿಲನದೊಂದಿಗೆ ತಾಲೂಕಿನ ಕಸಬಾ ಹೋಬಳಿಯ ಅಯ್ಯನಬಾವಿ ಹತ್ತಿರವಿರುವ ಬೊಮ್ಮಲಾಪುರ ರಸ್ತೆಯ ತೋಟದ ಮನೆಯಲ್ಲಿ ದೇವತಾ ಕಾರ್ಯವನ್ನು ನಮ್ಮ ಕುಟುಂಬದಿಂದ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಸದಸ್ಯ ವಿ. ಯೋಗೇಶ್ ತಿಳಿಸಿದರು.

ಸುಮಾರು ಐದು ವರ್ಷದಿಂದ ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಮುಂದೆ ಕೂಡ ಶಕ್ತಿ ದೇವರುಗಳ ಆಶೀರ್ವಾದದಿಂದ ಇಂತಹ ಧಾರ್ಮಿಕ ಮತ್ತು ದೇವತಾ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತೇವೆ. ದೇವತಾ ಕಾರ್ಯಕ್ರಮದ ಕಾರ್ಯಕ್ರಮದ ಹಿಂದಿನ ದಿನ ಎಲ್ಲಾ ದೇವರುಗಳ ಮಣೇವು ಮತ್ತು ಉತ್ಸವ ಹಮ್ಮಿಕೊಂಡಿದ್ದು,ಮಾರನೇ ದಿನ ಸಾವಿರಾರು ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಲೋಕೇಶ್ ವೀರಯ್ಯ ಸೇರಿದಂತೆ ಕುಟುಂಬದವರು, ನಗರಸಭಾ ಸದಸ್ಯರುಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರುಗಳು ಮತ್ತು ಪಕ್ಷ ಭೇದ ಮರೆತು ನೂರಾರು ಮುಖಂಡರು ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದಸರೀಘಟ್ಟ ಶ್ರೀ ಚೌಡೇಶ್ವರಿ, ಹಂದನಕೆರೆ ಶ್ರೀ ಗುರು ಗಿರಿಸಿದ್ದೇಶ್ವರ,ತಿಪಟೂರು ಶ್ರೀ ಕೆಂಪಾಂಬ,ಶ್ರೀ ಬಿದಿರಾಂಬಿಕ, ಹೆಚ್.ಬೈರಾಪುರ ಶ್ರೀ ಕರಿಯಮ್ಮ,ಶ್ರೀ ಹೊಸ ಪಟ್ಟಣದಮ್ಮ ಮತ್ತು ಚೌಲೀಹಳ್ಳಿ ಶ್ರೀ ಕರಿ ಕಲ್ಲಮ್ಮ ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಗ್ರಾಮದ ಶಕ್ತಿ ದೇವರುಗಳು ಆಗಮಿಸಿದ್ದು ವಿಶೇಷವಾಗಿತ್ತು.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *