Celebration of International Pharmacist Day at Sunrise D-Pharmacy, Nursing, Paramedical College.

ಸಿಂಧನೂರು:- ಸೆ 26 ನಗರದ ಸನ್ ರೈಸ್ ಡಿ – ಪಾರ್ಮಸಿ, ನರ್ಸಿಂಗ್, ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಫಾರ್ಮಸಿಸ್ಟ್ ದಿನಾಚರಣೆ ಹಾಗೂ ನರ್ಸಿಂಗ್ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಡಿ ಫಾರ್ಮಸಿ, ನರ್ಸಿಂಗ್ ಪ್ಯಾರಾ ಮೆಡಿಕಲ್ ಅಂತಿಮ ವರ್ಷದವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಫರ್ಮಸಿಸ್ಟ್ ದಿನಾಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಮೂಲಕ ಶ್ರೀ ಜಯಂದ್ರ ತಾತನವರು ಹಾಗೂ ಅತಿಥಿಗಳು ಉದ್ಘಾಟನೆಯನ್ನು ಮಾಡಿದರು.ನಂತರ ಸರಸ್ವತಿ ದಿವ್ಯ ಪೂಜೆಯನ್ನು ಸಲ್ಲಿಸಿ. ಫಾರ್ಮಸಿ ಪಿತಾಮಹ ಮಹದೇವಲಾಲ್ ಶಾರ್ಪ್ ರವರ ಫೋಟೋಗೆ
ಪುಷ್ಪಾರ್ಚನೆ ಮಾಡಿ ಗೌರವಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಸಚಿನ್ ಕೆ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಮಾತನಾಡಿ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಫಾರ್ಮಾಸಿಸ್ಟ್‌ಗಳ ಪ್ರಮುಖ ಪಾತ್ರ
ಅಗತ್ಯ .ಔಷಧಿಗಳ ಪ್ರವೇಶವನ್ನು ಖಾತ್ರಿಪಡಿಸುವ ಮೂಲಕ ಮತ್ತು ಅವುಗಳ ಅತ್ಯುತ್ತಮ ಬಳಕೆಯನ್ನು ಉತ್ತೇಜಿಸುವ ಮೂಲಕ ಆರೋಗ್ಯ ರಕ್ಷಣಾ ವ್ಯವಸ್ಥೆಗಳಲ್ಲಿ ಫಾರ್ಮಾಸಿಸ್ಟ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ…
ಆರೋಗ್ಯ ಸಲಹೆಗಳನ್ನು ನೀಡುವುದು, ಆರೋಗ್ಯ ತಪಾಸಣೆ ನಡೆಸುವುದು, ರೋಗಿಗಳಿಗೆ ಶಿಕ್ಷಣ ನೀಡುವುದು, ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ಭಾಗವಹಿಸುವುದು ಮತ್ತು ಹೊಸ ಔಷಧಿಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದು ಮುಂತಾದ ವಿವಿಧ ಚಟುವಟಿಕೆಗಳ ಮೂಲಕ ರೋಗಿಗಳ ಆರೈಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅವರು ಗಮನಾರ್ಹವಾಗಿ ಕೊಡುಗೆ ನೀಡುತ್ತಾರೆ ಎಂದು ತಿಳಿಸಿದರು
ನಂತರ ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಅನಿಲ್ ಸರ್ ಅವರು ಮಾತನಾಡಿ ಸಿಂಧನೂರು ನಂತಹ ನಗರ ಪ್ರದೇಶದಲ್ಲಿ ಮೆಡಿಕಲ್ ಕೋರ್ಸ್ ಗಳಾದ ಡಿ ಫಾರ್ಮಸಿ ನರ್ಸಿಂಗ್ ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ .. ನರ್ಸಿಂಗ್ ಪ್ರಥಮ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು ನಂತರ ರೈಚೂರ್ ನಗರದ ಪಂಚಮುಖಿ ಬ್ಯಾಂಕಿನ ಅಧ್ಯಕ್ಷರಾದ ದತ್ತಾತ್ರೇಯ ಮೇಟಿ ಅವರು ಮಾತನಾಡಿ ಸನ್ ರೈಸ್ ಶಿಕ್ಷಣ ಸಂಸ್ಥೆಯವರು ಪ್ರತಿ ಶನಿವಾರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಅವರು ಒಳ್ಳೆಯ ಸಂಸ್ಕೃತ ಶಿಕ್ಷಣವನ್ನು ನೀಡುತ್ತಿದ್ದಾರೆ ಈ ಸಂಸ್ಥೆಯಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ನೀವೇ ಧನ್ಯರು ಎಂದು ತಿಳಿಸಿದರು.
ನಂತರ ನರ್ಸಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಎಲ್ಲಾ ಮುಖ್ಯ ಅತಿಥಿಗಳು ಸ್ವಾಗತಿಸಿಕೊಂಡರು. 2023ರ ಡಿ ಫಾರ್ಮಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರಿಸಲಾಯಿತು. ಅಂತರ ವೇದಿಕೆ ಮೇಲೆ ಇದ್ದ ಎಲ್ಲಾ ಗಣ್ಯರು ಡಿಪಾರ್ಮಸಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹುಡುಗರೆಯನ್ನು ಕೊಟ್ಟು ಬಿಳ್ಕೊಡುಗೆ ಕೊಟ್ಟರು. ನಂತರ ಸಂಸ್ಥೆ ವತಿಯಿಂದ ಹಿರಿಯ ಫಾರ್ಮಸಿಸ್ಟ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
Pಇರ್ಫಾನ್ ಕೆ ಅಧ್ಯಕ್ಷರು ಅಧ್ಯಕ್ಷ ಭಾಷಣವನ್ನು ಮಾಡಿದರು ನಂತರ ಎಲ್ಲಾ ಅತಿಥಿಗಳಿಗೆ ಗೌರವ ಪೂರಕವಾಗಿ ಸನ್ಮಾನವನ್ನು ಮಾಡಿದರು ನಂತರ ಉಪ್ಪರ ನಂದಿಹಾಳ ಮಠದ ಪೂಜ್ಯಶ್ರೀ ಜಯಂದ್ರ ತಾತನವರು ಅವರು ಆಶೀರ್ವಚನವನ್ನು ಸಲ್ಲಿಸಿದರು ..ನಂತರ ಸನ್ ರೈಸ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಸಿರಿಲ್ ಸರ್ ಅವರು ವಂದನಾರ್ಪಣೆ ಮಾಡುವ ಮೂಲಕ. ಕಾರ್ಯಕ್ರಮವನ್ನು ಮುಕ್ತಾಯ ಗೋಳಿ ಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ಪೂಜ್ಯಶ್ರೀ ಜಯನಗರ ತಾತನವರು ಶ್ರೀ ಹನುಮೇಶ ತಾತನವರ ಮಠ ಉಪ್ಪಾರ್ ನಂದಿಹಾಳ ಇವರು ವಹಿಸಿದ್ದು,ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಅದ್ಯಕ್ಷ ಖಾಜಾ ಮೈನುದ್ದಿನ್ ವಹಿಸಿದ್ದರು,ಅಧ್ಯಕ್ಷರಾದ ಇರ್ಫಾನ್ ಕೆ. ಅತ್ತಾರ, ಸಹಾಯಕ ಜಿಲ್ಲಾ ಡ್ರಗ್ ನಿಯಂತ್ರಕರಾದ ಉದಯ ಕಿಶೋರ್, ಹಿರಿಯ.ಸಹಾಯಕ ಜಿಲ್ಲಾ ಡ್ರಗ್ ನಿಯಂತ್ರಕರಾದ ಸಚಿನ್ ಕೆ, .ಬಸವ ಆಸ್ಪತ್ರೆಯ ಡಾ.ಬಸವರಾಜ, ಜೆಸ್ಕಾಂ ಎಇಇ ಶ್ರೀನಿವಾಸಗೊಲ್ಲರ್ , ಅನಿಲ್ ಕುಮಾರ್ ಕಾರ್ಯದರ್ಶಿಗಳು ಸರ್ವೋದಯ ಶಿಕ್ಷಣ ಸಂಸ್ಥೆ ಮಾನ್ವಿ, ವಿ.ಎನ್.ಪಿ.ಸಿ ಕಾಲೇಜಿನ ಉಪನ್ಯಾಸಕ ಜಯಹುದ್ದಿನ್ ,ರಾಯಚೂರು, ದತ್ತಾತ್ರೆಯ ಮೇಟಿ , ಫಾರ್ಮರ್ಸಿ ಪ್ರಾಚಾರ್ಯರ ವಾಸಿ ಹುಸೇನ್ , ನರ್ಸಿಂಗ್ ಪ್ರಚಾರ ಲಾರಿಜ್ ಸಿರಿಲ್, ಪ್ಯಾರಾ ಮೆಡಿಕಲ್ ಪ್ರಾಚಾರ್ಯ ,ಸಂಸ್ಥೆಯ ಕಾರ್ಯದರ್ಶಿ ಇರ್ಸಾದ್ ಉಪನ್ಯಾಸಕರಾದ ,ಆಶುಪಾಷಾ, ಬಸವಲಿಂಗ, kರಾಜೇಶ್,ಭಾಗ್ಯಶ್ರೀ , lನಿರ್ಮಲ, ಉಳಿದ ಉಪನ್ಯಾಸಕರು,ಮನೋಹರ್ ಬಡಿಗೇರ್ ಮೈಲಾಪುರ್,ಪುಟ್ಟರಾಜ್ ,ಮೆಹಬೂಬ್ ಎಲ್ಲ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.