Breaking News

ಸಿ.ಬಿ.ಎಸ್ ಗಂಜ್ ಹಮಾಲರ ಕ್ವಾಟ್ರಸ್ ಹತ್ತಿರದಎಂ.ಎಸ್.ಐ.ಎಲ್ ಮದ್ಯದಂಗಡಿಗಳನ್ನು ತೆರವುಗೊಳಿಸಲು ಒತ್ತಾಯ.

Forced to vacate MSIL liquor shops near CBS Ganj Hamalara Quattros.

ಗಂಗಾವತಿ: ನಗರದ ಸಿ.ಬಿ.ಎಸ್ ಗಂಜ್ ಹಮಾಲರ ಕ್ವಾಟ್ರಸ್ ವಸತಿ ಗೃಹಗಳ ಹತ್ತಿರ ಇರುವ ಎಂ.ಎಸ್.ಐ.ಎಲ್ ಅಂಗಡಿಯಿAದ ದಿನನಿತ್ಯ ರಾತ್ರಿ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೊರಗಡೆ ಬರಲಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ಕುಡುಕರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದು, ವಿನಾಕಾರಣ ಗಲಾಟೆಗಳು ಸಂಭವಿಸುತ್ತಿವೆ ಎಂದು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದರು.
ಅವರು ಸಿ.ಬಿ.ಎಸ್ ಗಂಜ್ ಹಮಾಲರ ಕ್ವಾಟ್ರಸ್ ಹತ್ತಿರದ ಎಂ.ಎಸ್.ಐ.ಎಲ್ ಮದ್ಯದಂಗಡಿಯನ್ನು ತೆರವುಗೊಳಿಸಲು ಶುಕ್ರವಾರ ಅಬಕಾರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಹಮಾಲರ ಕ್ರಾಟ್ರಸ್‌ನಲ್ಲಿ ಹೆಚ್ಚಾಗಿ ಹಮಾಲರ ಕುಟುಂಬಗಳು ವಾಸಿಸುತ್ತಿದ್ದು, ದುಡಿದ ಹಣವನ್ನು ಮದ್ಯದ ಅಂಗಡಿಗೆ ವ್ಯಯ ಮಾಡುತ್ತಿದ್ದಾರೆ. ಸುಮರು ೧೫ ವರ್ಷದ ಮಕ್ಕಳು ಕುಡಿತದ ಚಟಕ್ಕೆ ಬಿದ್ದು ಹಾಳಾಗುತ್ತಿದ್ದಾರೆ. ಇದರಿಂದ ಹಮಾಲರ ವಸತಿ ಗೃಹಗಳಲ್ಲಿ ವಾಸ ಮಾಡುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಮಡು ಈ ಎಂ.ಎಸ್.ಐ.ಎಲ್ ಅಂಗಡಿಯನ್ನು ತೆರವುಗೊಳಿಸಬೇಕೆಂದು ಸಿ.ಐ.ಟಿ.ಯು ಒತ್ತಾಯಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಉಪಾಧ್ಯಕ್ಷರಾದ ಮಂಜುನಾಥ ನಾಯಕ, ಕಾರ್ಯದರ್ಶಿಗಳಾದ ಇಬ್ರಾಹಿಂಸಾಬ, ಗಂಗಾವತಿ ತಾಲೂಕ ಅಧ್ಯಕ್ಷರಾದ ಕೃಷ್ಣಪ್ಪ, ಕಾರ್ಯದರ್ಶಿಯಾದ ಟಿ. ನಬಿ, ಹಮಾಲರ ಕ್ರಾಟ್ರಸ್ ಮುಖಂಡರಾದ ರಾಜಾಸಾಬ್, ರಹೀಮ್‌ಸಾಬ, ಲಕ್ಷö್ಮಣ, ಬಸಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.