
Visit to the lake silting site in Ginigera village

ಗಿಣಿಗೇರಾ ಗ್ರಾಮದ ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ

ಕೂಲಿ ಕೆಲಸದೊಂದಿಗೆ ವಿಮೆ ನೊಂದಣಿ ಮಾಡಿಕೊಳ್ಳಿ ಶ್ರೀನಿವಾಸ ಚಿತ್ರಗಾರ
ಕೊಪ್ಪಳ ಏಪ್ರಿಲ್ 15 (ಕರ್ನಾಟಕ ವಾರ್ತೆ): ಪ್ರತಿಯೊಬ್ಬ ಕೂಲಿಕಾರರು ಕೂಲಿ ಕೆಲಸದೊಂದಿಗೆ ವಿಮೆ ನೊಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತಿ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಅವರು ಹೇಳಿದರು.
ಗಿಣಿಗೇರಾ ಗ್ರಾಮ ಪಂಚಾಯತಿಯ ಗಿಣಿಗೇರಾ ಗ್ರಾಮದ ಕೆರೆ ಹೂಳೆತ್ತುವ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ, ಅವರು ಮಾತನಾಡಿದರು.
ಪ್ರತಿ ಮಾನವ ದಿನಕ್ಕೆ 370 ರೂ. ಕೂಲಿ ನಿಗದಿಪಡಿಸಿದ್ದು, 6 ಪೀಟ್ ಉದ್ದ, 6 ಪೀಟ್ ಅಗಲ, 1 ಪೀಟ್ ಆಳ ಮಣ್ಣನ್ನು ಅಗೆದು ಕೂಲಿಕಾರರು ತಮ್ಮ ಪೂರ್ತಿ ಕೂಲಿ ಪಡೆದುಕೊಳ್ಳಬೇಕು. ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೆಲಸ ಜೊತೆಗೆ ಆರೋಗ್ಯದ ಕಡೆಗೂ ಕಾಳಜಿವಹಿಸಬೇಕು. 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಂಡು ಕೂಲಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ-6 ಸಲ್ಲಿಸಬೇಕು. ಏಪ್ರಿಲ್ ರಿಂದ ಜೂನ್ ವರೆಗೆ 90 ದಿನಗಳ ಕೂಲಿ ಕೆಲಸ ಪಡೆಯಿರಿ. ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ಎಲ್ಲಾ ಕೂಲಿಕಾರರು ಪಿಎಂಜೆಜೆಬಿವೈ, ಪಿ.ಎಂ.ಎಸ್.ಬಿ.ವೈ ವಿಮೆಗಳನ್ನು ನೊಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಗ್ರಾಮ ಪಂಚಾಯತಿಯವರು ಫಾರಂ ನಂ.6 ಪ್ರಕಾರ ಈಗಾಗಲೇ ಎನ್‌ಎಂಆರ್ ಸೃಜಿಸಲಾಗಿದ್ದು, ಎನ್.ಎಂ.ಆರ್ ನಲ್ಲಿರುವ ಎಲ್ಲಾ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗುವಂತೆ ಮನವೋಲಿಸಬೇಕು. ಜಾಬಕಾರ್ಡನಲ್ಲಿರುವ ಕುಟುಂಬದ ಎಲ್ಲ ಸದಸ್ಯರು ಇ-ಕೆವೈಸಿ ಹೊಂದಿದ ನಂತರವೇ ಎನ್.ಎಂ.ಆರ್.ನಲ್ಲಿ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗಬೇಕು. 1 ಮತ್ತು 2ನೇ ಹಾಜರಾತಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.
ತಾ.ಪಂ ತಾಂತ್ರಿಕ ಸಹಾಯಕಿ ವೀಣಾ ಅಂಗಡಿ, ಗ್ರಾಮ ಪಂಚಾಯತಿ ಡಿಇಒ ರಾಜಾಭಕ್ಷಿ ಪಾಯಪ್ಪನವರ, ಹನಮೇಶ ಹೋಸುರು, ರುದ್ರೇಶ ಬಳಿಗಾರ, ಶಿವಕುಮಾರ, ಮಾರುತಿ, ಶ್ರೀದೇವಿ ಧರ್ಮಪುರ, ಬಸಮ್ಮ ಬಗನಾಳ, ಶಾರದಾ ಗೋಡೆಕರ್ ಸೇರಿದಂತೆ 185 ಕೂಲಿಕಾರರು ಉಪಸ್ಥಿತರಿದ್ದರು.
