Breaking News

ಉಜ್ಜಯಿನಿ ಭಾರತ ಹುಣ್ಣಿಮೆ ಹಬ್ಬವನ್ನು ವಿಶಿಷ್ಠವಾಗಿ ಆಚರಣೆ

Ujjain is a special celebration of India’s full moon festival

ಜಾಹೀರಾತು

ಕೊಟ್ಟೂರು: ಉಜ್ಜಯಿನಿ ಸದ್ಧರ್ಮ ಪೀಠದ ಆಚರಣೆಯಲ್ಲಿ ಭಾರತ ಹುಣ್ಣಿಮೆಯ ಮಹತ್ವ
ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠವು ಅನೇಕ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದು ಅದರಲ್ಲೂ ಭಾರತ ಹುಣ್ಣಿಮೆ ಹಬ್ಬವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತದೆ.
ರಾಜಯೋಗದಲ್ಲಿ ಪ್ರಥಮವಾಗಿ ದಾರುಕ ಜಯಂತಿಯಾದರೆ ಕೊನೆಯದಾಗಿ ರಾಜಯೋಗದಲ್ಲಿ ವೀರಶೈವರನ್ನು ನೆಲೆಗೊಳಿಸಲು ಪೂರ್ವಚಾರ್ಯರು ಕೈಗೊಂಡ ಧರ್ಮ ದಿಗ್ವಿಜಯ ದ್ಯೋತಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.


ಭಾರತ ಹುಣ್ಣಿಮೆಗೆ ೯ ದಿವಸಗಳ ಮುಂಚಿತವಾಗಿ ಸಪ್ತಮಿ ದಿನವಾದ ಫೆಬ್ರವರಿ ೧೧ ರಂದು ಉಜ್ಜಯಿನಿ ಪಾದದಿಂದ ಹೊರಡುವ ಉತ್ಸವ ಮೂರ್ತಿಯು ಭುಜಂಗ ಪಾದದವರೆಗೆ ೯ ಪಾದಗಳನ್ನು ಮೂರ್ತಿ ಸುತ್ತಿ ಬರುತ್ತದೆ. ಮಧ್ಯೆ ಮಧ್ಯೆ ನಿರ್ದಿಷ್ಠ ಕ್ಷೇತ್ರಗಳಲ್ಲಿ ಮೆರವಣಿಗೆಯ ಮುಖಾಂತರ ವಾಸ್ತವ್ಯ ಮಾಡುತ್ತದೆ.
ಕ್ಷೇತ್ರ ಪ್ರದಕ್ಷಣೆ ಯಾತ್ರೆಗೆ ಹೊರಟ ಮೂರ್ತಿಯ ಹಿಂದೆ ಭಕ್ತರು ಸೈನಿಕರಂತೆ ಕೈಯಲ್ಲಿ ಗಗ್ಗರಣೆ ಹಿಡಿದುಕೊಂಡು ಸ್ವಾಮಿಗೆ ಘೋಷಣೆ ಮಾಡುತ್ತಾ ಸಾಗುತ್ತಾರೆ. ವಾಸ್ತವ್ಯ ಮಾಡುವ ಗ್ರಾಮದ ಭಕ್ತರು ತಳಿರು ತೋರಣಗಳೊಂದಿಗೆ ಸ್ವಾಗತಿಸಲು ಸಿದ್ದರಿರುತ್ತಾರೆ. ಗಗ್ಗರಣೆ ಹಿಡಿದವರು ತೋರಣವನ್ನು ಹರಿದು ಪುನಃ ಮೂರ್ತಿಯ ಬಳಿ ಬರುತ್ತಾರೆ. ಇದರ ಸಂಕೇತ ಸ್ವಾಗತ ಕೋರುತ್ತಿದ್ದಾರೆ ಎಂಬುದು ಇದರ ಅರ್ಥ.
ಗ್ರಾಮದ ಪ್ರಮುಖರು ಮಂಗಲದ್ರವ್ಯಗಳೊAದಿಗೆ ಸ್ವಾಮಿಗೆ ಸ್ವಾಗತ ಕೋರುವುದರೊಂದಿಗೆ ಮೆರವಣಿಗೆ ಸಾಗುತ್ತದೆ. ೯ ಪಾದಗಟ್ಟಿಗಳಲ್ಲಿ ಒಂದಾದ ಹಾರಕನಾಳು ಗ್ರಾಮದಲ್ಲಿ ಕಡುಬಿನ ಕಾಳಗ ನೆಡೆಯುವುದು ವಿಶಿಷ್ಠವಾಗಿದೆ.
ಇತ್ತ ದೇಗುಲದಲ್ಲಿ ಧರ್ಮ ಕಾರ್ಯಗಳು ಅನೂಚಾನವಾಗಿ ನಡೆದಿರುತ್ತವೆ. ಹರಕೆ ಗುಡಿಯಲ್ಲಿ ಹೋಮವನ್ನು ಪುರೋಹಿತರು ನಡೆಸುತ್ತಾರೆ. ಬೇರೊಂದು ಕಡೆ ರೇಣುಕಾ ಪುರಾಣಪ್ರವಚನವು ಕುಂಟ ಬಸವಣ್ಣನ ಸಮ್ಮುಖದಲ್ಲಿ ನಡೆದಿರುತ್ತವೆ. ಬಸವಣ್ಣನ ಕಾಲು ಕುಂಟಾಗಿರುವುದರಿAದ ಸಿದ್ದೇಶ್ವರರು ಕುದುರೆ ಏರಿ ದಿಗ್ವಿಜಯಕ್ಕೆ ಹೊರಟಿರುತ್ತಾರೆ. ಅದಕ್ಕಾಗಿ ಈ ಹಬ್ಬದಲ್ಲಿ ಕುದುರೆಗೆಂದು ಹುರುಳಿಗುಗ್ಗರಿ, ಬೆಲ್ಲದೊಂದಿಗೆ ನೈವೇಧ್ಯ ನಡೆಯುತ್ತದೆ. ಹೋಮ ಮಾಡಿದ ಕಜ್ಜಲವನ್ನು ಪುರೋಹಿತರು ತಮ್ಮ ವಶಕ್ಕೆ ಇಟ್ಟುಕೊಂಡಿರುತ್ತಾರೆ.
ಸ್ವಾಮಿಯು ದಿಗ್ವಿಜಯ ಮುಗಿಸಿಕೊಂಡು ಮಾಘ ಪೂರ್ಣಿಮೆಯಂದು(ಭಾರತಹುಣ್ಣಿಮೆ) ಪುರಪ್ರವೇಶ ಮಾಡುತ್ತಾರೆ. ಭಕ್ತರು ವಿಜಯಾತ್ರೆ ಮುಗಿಸಿಕೊಂಡು ಬಂದ ಸ್ವಾಮಿಗೆ ಮೊಳಕೆಕಾಳಿನ ಆರತಿ, ಪಂಚಾರತಿ, ಸೂರುಭಾನದಾರತಿ, ಕಳಸ ಮುಂತಾದ ಹರಕೆ ಮಾಡಿಕೊಂಡAತೆ ಆರತಿಗಳನ್ನು ತರುತ್ತಾರೆ. ವಿಶೇಷವೆಂದರೆ ತಳವಾರ, ಆದಿಕರ್ನಾಟಕದವರು ಮೊದಲು ಆರತಿಯನ್ನು ತರುತ್ತಾರೆ. ನಂತರ ಇತರರ ಆರತಿಗಳನ್ನು ಪೂಜಾರಿಗಳು ಭಕ್ತರಿಂದ ಪಡೆದುಕೊಂಡು ಭಕ್ತಿಪೂರ್ವಕವಾಗಿ ’ಸುಮುಖೋ ಮಹಾದೇವ ಮರುಳುಸಿದ್ದೇಶ್ವರ ಸುಮುಖೋ’ ಎಂದು ಪ್ರತಿ ಬಾರಿ ಆರತಿ ಬೇಳಗಿದಾಗ ಘೋಷಿಸುತ್ತಾರೆ. ಆರತಿಯ ನಂತರ ಮೂರ್ತಿಯು ಆವರಣದೊಳಗೆ ಪ್ರವೇಶಿಸುತ್ತದೆ.
ದೇವಾಲಯದ ಪಶ್ಚಿಮ ದ್ವಾರಕ್ಕೆ ಸ್ವಾಮಿ ಬಂದಾಗ ಪೂಜಾರಿಗಳು ಹೋಮ ಕಜ್ಜಲವನ್ನು ತಂದು ಸ್ವಾಮಿಗೆ ಲೇಪನ ಮಾಡಿ ದೃಷ್ಠಿ ತೆಗೆದು ಉಳಿದ ಕಜ್ಜಲವನ್ನು ಪಲ್ಲಕ್ಕಿಯಲ್ಲಿ ಇಡುತ್ತಾರೆ. ಪಲ್ಲಕ್ಕಿಯಲ್ಲಿಟ್ಟ ಕಜ್ಜಲವನ್ನು ಅಪಹರಿಸಲು ಕೆಲವು ದುಷ್ಟಶಕ್ತಿಯ ವೇಷ ಧರಿಸಿದ ವೇಷÀಧಾರಿಗಳು ಅಪಹರಿಸಲು ಮುಂದಾದಾಗ ಪೂಜಾರಿಗಳು ಉಪಾಯದಿಂದ ಕಜ್ಜಲವನ್ನು ದೇವಸ್ಥಾನದೊಳಗೆ ಒಯ್ಯುತ್ತಾರೆ. ಪವಿತ್ರವಾದ ಈ ಕಜ್ಜಲ ದ್ರವ್ಯವನ್ನು ಬಾಲಗ್ರಹ ದೋಷವುಳ್ಳ ಮಕ್ಕಳಿಗೆ ಲೇಪಿಸುವುದರಿಂದ ದೋಷ ಪರಿಹಾರವಾಗುತ್ತದೆಂಬುದು ಪ್ರತೀತಿ.
ಬೆಳಗಿನ ಜಾವ ಮಂಗಳಾರತಿಯೊAದಿಗೆ ಮೂರ್ತಿಯು ಹುಣ್ಣಿಮೆ ಮುಗಿಯುವ ರಾಜಯೋಗದಲ್ಲಿ ದೇವಾಲಯವನ್ನು ಪ್ರವೇಶಿಸುವುದರ ಮುಖಾಂತರ ಈ ಹಬ್ಬವು ಸಂಪನ್ನವಾಗುತ್ತದೆ.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *