Breaking News

ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಫೌಂಡೇಶನ್ ನಿಂದ ಮಳೆ ನೀರು ಕೊಯ್ಲು ಉದ್ಘಾಟನೆ

Gokal Das Exports Foundation inaugurates rainwater harvesting

ಜಾಹೀರಾತು

ದೇವನಹಳ್ಳಿ, ಜೂ; ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದೇವನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳಲ್ಲಿ ನಾಲ್ಕು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಜೂನ್ 05 ರಂದು ಉದ್ಘಾಟಿಸಲಾಯಿತು.

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮದ ಮೂಲಕ ಈ ವ್ಯವಸ್ಥೆಗೆ ಧನಸಹಾಯ ನೀಡಿದ ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಫೌಂಡೇಶನ್ ಬೆಂಬಲದೊಂದಿಗೆ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ಈ ಅನುಷ್ಠಾನವನ್ನು ಮಾಡಿದೆ. ಡಿ.ದೇವರಾಜ ಅರಸು ಭವನ, ಡಿ.ದೇವರಾಜ ಅರಸು ವಿದ್ಯಾರ್ಥಿ ನಿಲಯಗಳಾದ ಬಿಸಿಡಬ್ಲ್ಯೂಡಿ-2678, ಬಿಸಿಡಬ್ಲ್ಯೂಡಿ-44 ಮತ್ತು ಸವಿತಾ ಸಮಾಜಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಫೌಂಡೇಶನ್ CSR’ನ ಉಪಾಧ್ಯಕರಾದ ಪ್ರಾಂಜಲ್, ಪ್ರತಿನಿಧಿಗಳಾದ ಧ್ರುವ, ರಾಜೇಂದ್ರ ಪ್ರಸಾದ್, ಶಿಲ್ಪಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದೇವನಹಳ್ಳಿ ತಾಲೂಕಿನ ಕಲ್ಯಾಣಾಧಿಕಾರಿ ಶ್ರೀಮತಿ ಅನಿತಾ, ಹಾಸ್ಟೆಲ್ ವಾರ್ಡನ್ ನರೇಶ್, ಬಯೋಮ್ ಟ್ರಸ್ಟ್ ತಂಡದ ಸದಸ್ಯರಾದ ಶಿವಾನಂದ್, ನಾಗರಾಜ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

ಬಯೋಮ್ ಟ್ರಸ್ಟ್ ಸದಸ್ಯರು ಅಳವಡಿಸಲಾದ ಮಳೆನೀರು ಸಂಗ್ರಹಣಾ ವ್ಯವಸ್ಥೆಗಳ ಬಗ್ಗೆ ವಿವರಿಸಿದ ನಂತರ, ನಾಲ್ಕು ಕಟ್ಟಡಗಳಲ್ಲಿ ಅಳವಡಿಸಲಾಗಿರುವ ಅನುಷ್ಠಾನಗಳ ವಿವರ ನೀಡುವ ಮಾಹಿತಿ ಫಲಕಗಳನ್ನು ಟೇಪ್ ಕತ್ತರಿಸುವ ಮೂಲಕ ವ್ಯವಸ್ಥೆಯ ಉದ್ಘಾಟನೆಯನ್ನು ಮಾಡಲಾಯಿತು. ಈ ವಿದ್ಯಾರ್ಥಿ ನಿಲಯಗಳಲ್ಲಿ ಅಳವಡಿಸಲಾಗಿರುವ ಮಳೆ ನೀರು ಕೊಯ್ಲು ವ್ಯವಸ್ಥೆಯಲ್ಲಿ ಮೇಲ್ಚಾವಣಿಯ ನೀರನ್ನು ರೈನ್ ಬ್ಯಾರೆಲ್ ಮತ್ತು ಸಂಪ್ ಟ್ಯಾಂಕ್’ ನಲ್ಲಿ ಶೇಖರಿಸಿ ದಿನನಿತ್ಯದ ಬಳಕೆಗಳಿಗೆ ಉಪಯೋಗಿಸಲಾಗುತ್ತದೆ. ಹೆಚ್ಚುವರಿ ನೀರು ಇಂಗು ಬಾವಿಯ ಮೂಲಕ ಬೋರ್ವೆಲ್ ರಿಚಾರ್ಜ್ ಮತ್ತು ಅಂತರ್ಜಲ ಮರುಪೂರಣ ಮಾಡುತ್ತದೆ.

ನಂತರ ವಿದ್ಯಾರ್ಥಿಗಳ ಜೊತೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಜಲ್’ರವರು* “ಮೂಲಸೌಕರ್ಯಗಳನ್ನು ಸ್ಥಾಪಿಸಲಾಗಿದ್ದರೂ, ಅದನ್ನು ನಿರ್ವಹಿಸುವುದು ಮತ್ತು ಪರಿಣಾಮಕಾರಿಯಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು ಈಗ ಹಾಸ್ಟೆಲ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹಂಚಿಕೆಯ ಜವಾಬ್ದಾರಿಯಾಗಿದೆ” ಎಂದು ಒತ್ತಿ ಹೇಳಿದರು.

ರಾಜೇಂದ್ರ ಪ್ರಸಾದ್ ಅವರು ಮಾತನಾಡಿ “ಮಳೆನೀರು ಕೊಯ್ಲು ಕೇವಲ ನೀರಿನ ಸಂಗ್ರಹಣೆಗೆ ಸಂಬಂಧಿಸಿದ್ದಲ್ಲ. ಅಂತರ್ಜಲವನ್ನು ಮರುಪೂರಣ ಮಾಡುವಲ್ಲಿ, ಬಾಹ್ಯ ನೀರಿನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಮತ್ತು ನಾಳಿನ ನೀರಿನ ಸುರಕ್ಷತೆಯಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.

ಅನಿತರವರು ಈ ವಿದ್ಯಾರ್ಥಿನಿಲಯಗಳಿಗೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ಕಾರಣರಾದ ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಫೌಂಡೇಶನ್ ಮತ್ತು ಬಯೋಮ್ ಸಂಸ್ಥೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆ ತಿಳಿಸಿದರು.ಫಲಕಗಳನ್ನು

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *