Breaking News

ಇಟ್ಟಗಿ-ಕೊಟ್ಟೂರು ರಸ್ತೆಯರೈಲ್ವೆಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹ ವಾಹನ ಸಾವರರಿಗೆ ಹಾಗೂಸಾರ್ವಜನರಿಕರಿಗೆ ರಸ್ತೆ ಸಂಚಾರಕ್ಕೆ ಅಡಚಣೆ

A large amount of rainwater has accumulated on the railway bridge on the Ittagi-Kottur road, obstructing road traffic for vehicles, commuters and the general public.

ಜಾಹೀರಾತು

ಕೊಟ್ಟೂರು : ಕೊಟ್ಟೂರು ತಾಲೂಕಿನಲ್ಲಿ ಭಾನುವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು,  ಕೊಟ್ಟೂರು ಹೋಬಳಿಯಲ್ಲಿ 136.4 ಎಂಎಂ ಹಾಗೂ ಕೋಗಳಿ ಹೋಬಳಿಯಲ್ಲಿ 16.6 ಎಂಎಂ ಮಳೆಯಾಗಿರುತ್ತದೆ. ಇದುವರೆಗೂ ರಾಂಪುರದಲ್ಲಿ-2, ಜೋಳದಕೂಡ್ಲಿಗಿಯಲ್ಲಿ-1, ಕಾಳಾಪುರದಲ್ಲಿ-1 ಒಟ್ಟು 4 ಮನೆಗಳು ಬಾಗಶ: ಹಾನಿಯಾಗಿರುವುದಾಗಿ ತಿಳಿದುಬಂದಿರುತ್ತದೆ.  ಇಟ್ಟಿಗಿ-ಕೊಟ್ಟೂರು ರಸ್ತೆಯ ರೈಲ್ವೆ ಸೇತುವೆ ಕೆಳಗಡೆಯ ಮುಂದುಗಡೆಯ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಸಾರ್ವಜನರಿಕರ ಸಂಚಾರಕ್ಕೆ ಅಡಚಣೆಯಾಗಿರುವುದು ಗಮನಕ್ಕೆ ಬಂದ ಕಾರಣ ಲೋಕೋಪಯೋಗಿ ಮತ್ತು ಪಟ್ಟಣ ಪಂಚಾಯಿತಿಯ ಸಿಬ್ಬಂದಿಯೊಂದಿಗೆ ಜೆಸಿಬಿ ಯಂತ್ರದಿಂದ ಕಾಲುವೆ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ.  ಹಾಗೂ ಅಲಬೂರು ಹಗರಿಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವ ಕಾರಣ ಕೋಗಳಿ-ಕನ್ನಿಹಳ್ಳಿ ಸಂಪರ್ಕ ಸೇತುವೆ ರಸ್ತೆಯ ಮೇಲೆ ನೀರು ಹರಿಯುವುತ್ತಿರುವುದರಿಂದ ಸಾರ್ವಜನಿಕರು ಓಡಾಡದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕ ಬೇಲಿ ಹಾಕಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ರಾಂಪುರ ಹಾಗೂ ಹಿರೇವಡ್ರಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಪರಿಶೀಲನೆ ಮಾಡಲಾಗಿದೆ.

ಹವಮಾನ ಇಲಾಖೆಯ ವರದಿ ಪ್ರಕಾರ ಇನ್ನೂ 2 ದಿನ ಹೆಚ್ಚಿನ ಮಳೆಯಾಗಲಿರುವುದರಿಂದ  ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರಸ್ಥಾನದಲ್ಲಿದ್ದು, ಹಾನಿಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ನೀಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿರುತ್ತದೆ ಎಂದು ತಹಶೀಲ್ದಾರರಾದ ಅಮರೇಶ.ಜಿ.ಕೆ ರವರು ಮಾಹಿತಿಯನ್ನು ನೀಡಿದರು.

ಕೊಟ್ – 1

*ಇಂದೀರಾ ಕ್ಯಾಂಟಿನ್ ಉದ್ಘಾಟನಾ ವೇಳೆ ಕೊಟ್ಟೂರು-ಇಟ್ಟಗಿ ರೈಲ್ವೇ ಸೇತುವೆ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ, ಮಳೆ ಸಂದರ್ಭದಲ್ಲಿ ಸಂಪೂರ್ಣ ನೀರು ಹೊರ ಹೋಗದಂತೆ ಸಂಗ್ರಹಗೊಂಡು ವಾಹನ ಸಾವರರಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿ ಭಾರಿ ಮಳೆಯ ಸಂದರ್ಭದಲ್ಲಿ ಅನಾನುಕೂಲವಾಗುವ ಬಗ್ಗೆ ಸಂಸದರಿಗೆ ಪ್ರೆಶ್ನಿಸಿದಾಗ, ಪರಿಶೀಲಿಸಿ ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು, ಇದೀಗ ಎಂದಿನಂತೆ ಭಾನುವಾರ ರಾತ್ರಿ ಸುರಿದಾ ಭಾರಿ ಮಳೆಗೆ, ನೀರು ಸಂಗ್ರಹ ಗೊಂಡು ತೊಂದರೆ ಉಂಟಾಗಿದೆ, ಪ್ರತಿ ಭಾರಿಯೂ ನಮ್ಮ‌ ಜಿಲ್ಲೆಯ ಸಂಸದರಿಗೆ, ಅನೇಕ ಭಾರಿ ಮಾದ್ಯಮ ಮುಖಾಂತರ ಎಚ್ಚರಿಸಿದರು, ಆಶ್ವಾಸನೆಯೊಂದೆ ಸಿಕ್ಕಿದೆ ಇಲ್ಲಿನ ಮತದಾರರಿಗೆ, ಆದ್ದರಿಂದ ಈ ಭಾರಿ ನೂತನ ಸಂಸದರಾಗಿ ಮತಾದಾರರ ಅಧಿಕ ಬೆಂಬಲದಿಂದ ಸಂಸದಾರ ತಮ್ಮ ಮೇಲೆ ಇಲ್ಲಿನ ಮತದಾರರು ಆಗಾದವಾದ ಭರವಸೆಯನ್ನು ಇಟ್ಟುಕೊಂಡಿದ್ದಾರೆ ಈ ಅವೈಜ್ಞಾನಿಕ ಸೇತುವೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಂಡುತ್ತೀರೆಂದು ಎ ಐ ಡಿ ಆರ್ ಎಂ ತಾಲೂಕು ಅಧ್ಯಕ್ಷ ಟಿ ಕೊಟ್ರೇಶ್ ಹೇಳಿದರು

ಕೊಟ್ – 2
ಇಟ್ಟಿಗಿ-ಕೊಟ್ಟೂರು ಮತ್ತು ಕೆ ಅಯ್ಯನಹಳ್ಳಿ ರಸ್ತೆಯ ರೈಲ್ವೆ ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ನೀರು, ಸಂಗ್ರಹವಾಗಿ ಸಾರ್ವಜನರಿಕರಿಗೆ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಬಳ್ಳಾರಿ ಸಂಸದರಾದ ತುಕಾರಾಮ್ ರವರು ಈ ಎಲ್ಲಾ ಸೇತುವೆಯನ್ನು ಪರಿಶೀಲಿಸಿ ಶೀಘ್ರವಾಗಿ ಸರಿಪಡಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು:- ಎ ಐ ಡಿ ಆರ್ ಎಂ ತಾಲೂಕು ಸಂಘಟನಾ ಕಾರ್ಯದರ್ಶಿ ಹರೀಶ್ ಕುಮಾರ್ ಒತ್ತಾಯಿಸಿದರು.

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *