Breaking News

ಕೊಪ್ಪಳ :ಜೂ.15ರಂದು ಜಿಲ್ಲಾಮಟ್ಟದಮುಂಗಾರು ಕಾವ್ಯೋತ್ಸವ, ಎಚ್.ಎಸ್.ವಿಗೆನುಡಿನಮನ !

Koppal: District level Monsoon Poetry Festival on June 15th, H.S.V.’s speech!

ಜಾಹೀರಾತು

ಕೊಪ್ಪಳ : ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ಖ್ಯಾತ ಕವಿ ಡಾ. ಎಚ್..ಎಸ್. ವೆಂಕಟೇಶ್ ಮೂರ್ತಿ ಅವರಿಗೆ ನುಡಿನಮನ ಹಾಗೂ ಜಿಲ್ಲಾ ಮಟ್ಟದ ಮುಂಗಾರು ಕಾವ್ಯೋತ್ಸವ ( ಚುಟುಕು, ಕವಿತೆ, ಶಾಹಿರಿ ಹಾಗೂ ಗಜಲ್ ವಾಚನಗಳ ಝಲಕ್ ) ಕಾಯ೯ಕ್ರಮ ಜೂನ್ ೧೫ರಂದು ಮುಂಜಾನೆ ೧೦.೩೦ಕ್ಕೆ ಕುಷ್ಟಗಿ ರಸ್ತೆಯ ಪದಕಿ ಲೇಔಟ್ ನ ಶಾಂತಿ ನಿವಾಸದಲ್ಲಿ ಜರುಗಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ರವಿತೇಜ ಅಬ್ಬಿಗೇರಿ ಅವರು ದಿ . ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಬದುಕು ಬರಹ ,ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾಹಿತಿಗಳಾದ ಡಾ.ಮಹಾಂತೇಶ್ ಮಲ್ಲನಗೌಡರ , ಶಿ.ಕಾ. ಬಡಿಗೇರ, ಸಾವಿತ್ರಿ ಮುಜಮದಾರ್ , ಜಿ.ಎಸ್.ಗೋನಾಳ , ಫಕೀರಪ್ಪ ವಜ್ರಬಂಡಿ , ಕೊಟ್ರೆಶ್ ಜವಳಿ ಮುಂಡರಗಿ, ದೊಡ್ಡಯ್ಯ ಗುರುಸ್ಥಳ ಮಠ , ಅಮೀನಸಾಬ್ ಮುಲ್ಲಾ, ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಭಾಗವಹಿಸುವ ಕವಿಗಳಾದ ಎ. ಪಿ. ಅಂಗಡಿ, ರವಿ ಹಿರೇಮನಿ.ಪುಷ್ಪ ಲತಾ ಯೋಳಭಾವಿ., ಶಿವಮ್ಮ ಗುರುಸ್ಥಲ ಮಠ. ಶಾರದಾ ಶ್ರಾವಣಸಿಂಗ್ ರಜಪೂತ. ಡಾ. ಪ್ರಕಾಶ್ ಹಳ್ಳಿಗುಡಿ, ನರಸಿಂಹ ಗುಂಜಳ್ಳಿ,
ಪ್ರದೀಪ್ ಹದ್ದಣ್ಣವರ್. ಮಹಾಲಕ್ಷ್ಮಿ ಮುಂಡರಗಿ.ಪೂಜಾ ವಣಗೇರಿ. ಸೋಮಶೇಖರ್ ಕಂಚಿ. ಅನ್ನಪೂರ್ಣಾ ಮಹೇಶ್ ಮನ್ನಾಪುರ , ವೀರೇಶ ಇಂದರಗಿ.
ಬಸವರಾಜ ತಿರುಮಲಾಪುರ. ಎಚ್, ಆರ್ ವಸ್ತೃದ.
,ಮಹಾಂತೇಶ, ಮುದುಕನಗೌಡ್ರು. ಅಥಣಿ.
ಈರಪ್ಪ ಬಿಜಲಿ. ಅಕ್ಕಮಹಾದೇವಿ ಅಂಗಡಿ, ಈರಯ್ಯ ಕುತ೯ಕೋಟಿ ಮೊದಲಾದವರು ಕವಿತೆ ವಾಚಿಸಲಿದ್ದಾರೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಆರ್.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *