Breaking News

ಕಲ್ಪತರು ರತ್ನ ಡಾ.ಜಿ.ಎಸ್.ಶ್ರೀಧರ್ ರವರ 51ನೇ ಹುಟ್ಟು ಹಬ್ಬ ಆಚರಣೆ.

Kalpataru Ratna Dr. GS Sridhar’s 51st birthday celebration.

ಜಾಹೀರಾತು

ತನ್ನ ಪ್ರಾಣವನ್ನು ಲೆಕ್ಕಿಸದೆ ಕೋವಿಡ್ ಸಮಯದಲ್ಲಿ ನೀಡಿದ ಸೇವೆ ಅವಿಸ್ಮರಣೆಯ.

ತಿಪಟೂರು: ಕೋವಿಡ್ ಸಮಯದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ನೀಡಿದ ಸೇವೆ ಅವಿಸ್ಮರಣೆಯವಾದದ್ದು. ಸಮಾಜ ಸೇವೆ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಡಾ.ಜಿ.ಎಸ್.ಶ್ರೀಧರ್ ರವರು ಇನ್ನು ಹೆಚ್ಚಿನ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ದೇವರು ಕುಟುಂಬ ವರ್ಗಕ್ಕೆ ಆಯುರ್ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಬಿ. ಕುಮಾರಸ್ವಾಮಿ ಪ್ರಾರ್ಥಿಸಿದರು.

ನಗರದ ಕೆ.ಆರ್. ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ, ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ ರವರು,ಡಾ. ಶ್ರೀಧರ್ ರವರು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗೆ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ತಾಲೂಕಿನಲ್ಲಿ ಚಿರ ಶಾಶ್ವತವಾಗಿ ಉಳಿದಿದ್ದು, ಸಮಾಜ ಸೇವೆ ಎನ್ನುವುದು ಮಹತ್ಕಾರ್ಯಗಳಲ್ಲಿ ಒಂದಾಗಿದೆ. ದಿನನಿತ್ಯ ನಗರದಲ್ಲಿ ಮಾಡುತ್ತಿರುವ ಅನ್ನದಾಸೋಹ ಕಾರ್ಯಕ್ರಮ ಅವರ ಹೆಸರಿಗೆ ಗೌರವ ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜಿ.ಎಸ್.ಶ್ರೀಧರ್ ರವರು, ನಮ್ಮ ತಂದೆ-ತಾಯಿಯವರ, ಗುರು ಹಿರಿಯರ, ಮಠ ಮಾನ್ಯಗಳ ಶ್ರೀಗಳು ಹಾಗೂ ಹಿತೈಷಿಗಳ ಆಶೀರ್ವಾದದಿಂದ ಹಾಗೂ ಅವರ ಪ್ರೋತ್ಸಾಹದಿಂದ, ಜವಾಬ್ದಾರಿಯಿಂದ ಇಂತಹ ಅಳಿಲು ಸೇವೆಯನ್ನು ಮಾಡುವಂತಹ ಅವಕಾಶ ಲಭಿಸಿದೆ. ಮುಂದೆ ಸಮಾಜ ಸೇವೆಯನ್ನು ಮುಂದುವರಿಸುವ ಮಹತ್ತರವಾದ ಜವಾಬ್ದಾರಿಯನ್ನು ಇಂತಹ ಗೌರವ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚಿಸಿವೆ. ಸಮಾಜದ ಬಂಧುಗಳು ತಮ್ಮ ತಂದೆ-ತಾಯಿಯವರನ್ನು ಯಾವುದೇ ವೃದ್ಧಾಶ್ರಮಕ್ಕೆ ಸೇರಿಸದೆ, ತಂದೆ-ತಾಯಿಗಳನ್ನು ಪೋಷಿಸಿ, ಬೆಳೆಸಿದಾಗ ಮಾತ್ರ ವೃದ್ಧಾಶ್ರಮದ ಕನಸನ್ನು ಅಳಿಸಲು ಸಾಧ್ಯವಾಗುತ್ತದೆ. ಹುಟ್ಟು ಹಬ್ಬದ ಸಂದರ್ಭದಲ್ಲಿ ಹರಸಿ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ತಿಳಿಸಿದರು.

ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ.ಕುಮಾರ್ ಮಾತನಾಡಿ,ನನ್ನ ಮಗಳ ಮತ್ತು ಡಾ. ಜಿ.ಎಸ್.ಶ್ರೀಧರ್ ರವರ ಹುಟ್ಟುಹಬ್ಬ ಒಂದೇ ದಿನದಂದು ಬರುತ್ತಿದ್ದು, ಆ ನಿಟ್ಟಿನಲ್ಲಿ ಪ್ರತಿವರ್ಷ ಈ ವೃದ್ಧಾಶ್ರಮದಲ್ಲಿ ಆಹಾರ ಸಾಮಗ್ರಿಗಳನ್ನು, ಹಣ್ಣು ಮತ್ತು ಬ್ರೆಡ್ಡು, ಸಿಹಿ ವಿತರಿಸಿ ಹಿರಿಯ ನಾಗರೀಕರೊಂದಿಗೆ ಆಚರಿಸಲಾಗುತ್ತಿದೆ. ಸಮಾಜ ಸೇವೆ ಮಾಡುವುದು ದೇವರ ಕೆಲಸದಷ್ಟೇ ಪವಿತ್ರವಾದದ್ದು. ಜನರ ಸೇವೆ ಜನಾರ್ದನ ಸೇವೆ ಎಂದು ನಂಬಿರುವ ಡಾ. ಶ್ರೀಧರ್ ರವರ ಸೇವೆ ನಮ್ಮ ತಾಲೂಕಿನ ಜನರಿಗೆ ಮತ್ತಷ್ಟು ಸಿಗಲಿ ಎಂದರು.

ನಗರಸಭಾ ಸದಸ್ಯರಾದ ಮಹೇಶ್, ಲೋಕನಾಥ್ ಸಿಂಗ್,ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ಗೌಡ, ಶಿವಕುಮಾರ್ ಮತ್ತಿಘಟ್ಟ ರಾಘವೇಂದ್ರ,ಸಂಘಟನೆಯ ನಗರ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ತಿಲಕ್ ಕುಮಾರ್, ಸತೀಶ್,,ಮುರಳಿ ಶಿವಣ್ಣ ಮತ್ತು ಉಮೇಶ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಹಾಗೂ ವೃದ್ಧಾಶ್ರಮದ ಹಿರಿಯ ನಾಗರೀಕರು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *