Breaking News

ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟನೆ

Inauguration of Millet Support Price Purchase Centre

ಜಾಹೀರಾತು

ಕೊಟ್ಟೂರು : ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಗುಣಮಟ್ಟದ ರಾಗಿ ಖರೀದಿಸಲು ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ . ನೊಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ವಹಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಐ ದಾರುಕೇಶ್ ಹೇಳಿದರು.
ಮಂಗಳವಾರ ಎಪಿಎಂಸಿ ಯಲ್ಲಿ ಸರ್ಕಾರಿ ಬೆಂಬಲ ಬೆಲೆಯಲ್ಲಿ ರಾಗಿ ಕೇಂದ್ರದಲ್ಲಿ ರೈತರಿಂದ ಖರೀದಿ ಕೇಂದ್ರ ಉದ್ಘಾಟನೆ ಮಾಡಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಮಾತನಾಡಿದರು.
ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನುಯ ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು ಖೀರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತದೆ ಸರ್ಕಾರದ ಮಾನದಂಡಗಳ ಅನ್ವಯ ;ಎಫ್‌ಎಕ್ಯು ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೆಕು ಖರೀದ ಏಜೆನ್ಸಿಯ ಹಿರಿಯ ಅದಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೆಕು ಎಂದು ಸೂಚಿಸಿದರು.
ಸೂಕ್ತ ದಾಸ್ತಾನಿಗಾಗಿ ರಾಗಿ ಖರೀದ ಕೇಂದ್ರಗಳಲ್ಲಿ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ರಾಗಿಯನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ಸೂಚನೆ ನೀಡದರು.
ಎಪಿಎಂಸಿ ಕಾರ್ಯದಶಿ ವೀರಣ್ಣ ಮಾತನಾಡಿ ರಾಗಿ ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾAಶದಲ್ಲಿ ನೊಂದಣಿಯಾಗಿರಬೇಕು ಒಂದುವೇಳೆ ರೈತರು ನೊಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾAಶದಲ್ಲಿ ನೊಂದಣಿ ಮಾಡಿಕೊಂಡು ತಾವು ಬೆಳೆೆದ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ರಾಗಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ನೊಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ಸ್ ಐಡಿ ಆದಾರ್ ಸಂಕ್ಯೆಗೆ ಜೋಡಣೆಯಾದ ತಮ್ಮ ಬ್ಯಾಂಕ್ ಖಾತೆಯ ವಿವರ ನೀಡಬೇಕಿದೆ ಎಂದು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಎಪಿಎಂಸಿ ಉಪಾದ್ಯಕ್ಷ ಎಂ.ಶಿವಣ್ಣ, ಸದಸ್ಯರಾದ ಚಿರಿಬಿ ಕೊಟ್ರೇಶ್, ಶಿವಲಿಂಗಪ್ಪ, ನೂರ್ಯ ನಾಯ್ಕ, ವಿ.ಎಸ್.ಎಸ್.ಎನ್ ಅಧ್ಯಕ್ಷ ಸತೀಶ್ ಹರಾಳು, ವರ್ತಕರಾದ ಬಿ.ಎಸ್.ವೀರೇಶ್, ಚಾಪಿ ಚಂದ್ರಪ್ಪ, ನೋಡಲ್ ಅದಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *