Breaking News

ಶಾಸಕ ಮುನಿರತ್ನ ವಿರುದ್ಧ ಕ್ರಮಕ್ಕೆ ಛಲವಾದಿ ಮಹಾಸಭಾ ಸಂಘ ಒತ್ತಾಯ.

Chalavadi Mahasabha Sangh demands action against MLA Munirath.

ಜಾಹೀರಾತು

ಮಾನ್ವಿ :ಜಾತಿ ನಿಂದನೆ ಮಾಡಿದ ಶಾಸಕ ಮುನಿರತ್ನ ರವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿ ಮಾತನಾಡಿದ ಅವರು ಶಾಸಕರಾದ ಮುನಿರತ್ನ ಅವರು ದಲಿತ ವಿರೋಧಿ ಹೇಳಿಕೆ ನೀಡಿರುವುದು ಸರಿಯಲ್ಲ, ಶಾಸಕ ಮುನಿರತ್ನ ಜಾತಿ ನಿಂದನೆ ಮಾಡಿ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ಮುನಿರತ್ನರವರು ಸಾಮಾನ್ಯ ಜ್ಞಾನವಿಲ್ಲದವರಂತೆ ಜಾತಿನಿಂದನೆ ವ್ಯಕ್ತಿಗತ ಅಗೌರವ ಪದಗಳನ್ನು ಬಳಸಿರುವುದನ್ನು ನೋಡಿದರೆ ಇವರ ಮನಸ್ಥಿತಿ ಎಂತಹದು ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಬಂದು 78 ವರ್ಷ ಗತ್ತಿಸಿದರು ಹಾಗೂ ಡಾ.ಬಿ.ಆರ್.ಅಂಬೇಡ್ಕರವರು ಬರೆದಿರುವ ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರು ಕೂಡ ಇನ್ನು ಜಾತಿ ನಿಂದನೆ ಮಹಿಳಾ ನಿಂಧನೆ, ದಿನದಲಿತರ ನಿಂದನೆ ಇಂತವರಯಿಂದಲೇ ಇಂತಹ ಘಟನೆಗಳು ಜಾಸ್ತಿ ಸಮಾಜದಲ್ಲಿ ಜರುಗುತ್ತಿವೆ. ಕೂಡಲೇ ಶಾಸಕರಾದ ಮುನಿರತ್ನರವರು ಶಾಸಕರಾಗಲು ಅರ್ಹರು ಇರುವುದಿಲ್ಲ. ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಛಲುವಾದಿ ಮಹಾಸಭಾದ ಅಧ್ಯಕ್ಷರಾದ ಶ್ರಾವಣ ಕುಮಾರ್ ಅರೋಲಿ, ಸಂಗನ ಬಸವ, ಪದಾಧಿಕಾರಿಗಳಾದ ನರಸಪ್ಪ ಜೂಕೂರು, ಶಿವಪ್ಪ ಬೆಟ್ಟದೂರು, ವಿಶ್ವನಾಥ ನಂದಿಹಾಳ, ಮಲ್ಲಿಕಾರ್ಜುನ ಜಾನೇಕಲ್, ಬಸವರಾಜ ಬಾಗಲವಾಡ, ಮೌನೇಶ ಅರೋಲಿ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.