A speech by The Raja Vasant Nayaka to A15
ಮಾನ್ವಿ : ಇತ್ತೀಚೆಗೆ ನಿಧನರಾದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಮತ್ತು ಪರಿಸರ ಪ್ರೇಮಿ ದಿ ರಾಜಾ ವಸಂತ ನಾಯಕ ಇವರ ಅವರ ಸ್ಮರಣಾರ್ಥವಾಗಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಗಾ ಕರೂಕೆ ಸ್ಟುಡಿಯೋದ ವ್ಯವಸ್ಥಾಪಕರಾದ ದೀಪಾ ಶ್ರೀ ರವರು ತಿಳಿಸಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಅಗಸ್ಟ್ 15ರಂದು ನಗರದ ಎಪಿಎಂಸಿ ಆವರಣದಲ್ಲಿ ನುಡಿ ನಮನ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಕಾರಣ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಹಾಗೂ ಕಲಾ ಪ್ರೇಮಿಗಳು, ರಾಜಕಾರಣಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಭಾನ್ ಬೇಗ್ ಮತ್ತು ಶೇಖ್ ಮೈನುದ್ದೀನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.