Vigilance in Koppal district
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ:
ಕೊಪ್ಪಳ ಸೆಪ್ಟೆಂಬರ್ 11 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವಂತೆ ಜನಜಾಗೃತಿ ಮೂಡಿಸಲು ಜಿಲ್ಲಾಡಳಿತದಿಂದ ಪ್ರಚಾರ ಕಾರ್ಯಕ್ರಮಗಳು ಬಿರುಸಿನಿಂದ ನಡೆಯುತ್ತಿವೆ.
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 50 ಕಿಮೀ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಗದಗ ಜಿಲ್ಲೆಯ ಮಾನವ ಸರಪಳಿಯು ಕೊಪ್ಪಳ ಜಿಲ್ಲೆಯಲ್ಲಿ ಸೆಪ್ಟೆಂಬರ್ 15ರಂದು ಬೆಳಗ್ಗೆ 8.30ಕ್ಕೆ ಬೆಳಗಟ್ಟಿ ಗ್ರಾಮದಿಂದ ಪ್ರಾರಂಭವಾಗಿ ಅಳವಂಡಿ-ಹಿರೇಸಿAದೋಗಿ-ಚಿಕ್ಕಸಿAದೋಗಿ-ಕೊಪ್ಪಳ ನಗರ-ಗಿಣಿಗೇರ-ಹೊಸಳ್ಳಿ ಮಾರ್ಗವಾಗಿ ಮುನಿರಾಬಾದನ ಗಣೇಶ ಗುಡಿವರೆಗೆ ಕೊಪ್ಪಳ ಜಿಲ್ಲೆಯ ಮಾನವ ಸರಪಳಿ ನಿರ್ಮಿಸಬೇಕಿರುತ್ತದೆ. ಅಲ್ಲಿಂದ ವಿಜಯನಗರ ಜಿಲ್ಲೆಯಲ್ಲಿ ಮಾನವ ಸರಪಳಿ ಮುಂದುವರಿಯುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಲು ವ್ಯಾಪಕವಾಗಿ ಜನ ಜಾಗೃತಿ ನಡೆಸಲಾಗುತ್ತಿದೆ.
ಧ್ವನಿವರ್ಧಕ ಮೂಲಕ ಪ್ರಚಾರ : ಕೊಪ್ಪಳ ತಾಲೂಕು ಪಂಚಾಯತ್ ಸಹಯೋಗದಲ್ಲಿ ಕೊಪ್ಪಳ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಿ ಕಾರ್ಯಕ್ರಮದ ಬಗ್ಗೆ ಪ್ರಚಾರ ನಡೆಸಲಾಯಿತು.
ಬ್ಯಾನರ್ ಹಾಕಿ ಪ್ರಚಾರ : ಕೊಪ್ಪಳ ನಗರಸಭೆಯ ಸಹಯೋಗದಲ್ಲಿ ಕೊಪ್ಪಳ ನಗರ ಸೇರಿದಂತೆ ವಿವಿಧೆಡೆ ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನದ ಬ್ಯಾನರ್ ಹಾಕಿ ಪ್ರಚಾರ ನಡೆಸಲಾಯಿತು.
ರೂಟ್‌ಮ್ಯಾಪ್ ನಂಬರಿಂಗ್ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಮಾನವ ಸರಪಳಿ ನಿರ್ಮಾಣದ ಕಾರ್ಯಕ್ಕಾಗಿ ಕೊಪ್ಪಳದಲ್ಲಿ ರೂಟ್‌ಮ್ಯಾಪ್ ಪ್ರಕಾರ ನಂಬರ್ ಹಾಕಲಾಯಿತು.