Breaking News

ನಮ್ಮ ನಡುವೆ ಈಗಿಲ್ಲದ ಕೆ.ಶಿವರಾಮ

Nam’ma naḍuve īgillada ke.ŚivarāmaK. Shivaram who is no longer with us

ಶ್ರೀ.ಕೆ.ಶಿವರಾಮ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲ ಅಂದಾಗ ಸಂಕಟವಾಯ್ತು. ಹಳೆಯ ನೆನಪುಗಳು ನುಗ್ಗಿ ಬಂದವು. ಅಪ್ಪ ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದ ದಿನಗಳವು. ಆಗ ಕೆ.ಶಿವರಾಮ ಯಾದಗಿರಿಯ ಉಪ ವಿಭಾಗ ಅಧಿಕಾರಿಯಾಗಿ ಬಂದರು. ಜನ ಸಾಮಾನ್ಯರ ಬಗೆಗೆ ಪ್ರೀತಿ ವಿಶ್ವಾಸ ಹಾಗೂ ನೋವುಗಳನ್ನು ಅರಿತಿದ್ದ ಶಿವರಾಮ ಸರ್, ಸರಕಾರದ ಸೌಲತ್ತುಗಳನ್ನು ಜನ ಸಾಮಾನ್ಯರಿಗೆ ತಲುಪಲಿ ಎಂದು ಕಾಳಜಿ ವಹಿಸಿದ್ದರು. ಇದನ್ನು ತಿಳಿದುಕೊಂಡಿದ್ದ ಅಪ್ಪ ಲಂಕೇಶ್ ಪತ್ರಿಕೆಗೆ ವರದಿ ಮಾಡಿದ್ದರು.

ನಮ್ಮ ಭಾಗದಲ್ಲಿ ಆಗ ಪ್ರತಿ ಜಿಲ್ಲೆಯಲ್ಲಿ ಒಬ್ಬೊಬ್ಬ ವಿಭಾಗಾಧಿಕಾರಿ ಇರುತ್ತಾರೆಂದೆ ಗೊತ್ತಿರಲಿಲ್ಲ. ಈ ಸಂಗತಿ ಗೊತ್ತಾಗಿದ್ದು ಕೆ.ಶಿವರಾಮ ಅವರ ವಿಭಿನ್ನ ನಡವಳಿಕೆಯಿಂದ. ಪತ್ರಿಕೆಯಲ್ಲಿ ಕೆ. ಶಿವರಾಮ ಕುರಿತು ಬಂದಾಗ ನಮ್ಮ ಭಾಗದ ಜನ‌ಸಾಮಾನ್ಯರಿಗೇನೋ ಖುಷಿ ಆಗಿತ್ತು. ಆದರೆ ಪಟ್ಟಭದ್ರರಿಗೆ ಕೆಲವು ರಾಜಕಾರಣಿಗಳಿಗೆ ಇರಿಸು ಮುರಿಸು ಉಂಟಾಗಿತ್ತು.

ರಾಜಕೀಯ ದುಷ್ಟ ಕೈಗಳು, ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದವು. ಇದನ್ನು ಸಹಿಸದ ಕೆ.ಶಿವರಾಮ ಸಿಡಿದೆದ್ದರು. ಆಗ ಪಟ್ಟಭದ್ರರು ಹಲ್ಲೆ ಮಾಡಿದರು. ಆಗ ಶಿವರಾಮ್ ಕೊಂಚ ನೊಂದಿದ್ದರು.

ಇದಾದ ಎಷ್ಟೋ ವರ್ಷಗಳ ನಂತರ ಅವರು ಮೈಸೂರಿನ‌ ಮಹಾ ನಗರ ಪಾಲಿಕೆ ಕಮೀಶನರ ಆಗಿದ್ದಾಗ ಅವರನ್ನು ಕಂಡು ಸಂದರ್ಶನ ಮಾಡಿದ್ದೆ. ಆಗ ಯಾವುದೋ ಚಿತ್ರದ ಚಿತ್ರಿಕರಣ ನಡೆದಿದ್ದ ನೆನಪು. ಆ ಬ್ಯೂಸಿ ಸೆಡ್ಯೂಲನಲ್ಲಿಯೂ ನನ್ನನ್ನು ಗುರುತಿಸಿ ಮಾತನಾಡಿದರು. ಅಪ್ಪನ ಆರೋಗ್ಯ, ಓದು- ಬರಹ ಮುಂತಾದವುಗಳ ಕುರಿತು ವಿಚಾರಿಸಿದರು.

ಅವರೊಂದಿಗೆ ಮಾಡಿದ್ದ ಸಂದರ್ಶನ ಅಗ್ನಿ ಅಂಕುರದಲ್ಲಿ ಪ್ರಕಟಿಸಿದೆ. ಆಗ ನಮ್ಮ ಲ್ಯಾಂಡ ಫೋನ್ ಗೆ ಕರೆ ಮಾಡಿ ಸಂತೋಷ ವ್ಯಕ್ತ ಪಡಿಸಿದ್ದರು. ಮತ್ತೊಂದು ಮಾತು ಅವರು ಕನ್ನಡದ ಮೊಟ್ಟ ಮೊದಲ ಐಎಎಸ್ ಅಧಿಕಾರಿಗಳು. ಇವರಿಗೆ ಕನ್ನಡದ ಬಗೆಗೆ ಸರಿಯಾಗಿ ಮಾರ್ಗದರ್ಶನ ಮಾಡಿದವರು ಡಾ.ಸಾ.ಶಿ.ಮರುಳಯ್ಯ. ಅವರು ಅಪ್ಪನ ಆತ್ಮೀಯರು.

ಕೊಪ್ಪಳದಲ್ಲೊಂದು ಸಲ ಜಿಲ್ಲಾಧಿಕಾರಿಯಾಗಿದ್ದಾಗ ಭೇಟಿ ಆಗಿದ್ದೆ. ಮತ್ತೆ ಅವರಷ್ಟಕ್ಕೆ ಅವರು, ನನ್ನಷ್ಟಕ್ಕೆ ನಾನು. ಕೃಷ್ಣೆ ಭೀಮೆಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅವರು ಸಿನೆಮಾ ರಾಜಕೀಯ ಇತ್ಯಾದಿಗಳಲ್ಲಿ ತೊಡಗಿಕೊಂಡರು.

ರಾಜಕೀಯ ಪಕ್ಷದ ಆಯ್ಕೆ ವಿಷಯಕ್ಕೆ ಬಂದಾಗ ಅವರು ಎಡವಿದ್ದರು. ಈಗ ಹಠಾತ್ತನೆ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಬುದ್ದ ಬಸವ ಅಂಬೇಡ್ಕರ್ ಅವರ ವಿಚಾರಧಾರೆಯ ಬಗೆಗೆ ಒಲವಿದ್ದ ಸ್ನೇಹ ಜೀವಿಯೊಬ್ಬರನ್ನು ಕಳಕೊಂಡ ನೋವು ಕಾಡುತ್ತಿದೆ

ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.