Puttaraja Gavai Sadbhavan award to “Ritakavi” Shankarappaballekatta

ತಿಪಟೂರು : ಪಂಡಿತ್ ಡಾ. ಪುಟ್ಟರಾಜ ಗವಾಯಿಗಳವರ 110ನೇ ಜಯಂತೋತ್ಸವವನ್ನು ಶ್ರೀ ವೀರೇಶ್ವರ ಪುಣ್ಯಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ ಕಲ್ಲಯ್ಯಜ್ಜ ನವರ ನೇತೃತ್ವದಲ್ಲಿ ಡಾ ವಿ ಬಿ ಹಿರೇಮಠ್ ಮೆಮೋರಿಯಲ್ ಪ್ರತಿಷ್ಠಾನ ಮತ್ತು ಅಶ್ವಿನಿ ಪ್ರಕಾಶನದ ಸಹಯೋಗದೊಂದಿಗೆ ನೇತ್ರದಾನ ಶಿಬಿರ ಆರೋಗ್ಯ ಶಿಬಿರ ಹಾಗೂ ಕವಿ ಕಾವ್ಯ ಗೋಷ್ಠಿ ಮತ್ತುರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ವಿಮಲೇಶ್ವರ ನಗರದ ಬಂಜಾರ ಸಮುದಾಯ ಭವನದಲ್ಲಿ ಹಮ್ಮಿಕೊಂಡು ತಿಪಟೂರಿನ ರೈತಕವಿ ಡಾ. ಪಿ ಶಂಕರಪ್ಪಬಳೆಕಟ್ಟೆರವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸದ್ಗುರು ಡಾ.ಪುಟ್ಟರಾಜ ಗವಾಯಿ ಅವರ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರ ಶೀಲವಂತ ಹಿರೇಮಠದ ಧರ್ಮರತ್ನ ಡಾ. ಕೈಲಾಸನಾಥ ಮಹಾಸ್ವಾಮಿಜಿಯವರು ಸಾನಿಧ್ಯ ವಹಿಸಿದ್ದರು ಸಮಾರಂಭದ ಉದ್ಘಾಟನೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ನೆರವೇರಿಸಿದರು ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮತಿ ಡಾ. ವ್ಹಿ ವ್ಹಿ ಹಿರೇಮಠ ವಹಿಸಿದ್ದರು ,ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಅನಂತ್ ಕಾರ್ಕಳ,ಆಂನದಯ್ಯ ದಾನಯ್ಯ ವಿರಕ್ತಮಠ , ರೂಪದರ್ಶಿ ಡಾ. ಹೇಮಾಕ್ಷಿ ಕಿಸೇಸೂರ, ಭೀಮ್ ಸಿಂಗ್ ರಾಥೋಡ್ ಶ್ರೀಮತಿ ಅನ್ನಪೂರ್ಣ ಬಸವರಾಜ್ ಸೌಭಾಗ್ಯ ಅಶೋಕ ಕೊಪ್ಪ, ಹಾಗು ನಾಡಿನಾದ್ಯಂತ ಆಗಮಿಸಿದ್ದ ವಿವಿಧ ಕ್ಷೇತ್ರದ ಗಣ್ಯರು, ಮತ್ತು ಗವಾಯಿಗಳ ಭಕ್ತ ಸಮೂಹ ಜಯಂತ್ಯೋತ್ಸವದಲ್ಲಿ ಸಿಹಿ ಸವಿ ಸಾಹಿತ್ಯ ಪ್ರಸಾದವನುಂಡು ವಿಜ್ರಂಭಿಸಿದರು.