Gandhi Jayanti: Khadi shop started in District Administration Bhawan
ಸಾಂಧರ್ಭಿಕ ಚಿತ್ರ
ಕೊಪ್ಪಳ ಸೆಪ್ಟೆಂಬರ್ 25 (ಕರ್ನಾಟಕ ವಾರ್ತೆ): ಗಾಂಧೀ ಜಯಂತಿ ಪ್ರಯುಕ್ತ ಖಾದಿ ಬಟ್ಟೆ ಖರೀದಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಆದೇಶದಂತೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಖಾದಿ ಸಂಘಸಂಸ್ಥೆಗಳಿಂದ ಖಾದಿ ಮಳಿಗೆಯನ್ನು ಸೆಪ್ಟೆಂಬರ್ 25ರಂದು ಆರಂಭಿಸಲಾಗಿದೆ.
ಈ ಖಾದಿ ಮಳಿಗೆಯು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 02ರ ವರೆಗೆ ನಡೆಯಲಿದ್ದು, ಅದರಲ್ಲಿ ಖಾದಿ ಉತ್ಪನ್ನಗಳಾದ ಖಾದಿ ಬಟ್ಟೆಗಳು, ರೇಷ್ಮೇ ಬಟ್ಟೆಗಳು, ರೆಡಿಮೇಡ್ ಡ್ರೆಸಸ್ಸ್, ಜಮುಖಾನ, ಟವಲುಗಳು ಸೇರಿದಂತೆ ಗ್ರಾಮೋದ್ಯೋಗ ಉತ್ಪನ್ನಗಳಾದ ಅಗರಬತ್ತಿ, ಸಾಬೂನು, ಜೇನುತುಪ್ಪ ಇತ್ಯಾದಿಗಳು ಮಾರಾಟಕ್ಕಾಗಿ ಲಭ್ಯವಿರುತ್ತವೆ.
ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಖಾದಿ ಗ್ರಾಮೊದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.