Breaking News

ಆಕರ್ಷಣೆಗಳಿಂದ ದೂರವಿರಲುತಹಶೀಲ್ದಾರ್ ಮಂಜುನಾಥ ಸಲಹೆ

Tahsildar Manjunath advises to stay away from attractions

ಜಾಹೀರಾತು


ಗಂಗಾವತಿ: ಹದಿಹರೆಯದ ವಯಸ್ಸಿನ ಯುವತಿಯರು ಅನವಶ್ಯಕವಾಗದ ಆಮಿಷ್ ಮತ್ತು ಆಕರ್ಷಣೆಗಳಿಂದ ದೂರವಿರಬೇಕು. ಶೈಕ್ಷಣಿಕ ಪ್ರಗತಿಗೆ ಹೆಚ್ಚು ಮಹತ್ವ ನೀಡಿ ಮುಂದಿನ ಉದ್ಯೋಗದ ಸೃಷ್ಟಿ ಮತ್ತು ಸುಂದರ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ತಹಶೀಲ್ದಾರ ಮಂಜುನಾಥ ಭೋಗಾವತಿ ಕರೆ ನೀಡಿದರು.
ಭಾನುವಾರ ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಸ್ನೇಹ ಸಂಸ್ಥೆ ಆಯೋಜಿಸಿದ್ದ ಕಿಶೋರಿ ಸಂಘಗಳ ಸಮಾವೇಶದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸರಕಾರ ಶೋಷಿತ ಸಮುದಾಯದ ಮಹಿಳೆಯರಿಗಾಗಿ ವಿಶೇಷ ಯೋಜನೆಗಳು ರೂಪಿಸಿದೆ. ಜೊತೆಗೆ ಹಲವು ಸಂಘ ಸಂಸ್ಥೆಗಳು ಮಹಿಳೆಯರ ಸ್ವಾವಲಂಬನೆಗೆ ಕೈ ಜೋಡಿಸುತ್ತವೆ. ಇದರ ಸದುಪಯೋಗಪಡೆದುಕೊಂಡು ಉನ್ನತ ಶಿಕ್ಷಣದೊಂದಿಗೆ ಉದ್ಯೋಗ ಪಡೆಯಬೇಕು. ಆದರೆ ಹದಿ ಹರೆಯದ ವಯಸ್ಸಿನಲ್ಲಿ ಕೆಲವರು ಭಾವನೆ ಮತ್ತು ಬೇಡಿಕೆಗಳಿಗೆ ಒಳಗಾಗಿ ಪರಿಚತರೊಂದಿಗೆ ಸ್ನೇಹ ಬೆಳೆಸುವುದರಿಂದ ಹಲವು ಅನಾಹುತಗಳು ಸಂಭವಿಸುತ್ತವೆ. ಇಂತಹ ಅನಾಹುತಗಳಿಗೆ ಯಾರು ಆಸ್ಪದ ಕೊಡಬಾರದು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಉದ್ಯೋಗ ಆಯ್ಕೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಹಿಂದೆ ನಿಮ್ಮ ತಂದೆ ತಾಯಿಯ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಮುಂದೆ ಉತ್ತಮ ಜೀವನ ಕಟ್ಟಿಕೊಂಡು ಪಾಲಕರನ್ನು ಸಂತೃಪ್ತಿಪಡಿಸಬೇಕು ಎಂದು ಸಲಹೆ ನೀಡಿದರು.
ಸಮಾವೇಶವನ್ನು ಉದ್ಘಾಟಿಸಿದ ಡಿವೈಎಸ್‌ಪಿ ಸಿದ್ಧಲಿಂಗಪ್ಪ ಪಾಟೀಲ್ ಮಾತನಾಡಿ, ಗೆಳೆತನ ಮಾಡುವಾಗ ಯುವತಿಯರು ಜಾಗೃತಿವಹಿಸಬೇಕು. ಮಹಿಳೆಯರಿಗೆ ಎನಾದರೂ ತೊಂದರೆ ಉಂಟಾದರೆ ತಕ್ಷಣ ಪೊಲೀಸ್ ೧೧೨ಗೆ ಕರೆ ಮಾಡಿದರೆ ನಿಮ್ಮ ಸಹಾಯಕ್ಕೆ ಬರುತ್ತಾರೆ. ಮಹಿಳೆಯರ ರಕ್ಷಣೆಗೆ ಹಲವು ಕಾಯ್ದೆಗಳು ಜಾರಿಯಾಗಿವೆ. ಇದರ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಸ್ನೇಹ ಸಂಸ್ಥೆಯ ನಿರ್ದೇಶಕ ಟಿ.ರಾಮಾಂಜನೇಯ ಮಾತನಾಡಿ, ಕಳೆದ ೩೧ ವರ್ಷಗಳಿಂದ ಸ್ನೇಹ ಸಂಸ್ಥೆ ಮಹಿಳಾ ಸಬಲೀಕರಣ ಮತ್ತು ಮಹಿಳೆಯರಿಗೆ ಶಿಕ್ಷಣದ ಬಗ್ಗೆ ಕೆಲಸ ಮಾಡುತ್ತಿದೆ. ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿ ವಿಶೇಷವಾಗಿ ದೇವದಾಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಕಿಶೋರಿಯರ ಸಂಘ ರಚನೆ ಮಾಡಿ ಅವರಿಗೆ ಶಿಕ್ಷಣ, ಆರೋಗ್ಯ, ಸ್ವಚ್ಚತೆ ಮತ್ತು ಸ್ವಯಂ ಉದ್ಯೋಗ ಸೃಷ್ಟಿಸುವ ಯೋಜನೆ ರೂಪಿಸುತ್ತಿದೆ. ಎಲ್ಲಾ ಹಳ್ಳಿಗಳ ಕಿಶೋರಿ ಸಂಘದ ಸದಸ್ಯರ ಸಮಾವೇಶವನ್ನು ಇಂದು ಆಯೋಜಿಸಿ ಇಲ್ಲಿ ವರ್ಷಪೂರ್ತಿ ಮಾಡಿದ ಕಾರ್ಯಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.
ಸಂಸ್ಥೆಯ ಸಹ ನಿರ್ದೇಶಕಿ ಜೆ.ಪಿ.ಜಯಾ, ಸದಸ್ಯರ ಪ್ರತಿನಿಧಿ ಕವಿತಾ ಇದ್ದರು. ಸಂಸ್ಥೆಯ ಸಿಬ್ಬಂದಿ ಹೆಚ್.ಎಂ.ಪ್ರತಿಭಾ ನಿರ್ವಹಿಸಿದರು. ಹುಲಿಗೇಮ್ಮ ಸ್ವಾಗತಿಸಿದರು. ಬಸಮ್ಮ ವಂದಿಸಿದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.