Chirabi Sri Moogabasaveshwar Rathotsav Cancelled”
ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದ ಹೊರವಲಯದಲ್ಲಿ ರುವ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ರದ್ದು ಮಾಡಲಾಗಿದೆ.
ಕೇವಲ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹಣ್ಣು, ಕಾಯಿ ಮಾಡಿಸಿಕೊಂಡು ಹೋಗಲು ಸೀಮಿತ ಗೊಳಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.
2007ನೇ ಸಾಲಿನಿಂದ ಚಿರಬಿ ಮತ್ತು ರಾಂಪುರ ಗ್ರಾಮಸ್ಥರ ನಡುವೆ ದೇವಸ್ಥಾನದ ಪೂಜಾ ಕಾರ್ಯಕ್ರಮಗಳನ್ನು ನಡೆಸುವ ಸಂಬಂಧ ಘರ್ಷಣೆ ಉಂಟಾದ ಮೇರೆಗೆ ಅಂದಿನಿಂದ ಕಳೆದ ಸಾಲಿನವ ರೆಗೂ ರಥೋತ್ಸವ ಮತ್ತು ಜಾತ್ರೆ ಮಹೋತ್ಸವ ರದ್ದು ಮಾಡಲಾಗಿತ್ತು.
ಎರಡು ಗ್ರಾಮದವರ ನಡುವೆ ಭಿನ್ನಾಭಿಪ್ರಾಯ ಮುಂದುವ ರೆದು ಯಾವುದೇ ಸಕರಾತ್ಮಕ ಬೆಳವ ಣಿಗೆ ಕಂಡು ಬಂದಿಲ್ಲ, ಅಲ್ಲದೇ ಎರಡು ಗ್ರಾಮಸ್ಥರ ಮಧ್ಯೆ ದ್ವೇಷಪೂ ಅಹಿತಕರ ವಾತಾವರಣ ಇದೆ, 2020 ನೇ ಸಾಲಿನ ಎರಡು ಗ್ರಾಮಸ್ಥರು ಈ ಜಾತ್ರೆಯ ಸಂಬಂಧ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಕುರಿತು ಕೂಡ್ಲಿಗಿಯ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯು ಹಾಲಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಹಾಗಾಗಿ ಸೆಪ್ಟಂಬರ್ 2, ಮೂಗಬಸವೇಶ್ವರ ದೇವಸ್ಥಾನದ ಜಾತ್ರೆ ರಥೋತ್ಸವ ಹಾಗೂ 3 ,4, ರಂದು ಕುಸ್ತಿ ಪಂದ್ಯಾವಳಿಗಳನ್ನು ಮತ್ತು ಇನ್ನಿತರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದಾರೆ. ಎಂದು ಅಗಷ್ಟ 31 ರಂದು ಆದೇಶದಲ್ಲಿ ತಿಳಿಸಿದ್ದಾರೆ.