Sanganala: A one-year-old child died in a head-on collision between a car and a car
ಕೊಪ್ಪಳ : ಸೆ 01.ರ. ರವಿವಾರದಂದು 12.45 ರಿಂದ 1 ಗಂಟೆ ಮಧ್ಯದಲ್ಲಿ ಯಲಬುರ್ಗಾ ತಾಲೂಕಿನ ಸಂಗನಾಳ ಕುಕನೂರು ಮಾರ್ಗ ಮಧ್ಯೆ (ಸಂಗನಾಳ ಕ್ರಾಸ್) ಕೊಪ್ಪಳದ ಬುಲೇರೋ ಕಾರ್ ಹಾಗೂ ಸಂಗನಾಳ ಗ್ರಾಮದ ಶಿಪ್ಟ್ ಡಿಸೈನರ್ ಕಾರುಗಳು ಮಧ್ಯೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು ಡಿಕ್ಕಿ ರಭಸಕ್ಕೆ ಒಂದುವರೆ ವರ್ಷದ ಸಂಪ್ರೀತ ಕೊಪ್ಪಳ ತಾಲೂಕ ಸಾ. ಟಣಕಲ್ ಎನ್ನುವ ಹಸೂಗೂಸು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಸಂಗನಾಳ ಗ್ರಾಮದ ಶಿಫ್ಟ್ ಡಿಸೈನರ್ ಕಾರಿನಲ್ಲಿದ್ದ ಸಂಗಪ್ಪ (60) ದೇವಪ್ಪ ಗಡಾದ ನಿವೃತ್ತ ಸೈನಿಕ ಇವರ ಬಲಗೈಗೆ ಹಾಗೂ ಮೊಣಕಾಲಿಗೆ ತೆರಚಿದ ಗಾಯಗಳಾಗಿವೆ, ಪ್ರಭುದೇವ (52) ತಂ. ಶಾಂತಪ್ಪ ಹೊಸ ಅಂಗಡಿ ಸಾ. ಸಂಗನಾಳ ಇವರಿಗೆ ತಲೆಗೆ ತೆರಚಿದ ಗಾಯಗಳಾಗಿವೆ.
ಬೂಲೇರೋ ಕಾರಿನಲ್ಲಿದ್ದ ಕೊಪ್ಪಳದ ಸಿದ್ದೇಶ್ವರ ನಗರದ ಮಹಾಲಕ್ಷ್ಮಿ(11) ವಿ. ಕೊರಗಲಮಠ, ಗಂಗಮ್ಮ (30) ವಿ. ಕೊರಗಲಮಠ ಶಿವಪ್ಪ(30) ಶರಣಯ್ಯ ಕೋರಗಲಮಠ ಬಲಗಾಲಿನ ಮೊಣಕಾಲು ಪೆಟ್ಟಾಗಿದೆ, ಕೊಪ್ಪಳ ತಾ. ಟಣಕಲ್ ಗ್ರಾಮದ ಪ್ರೀತಿ(20) ಗಂ. ಸಂಗಯ್ಯ ಹಿರೇಮಠ ಇವರಿಗೆ ತಲೆಗೆ ಹಾಗೂ ಕೈ ಕಾಲುಗಳಿಗೆ ರಕ್ತ ಗಾಯವಾಗಿವೆ.
ವಿರೂಪಾಕ್ಷ ತಂದೆ ಬಸಯ್ಯ ಕೊರಗಲಮಠ, ಮಹಾಲಕ್ಷ್ಮಿ ತಂದೆ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೋಸ್ಕರ ಹುಬ್ಬಳ್ಳಿಗೆ ಕಳಿಸಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.