Breaking News

ತಿಪಟೂರು -ಸವಿತಾ ಸಮಾಜ ಕ್ಕೆ ಮೀಸಲಾತಿ ,ಜಾತಿ ನಿಂದನೆ, ಕಾನೂನು ಮತ್ತು ವಿವಿಧ ಬೇಡಿಕೆಗಾಗಿ ಓತ್ತಾಯಿಸಿ ಮನವಿ

Tipatur – Appeal to Savita Samaj for reservation, caste abuse, law and various demands.

ತಿಪಟೂರು:ಸವಿತಾ ಸಮಾಜಕ್ಕೆ ಮೀಸಲಾತಿ ಮತ್ತು ಜಾತಿನಿಂದನೆ ಕಾಯ್ದೆ ಜೊತೆಗೆ ಹತ್ತು ಬೇಡಿಕೆಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ಬರೆದ ಪತ್ರ ವನ್ನು ,ಶಾಸಕರಾದ ಕೆ.ಷಡಕ್ಷರಿ ಹಾಗೂ ಹೆಚ್ಚುವರಿ ಶಿರಸ್ತೇದಾರರಾದ ರವಿಕುಮಾರ್ ರವರ ಮೂಲಕ ತಿಪಟೂರು ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಸಲ್ಲಿಸಲಾಯಿತು

ಮನವಿಪತ್ರ ದಲ್ಲಿ ಉಲ್ಲೇಖಿಸಿರುವ 10 ಬೇಡಿಕೆ ಗಳನ್ನು ದಿನಾಂಕ 15-01-2024 ರ ಒಳಗಾಗಿ ಸರ್ಕಾರ ಈಡೇರಿಸುವಂತೆ
ಶ್ರೀ ಸವಿತಾ ಪೀಠದ ಶ್ರೀ,ಶ್ರೀ ಶ್ರೀ ಸವಿತಾನಂದನಾಥ ಸ್ವಾಮೀಜಿಯವರು ತಿಳಿಸಿದ್ದು,ನಮ್ಮ ಸಮಾಜಕ್ಕೆ ಮೀಸಲಾತಿ ಹಾಗೂ ಜಾತಿನಿಂದನೆ ಕಾಯ್ದೆ ಜೊತೆಗೆ ಹತ್ತು ಬೇಡಿಕೆಗಳನ್ನು ಸರ್ಕಾರಕ್ಕೆ ಈ ಮನವಿಪತ್ರ ದ ಮೂಲಕ ಗಮನಕ್ಕೆ ತರುತ್ತಿದ್ದು
ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಸವಿತಾ ಪೀಠದ ಶ್ರೀ ಗುರುಗಳ ನೇತೃತ್ವದಲ್ಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಬೆಂಗಳೂರಿನ ಪ್ರೀಡಂ ಪಾರ್ಕ್ ನವರೆವಿಗೂ ಪಾದಯಾತ್ರೆ ಮಾಡಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ,ಈ ಹೋರಾಟದಲ್ಲಿ ರಾಜ್ಯದ ಎಲ್ಲಾ ಸವಿತಾ ಸಮುದಾಯ ದವರು ಭಾಗವಹಿಸಲಿದ್ದು, ತಿಪಟೂರು ತಾಲ್ಲೂಕಿನ ಸವಿತಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಲಿದ್ದಾರೆ ಎಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಎ.ಲೋಕೇಶ್ ತಿಳಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕು ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮುಖಂಡರಾದ ಎಂ.ನರಸಿಂಹಯ್ಯ ಟಿ.ಸಿ.ಗೋವಿಂದರಾಜು
*ಟಿ.ಎಂ. ವರದರಾಜು , ಎಸ್.ಕುಮಾರ್, *ಟಿ.ಎನ್.ಮುತ್ತುರಾಜ್ , ನಾರಾಯಣ್ * ಜಿ.ನಾಗರಾಜು ಟಿ.ಜೆ.ವರದರಾಜು *ಕಾರ್ತಿಕ್, *ಗೋಪಿ,ನವೀನ್,ಮಾರುತಿ, ಟಿ.ಜಿ.ರಾಮಚಂದ್ರ,ಎಂ.ಆರ್.ಪ್ರಕಾಶ್, ಕೆ.ಆರ್.ಆನಂದ್, ಪ್ರವೀಣ್ ಪಿ.ಕೆ. ರಮೇಶ್,ಶಿವು,ರಾಮು ಚೇತನ್, ಮಾರುತಿ, ಕುಪ್ಪಾಳು ಪರಮೇಶ್, ಮತ್ತಿತರು ಇದ್ದರು*

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.