Breaking News

ಬೇಥೆಸ್ಥ್ ಟ್ರಸ್ಟ್ನ್ ೨೧ ವಾರ್ಷಿಕೋತ್ಸವ: ಬಟ್ಟೆ, ಶಾಲು, ನೋಟ್ ಬುಕ್, ಬ್ಯಾಗ್ ವಿತರಣೆ

Bethesthe Trust 21st Anniversary: ​​Distribution of Clothes, Shawl, Note Book, Bag


ಗಂಗಾವತಿ: ಇಲ್ಲಿನ ವಿದ್ಯಾನಗರದಲ್ಲಿರುವ ಎಟರರ್ನಲ್ ಫೆಲೋಶಿಪ್ ಚಾರಿಟೇಬಲ್ ಟ್ರಸ್ಟ್ ನ ೨೧ ನೇ ವಾರ್ಷಿಕೋತ್ಸವ ಹಾಗು ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಹೆಚ್‌ಐವಿ ರೋಗಿಗಳಿಗೆ ಸೀರೆ, ವೃದ್ಧರಿಗೆ ಶಾಲು, ಬಟ್ಟೆ ಮತ್ತ ಚಾಳೀಸ್, ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಪೆನ್ಸಿಲ್, ಶಾಲಾ ಬ್ಯಾಗ್ ಹಾಗು ಕ್ಯಾರಿಯರ್ ಬ್ಯಾಗ್ ವಿತರಿಸಲಾಯಿತು ಬೇಥೆಲ್ ಆಂಗ್ಲ ಮಾದ್ಯಮ ಶಾಲಾ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸುಮಾರು ೨೬೫ ಕಿಟ್ ವಿತರಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಜೀವ ಪ್ರಕಾಶ್ ಅವರು, ಕಳೆದ ೨೧ ವರ್ಷಗಳಿಂದ ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ನೊಂದ, ಶೋಷಿತ, ಬಡ ಹಾಗು ತುಳಿತಕ್ಕೊಳಗಾದವರನ್ನೂ ನಿರ್ಗತಿಕರನ್ನು ಗುರುತಿಸಿ ಅವರಿಗೆ ನಮ್ಮ ಕೈಲಾದ ಮಟ್ಟಿಗೆ ಅನುಕೂಲ ಕಲ್ಪಿಸಿ ಸಾಮಾಜಿಕವಾಗಿ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ಪ್ರತಿಫಲಾಪೆಕ್ಷ ಇಲ್ಲದೆ ಬಳ್ಳಾರಿ, ಕೊಪ್ಪಳ ಹಾಗು ರಾಯಚೂರು ಜಿಲ್ಲೆಗಳಲ್ಲಿ ಅತ್ಯಂತ ಕಾಳಜಿ ಪೂರ್ವಕವಾಗಿ ಕೆಲಸ ಮಾಡುತ್ತಿದ್ದೇವೆ. ನಾವಷ್ಟೆ ಸಂತೋಷವಾಗಿದ್ದರೆ ಸಾಲದು ನಮ್ಮ ನೆರೆಹೊರೆಯವರ ಕಷ್ಟಕ್ಕೂ ನಾವು ನೆರವಾಗಬೇಕು, ನಮ್ಮ ಮನೆಯಲ್ಲಷ್ಟೆ ಹಬ್ಬದ ವಾತಾವರಣ ಇದ್ದರೆ ಸಾಲದು ಸಂಕಷ್ಟದಲ್ಲಿರುವವರನ್ನು ನಮ್ಮೊಟ್ಟಿಗೆ ಸೇರಿಸಿಕೊಂಡು ನಾವು ನಲಿಯಬೇಕು, ಹಬ್ಬದ ಸಂತೋಷ ಪಸರಿಸಬೇಕು ಎನ್ನುವ ಮನೋಭಾವನೆ ನಮ್ಮದು. ಇನ್ನೂ ಅನೇಕ ಕನಸುಗಳು ನಮ್ಮ ಸಂಸ್ಥೆಯು ಹೊಂದಿದ್ದು ಹಂತಹAತವಾಗಿ ಅವೆಲ್ಲವುಗಳನ್ನು ನಾವು ಖಂಡಿತ ಈಡೇಸುತ್ತೇವೆ. ಸಂಸ್ಥೆಯ ಸಾಮಾಜಿಕ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗು ನಾನು ಹೃತ್ಪೂರ್ವಕವಾಗಿ ವಂದಿಸುತ್ತೇನೆ ಅವರ ಸಹಾಯವನ್ನು ಕೃತಜ್ಞಪೂರ್ವಕವಾಗಿ ನೆನೆಯುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಸತೀಶ್, ಎನ್.ಡಿ.ನಥಾಫ್ ಗದಗ, ವಿ.ಜ್ಯೋತಿ, ಕೆ.ವಿ.ಲೀಡಿಯೋ , ಸಮಾಜ ಸೇವಕರಾದ ಖಾಸೀಂ ಬೀ, ನಾಗರತ್ನ ಇತರರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.