Breaking News

ಶ್ರದ್ಧಾ ಭಕ್ತಿಯಿಂದ ಜರುಗಿದಕೆರೆಮಾರುತೇಶ್ವರ ಜಾತ್ರೆ

Keremaruteshwar fair held with devotion

ಸಂತಸದಿಂದ ನೂತನ ಉಚ್ಛಾಯ ಎಳೆದ ಮಹಿಳೆಯರು

ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದ ಹೊರ ಹೊಲದಲ್ಲಿರುವ ಉದ್ಭವ ಮೂರ್ತಿ ಶ್ರೀ ಕೆರೆಮಾರುತೇಶ್ವರ ದೇವರ ಜಾತ್ರೆಯು ಶನಿವಾರದಂದು ದೇವರಿಗೆ ಪೂಜೆ ವಿಧಿ ವಿಧಾನಗಳ ಮಾಡುವ ಮೂಲಕ ವಿಜೃಂಭಣೆಯಿಂದ ಜಾತ್ರೆ ನೆಡೆಯಿತು.

ಪ್ರತಿ ವರ್ಷದಂತೆ ಈ ಬಾರಿಯು ಕಾರ್ತಿಕೋತ್ಸವದ ಅಂಗವಾಗಿ ಗ್ರಾಮದ ಕೆರೆಮಾರುತೇಶ್ವರ ದೇವರ ಜಾತ್ರೆಯು ವಿಶೇಷವಾಗಿ ಧಾರ್ಮಿಕ‌ ಭಕ್ತಿ ಭಾವದಿಂದ ಶನಿವಾರದಂದು ಬೆಳಿಗ್ಗೆ ವಿಗ್ರಹ ಮೂರ್ತಿಗೆ ವಿಶೇಷ ರುದ್ರಾಭೀಷೇಕ ಪೂಜೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಜನರು ಕುಟುಂಬಸಮೇತ ಬಂದು ದೀರ್ಘ ದಂಡ ನಮಸ್ಕಾರ ಹಾಕಿ ದೇವರ ದರ್ಶನ ಪಡೆದು ಪುನೀತ ಭಾವ ತಳೆದರು.

ನೂತನ ಉಚ್ಛಾಯ ಮೆರವಣಿಗೆ: ಪ್ರತಿ ವರ್ಷದಂತೆ ಕಾರ್ತಿಕೋತ್ಸವ ಅಂಗವಾಗಿ ನೆಡೆಯುವ ಶ್ರೀ ಕೆರೆಮಾರುತೇಶ್ವರ ದೇವರಿಗೆ ಭಕ್ತಾದಿಗಳಿಂದ ತಯಾರಿಸಿದ ನೂತನ ಉಚ್ಛಾಯ ಉತ್ಸವದ ಮೆರವಣಿಗೆ ಶನಿವಾರದಂದು ಸಂಜೆ ಅದ್ದೂರಿಯಾಗಿ ಡೊಳ್ಳು ಬಾರಿಸುವುದರ ಜೊತೆಗೆ ಮೆರವಣಿಗೆಯು ದೇವಾಲಯದಿಂದ ಎದುರು ಬಸವಣ್ಣ ಪಾದುಗಟ್ಟೆಯವೆರೆಗೆ ಮೆರವಣಿಗೆ ನೆಡೆಯಿತು. ವಿಶೇಷವಾಗಿ ಪ್ರಪ್ರಥಮ ಬಾರಿಗೆ ಗ್ರಾಮದ ಮಹಿಳೆಯರು ಪುರುಷರೊಂದಿಗೆ ಜೊತೆಗೂಡಿ ತಾವೇ ಸ್ವತಃ ದೇವರ ಉಚ್ಛಾಯ ಎಳೆಯುವ ಮೂಲಕ ಗಮನ ಸೆಳೆದರು.

ಗ್ರಾಮದ ಕೆರೆ ಮಾರುತೇಶ್ವರ ಸೇವಾ ಟ್ರಸ್ಟ್ ವತಿಯಿಂದ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸುಗಮ ದರ್ಶನದ ವ್ಯವಸ್ಥೆ ಹಾಗೂ ಮಹಾ ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಿ ದೇವರ ಕೃಪೆಗೆ ಪಾತ್ರರಾದರು.

About Mallikarjun

Check Also

ಜ್ಞಾನ ವಿಕಾಸ ಸಂಯೋಜಕೀಯರು ಹಮ್ಮಿಕೊಂಡ ಸಭೆ ಯಶಸ್ವಿ

ಗಂಗಾವತಿ: ತಾಲೂಕಿನ ಜ್ಞಾನ ಸಂಯೋಜಕೀಯರ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ  ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ  ಪ್ರಕಾಶ ರಾವ್ ದೀಪ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.