Breaking News

ಗಂಗಾವತಿ ನಿರ್ಮಾಪಕರಿಂದ ಸಿದ್ದು ಜೀವನಾಧಾರಿತ್ರ ಚಿತ್ರ ಶೀಘ್ರ ತೆರೆಗೆಮುಖ್ಯ ಪಾತ್ರದಲ್ಲಿ ವಿಜಯ ಸೇತುಪತಿ ನಟನೆ

Produced by Gangavati, the biopic Siddhu will hit the screens soon
Starring Vijay Sethupathi in the lead role


ಗಂಗಾವತಿ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರ ನಿರ್ಮಿಸಲು ಗಂಗಾವತಿಯ ನಿರ್ಮಾಪಕರು ತಯಾರಿಸಿ ನಡೆಸಿದ್ದು ಸದ್ಯ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳು ನಟ ವಿಜಯ ಸೇತುಪತಿ ನಟನೆ ಮಾಡುವುದು ಖಚಿತವಾಗಿದೆ
ಗಂಗಾವತಿ ಮೂಲದ ನಿರ್ಮಾಪಕ ಹಯಾದ್ ಪೀರ್ ಹಾಗೂ ಗೌರಿಬಿದನೂರಿನ ಸತ್ಯರತ್ನಂ ನಿರ್ದೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ ಸಿದ್ಧಪಡಿಸಲು ಮುಂದಾಗಿದ್ದಾರೆ. ವಿಧಾನಸಭಾ ಚುನಾವಣೆಯ ಮುಂಚಿತವಾಗಿಯೇ ನಿರ್ಮಾಪಕರು ಸಿದ್ದರಾಮಯ್ಯ ಅವರು ಭೇಟಿಯಾಗಿ ಸಿನಿಮಾ ನಿರ್ಮಾಣದ ಕುರಿತು ಮಾಹಿತಿ ನೀಡಲಾಗಿತ್ತು. ಸಿದ್ದರಾಮಯ್ಯ ಅವರು ಕೂಡ ಒಪ್ಪಿಗೆಯನ್ನು ಸೂಚಿಸಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ಸಿನಿಮಾದ ತಂಡ ನಟ, ನಟಿಯರ ಆಯ್ಕೆಯಲ್ಲಿ ವಿಳಂಭ ಮಾಡಿತ್ತು. ಸದ್ಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಬಯೋಪಿಕ್ ನಿರ್ಮಾಣದ ಕೆಲಸ ಮುನ್ನೆಲೆಗೆ ಬಂದಿದೆ. ಚಿತ್ರಕ್ಕೆ ಲೀಡರ್ ರಾಮಯ್ಯ ಎಂದು ಹೆಸರು ಕರೆಯಲಾಗಿದ್ದು, ಮೊದಲ ಹಂತದಲ್ಲಿ ಚಿತ್ರಕ್ಕೆ ಬೇಕಾಗಿರುವ ಹಾಡಿನ ಕಂಪೋಸ್, ಮ್ಯೂಸಿಕ್ ಕೆಲಸಗಳು ಆರಂಭವಾಗಿದ್ದು, ಹಾಡು ಹಾಗೂ ಮ್ಯೂಸಿಕ್ ಕಂಪೋಸ್ ಮಾಡುವ ಹೊಣೆಯನ್ನು ಸಿಂಗರ್ ಕಮ್ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಶಶಾಂಕ್ ಶೇಷಗಿರಿ ಅವರಿಗೆ ನೀಡಲಾಗಿದೆ.
ಸಿದ್ದು ಪಾತ್ರದಲ್ಲಿ ಸೇತುಪತಿ : ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ, ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ವಿಜಯ ಸೇತುಪತಿಯವರು ಸಿದ್ದರಾಮಯ್ಯ ಅವರ ಬಯೋಪಿಕ್‌ನಲ್ಲಿ ನಟನೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ನಿರ್ಮಾಪಕರಾದ ಹಯಾದ್ ಪೀರ್ ಅವರ ತಿಳಿಸಿದ್ದಾರೆ. ಲೀಡರ್ ರಾಮಯ್ಯ ಚಿತ್ರವು ಸಿದ್ದರಾಮಯ್ಯ ಅವರ ಜೀವನ ಆಧಾರಿತ ಚಿತ್ರವಾಗಿದ್ದರಿಂದ ವಿಜಯ ಸೇತುಪತಿಯವರು ಲಾಯರ್ ಪಾತ್ರದಲ್ಲಿ ಹಾಗೂ ಮುಖ್ಯಮಂತ್ರಿಯಾಗಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೨೦೧೩ ರಿಂದ ೨೦೧೮ ರಲ್ಲಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯಾಗಿರುವ ವೇಳೆಯಲ್ಲಿನ ಸನ್ನಿವೇಶಗಳನ್ನು ಚಿತ್ರದಲ್ಲಿ ತೊರಿಸಲಾಗುವುದು. ಸಿನಿಮಾದಲ್ಲಿ ೨೦ ರಿಂದ ೩೦ ನಿಮಿಷಗಳ ಕಾಲ ವಿಜಯ ಸೇತುಪತಿಯವರು ನಟನೆ ಮಾಡಲಿದ್ದಾರೆ.
೩ ಹಂತಗಳನ್ನು ಒಳಗೊಂಡ ಚಿತ್ರ : ಬಯೋಪಿಕ್ ನಿರ್ಮಾಣಕ್ಕೆ ಮುಂದಾಗಿರುವ ಚಿತ್ರ ತಂಡವು ಮೂರು ಹಂತಗಳಲ್ಲಿ ಸಿದ್ದರಾಮಯ್ಯ ಅವರು ಜೀವನಾಧರಿತ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಬಾಲ್ಯದ ಜೀವನ, ಎರಡನೇ ಹಂತದಲ್ಲಿ ಸಿದ್ದರಾಮಯ್ಯ ಅವರ ಹೋರಾಟ ಹಾದಿ, ಮೂರನೇ ಹಂತದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಯಶೋಗಾಥೆಯನ್ನು ಚಿತ್ರವು ಒಳಗೊಂಡಿದೆ. ಚಿತ್ರೀಕರಣಕ್ಕೆ ಸಂಬAಧಪಟ್ಟAತೆ ಚಿತ್ರತಂಡವು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಬಾಲ್ಯದ ಜೀವನ ಚಿತ್ರೀಕರಣ ಸ್ಥಳ ಗುರುತಿಸಿದ್ದು, ಆದಷ್ಟು ಬೇಗನೆ ಚಿತ್ರೀಕರಣ ಆರಂಭ ಮಾಡಲಾಗುವುದು ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.