Breaking News

ವಯಸ್ಕರಿಗೆ ಕಲಿಕೆ ಮುಸ್ಸಂಜೆಯಲ್ಲಿ ಬೆಳಕು ಗೋಚರಿಸಿದಂತೆ : ವಿ.ಆರ್.ಬಸವರಾಜ್

Learning for adults is like light in the twilight : VR Basavaraj


ಗಂಗಾವತಿ: ವಯಸ್ಸಾದವರಿಗೆ ಶಿಕ್ಷಣ ಕಲಿಸಿದರೆ ಮುಪ್ಪಾವಸ್ಥೆಯಲ್ಲಿ ದೃಷ್ಟಿ ಗೋಚರಿಸಿದಂತಾಗುತ್ತದೆ ಎಂದು ಜಿಎಸ್‌ಎಸ್‌ಎಸ್ ಸಂಸ್ಥೆಯ ಮುಖ್ಯಸ್ಥರಾದ ವಿ.ಆರ್.ಬಸವರಾಜು ತಿಳಿಸಿದರು.
ಅವರು ನಗರದ ಟೀರ‍್ಸ್ ಕಾಲೋನಿಯಲ್ಲಿರುವ ಏಫ್ರೇತ್ ಚರ್ಚಲ್ಲಿ ಹೈದ್ರಬಾದ್ ಮೂಲಕ ರಿರೈಟ್ ಸಂಸ್ಥೆ ಹಾಗು ಗಂಗಾವತಿಯ ಶರೂನ್ ಸಂಪೂರ್ಣ ಸುವಾರ್ತ ಸಂಘ ಕೊಪ್ಪಳ ಸಹಯೋಗದಲ್ಲಿ ವಯಸ್ಸಾದವರಿಗೆ ಶಿಕ್ಷಣ ನೀಡುವ ಕುರಿತು ತರಬೇತಿ ಕಾರ್ಯಗಾರ ಸಮಾರೋಪದಲ್ಲಿ ಮಾತನಾಡಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಾಕ್ಷರತಾ ಆಂದೋಲನ ಕಾರ್ಯಕ್ರಮ ಅರಿವೂ ಮೂಡಿಸಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ನಾವೂ ಈ ಕಾರ್ಯ ಕ್ರಮ ಕೈಗೊಳ್ಳುವ ಮೂಲಕ ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅನಕ್ಷರತೆಯಿಂದ ಸಾಕ್ಷರತೆಯ ಕಡೆಗೆ ಕೊಂಡ್ಯೋಯ್ಯುತ್ತಿದ್ದೇವೆ. ಸಾಮಾನ್ಯ ಜನರು ನಮ್ಮ ಸಮಾಜದಲ್ಲಿ ಸಾಕ್ಷರತರಾದರೆ ಅವರು ಸಮಾಜದಲ್ಲಿ ನಿರ್ಭಯಾರಾಗಿ ಮತ್ತು ಸಾಮಾದಾನದ ಜೀವನ , ಜೀವನ ಶೈಲಿ, ನಡವಳಿಕೆಯಲ್ಲಿ ಬದಲಾವಣೆ, ನೈತಿಕ ಜೀವನ ನಡೆಸಲು ಮತ್ತು ಸಮುದಾಯದಲ್ಲಿ ಬದಲಾವಣೆ ತರಲು ಗಮನ ಹರಿಸಲು ನಮ್ಮ ಸಮಯವನ್ನು ಹೂಡಿಕೆ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ಸಮಾರಂಭದಲ್ಲಿ ತಿಳಿಸಿದರು. ಈವತ್ತಿನ ಪೀಳಿಗೆ ಎಷ್ಟೋ ಜನ ಸಾಮಾನ್ಯರು ಎಲ್ಲಾ ಕ್ಷೇತ್ರದಲ್ಲಿ ಬದಲಾವಣೆ ತರಲು ಮುಂದಗಿದ್ದಾರೆ ಆದ್ರೆ ಸಾಕ್ಷರತೆ ಶಿಕ್ಷಣದಲ್ಲಿ ಹೆಚ್ಚಾದ ಒಲವು ತೋರುತ್ತಿಲ್ಲ ಮತ್ತು ಜನರಿಗೆ ಮನವರಿಕೆಯಾಗುವ ರೀಯಲ್ಲಿ ಪ್ರೇರಣೆ ನೀಡುವಂತ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸಾಮಾನ್ಯ ಜನರು ಅವರ ಜೀವನದ ಕೆಲವು ಮಾಹಿತಿ ಮರೆತು ಬಿಡುತ್ತಾರೆ ಆದರೆ ಶಿಕ್ಷಣ ಕಲಿಸಿದ ಶಿಕ್ಷಕರನ್ನು ಮರೆಯುವುದಿಲ್ಲ ಆದ್ದರಿಂದ ಈ ಸಾಕ್ಷರತಾ ಪ್ರಮಾಣ ಹೆಚ್ಚಿನ ರೀತಿಯಲ್ಲಿ ನಾವು ನಮ್ಮ ಸಮಾಜದಲ್ಲಿ ವಯಸ್ಕರರಲ್ಲಿ ಮೂಡಿಸುವುದಾದರೆ,ಅದು ಅವರ ವೈಯಕ್ತಿಕ ಬದುಕಿನ ಜೀವಿತವನ್ನು ಬದಲಾಯಿಸುವ ಒಂದು ತಿರುವು ಎಂದು ಹೇಳಿದರು.
ಈ ತರಬೇತಿ ಕಾರ್ಯಕ್ರಮದ ಸಮಾರೋಪವೇದಿಕೆಯಲ್ಲಿ ಜಾಪಾಲ್ ರೆಡ್ಡಿ, ನೆರಯ ಜಿಲ್ಲೆಗಳಾದ, ಬಳ್ಳಾರಿ, ರಾಯಚೂರು ಜಿಲ್ಲೆಯಗಳಿಂದ ೨೫ ಕ್ಕೂ ಹೆಚ್ಚು ಸ್ವಯಂ ಸೇವಕರು ತರಬೇತಿಯಲ್ಲಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.