Breaking News

ಚಾಲಕರಿಗೆಸರಕಾರದಿಂದ ಸೌಲಭ್ಯ ಒದಗಿಸಲು ಶ್ರಮಿಸುವೆ:ಜಿ.ನಾರಾಯಣಸ್ವಾಮಿ

Government will work hard to provide facilities to drivers: G Narayanaswamy

ಗಂಗಾವತಿ: ಪ್ರತಿಯೊಬ್ಬ ಚಾಲಕರು ವಾಹನ ಚಲಾಯಿಸುವಾಗ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಕಡ್ಡಾಯವಾಗಿ ಇನ್ಸೂರೆನ್ಸ್, ದಾಖಲಾತಿ ಹೊಂದಿರಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಚಾಲಕರ ಒಕ್ಕೂಟದ ತಾಲೂಕಾ ಘಟಕ ಉದ್ಘಾಟನೆ ಹಾಗೂ ಚಾಲಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಚಾಲಕರಿಗೆ ಅವರದ್ದೇ ಆದ ಜವಾಬ್ದಾರಿ ಇರುತ್ತೆ. ಅದನ್ನು ಅರಿತು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ವಾಹನ ಚಲಾಯಿಸಬೇಕು. ಚಾಲಕರು ಜೀವನ ಬಹಳ ಶೋಚನಿಯ ಸ್ಥೀತಿಯಲ್ಲಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಚಾಲಕರ ಕುಟುಂಬಕ್ಕೆ ನಿವೇಶನ ನೀಡಲು ಒತ್ತಾಯಿಸಲಾಗುವುದು. ಚಾಲಕರ ಭದ್ರತೆಗೆ ಒತ್ತು ನೀಡಲಾಗುವುದು. ಚಾಲಕರ ಕುಂದು ಕೊರತೆಗಳ ಬಗ್ಗೆ ಸಮಲೋಚನೆ ಮಾಡಿ ಪರಿಹರಿಸಲಾಗುವುದು. ಪ್ರತಿಯೊಬ್ಬರು ವಾಹನದಲ್ಲಿ ಇನ್ಸೂರೆನ್ಸ್, ಲೈಸೆನ್ಸ್, ವಾಹನದ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದರು.

ಈ ವೇಳೆ ಸಿದ್ದರಾಮಯ್ಯ ತಾತ ಗುರುವಿನ, ಗ್ರಾಮಪಂಚಾಯತಿ ಅಧ್ಯಕ್ಷ ಆಂಜನೇಯ ನಾಯಕ, ಉಪಾಧ್ಯಕ್ಷೆ ರತ್ನಮ್ಮ ಹುಲ್ಲಪ್ಪ, ಮಾಜಿ ತಾ.ಪಂ ಅಧ್ಯಕ್ಷ ಶರಣೇಗೌಡ ಮಾಲೀಪಾಟೀಲ್, ಕೆ.ಆರ್.ಪಿ.ಪಿ ಮುಖಂಡರಾದ ಡಿ.ಕೆ ಆಗೋಲಿ, ಚಿಲಕುರಿ ಪ್ರಸಾದ, ವಿರುಪಣ್ಣ ಡಂಬರ, ರಾಘವೇಂದ್ರ ಕಂಬಳಿ, ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಈರಣ್ಣ ಕೊಮಲಪುರ, ತಾಲೂಕಾಧ್ಯಕ್ಷ ಮಂಜುನಾಥ ಕಂಬಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಉಮಾದೇವಿ, ಬಸಾಪಟ್ಟಣ ಗ್ರಾಮ ಘಟಕ ಅಧ್ಯಕ್ಷ ತಿರುಪತಿ ಕಂಬಳಿ, ಘಟಕ ಉಪಾಧ್ಯಕ್ಷ ಕುಮಾರ ಕುರಿ, ತಾ.ಉಪಾಧ್ಯಕ್ಷ ಕನಕಪ್ಪ ಕೆಂಗಾರಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಚಾಲಕರು ಪಾಲ್ಗೊಂಡಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.