MLA M R Manjunath helped Gudali Pooja to build a faecal waste management unit near Kamagere.

ವರದಿ : ಬಂಗಾರಪ್ಪ ಸಿ .
ಹನೂರು :ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೊಂಗರಳ್ಳಿ ಸಮೀಪದಲ್ಲಿ
ಸುಮಾರು 70ಲಕ್ಷ ರೂ ವೆಚ್ಚದಲ್ಲಿ ಮಲ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕರಾದ ಎಮ್ ಆರ್ ಮಂಜುನಾಥ್ ನೆರವೆರಿಸಿದರು.
ಕಾಮಗೆರೆ ಸಮೀಪದ ಕೊಂಗರಳ್ಳಿಯಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ ನಂತರ
ಮಾತನಾಡಿದ ಶಾಸಕರು ಈಗಾಗಲೇ ಸರ್ಕಾರವು
ನಗರ ಪ್ರದೇಶಗಳಲ್ಲಿ ಇಲ್ಲದೇ ಇರುವಂತಹ ಸೌಲಭ್ಯಗಳನ್ನು ಗ್ರಾಮೀಣ ವ್ಯಾಪ್ತಿಗಳಿಗೆ ಒದಗಿಸುವ ಉದ್ದೇಶದಿಂದ ಈ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗುತ್ತದೆ ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ನಿರ್ಮಿಸಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಗುತ್ತಿಗೆದಾರರಿಗೆ ತಿಳಿಸಿದರು. ಇಂತಹ ಕಟ್ಟಡಗಳನ್ನು
ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು .
ಇದೇ ಸಮಯದಲ್ಲಿ ಗ್ರಾಪಂ ಚಿಕ್ಕಸ್ವಾಮಿ. ಮುಖಂಡರಾದ ಸಿಂಗನಲ್ಲೂರು ರಾಜಣ್ಣ. ಮಂಜೇಶ್ .
ಇ,ಓ. ಶ್ರೀನಿನಾಸ್ .
ಎಇಇ ಹರೀಶ್ .ಪಿಡಿಒ ಮಹೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.