Books expand the horizon of knowledge. : Dr. K. Rabindranath.

ಗಂಗಾವತಿ, ಪುಸ್ತಕಗಳು ಮನುಷ್ಯನ ನಿಜವಾದ ಸ್ನೇಹಿತರು ಅವು ಮಾನವರ ಬದುಕಿನಲ್ಲಿ ಅಪಾರ ಪ್ರಭಾವವನ್ನು ಬೀರಿವೆ. ಪುಸ್ತಕಗಳನ್ನು ಓದುವುದರಿಂದಮನಸ್ಸಿಗೆವ್ಯಾಯಾಮವಾಗುತ್ತದೆ.ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಧನಾತ್ಮಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಹಿರಿಯ ವಿದ್ವಾಂಸ ಡಾ. ರವೀಂದ್ರನಾಥ ಅಭಿಪ್ರಾಯಪಟ್ಟರು. ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಹೆಚ್. ಆರ್ ಸರೋಜಮ್ಮ ಬಾಲಕಿಯರ ಪದವಿಪೂರ್ವಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜರುಗಿದ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಮತ್ತು ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಂಸದ ಎಸ್. ಶಿವರಾಮಗೌಡ ಅವರು ಪುಸ್ತಕಗಳು ಜ್ಞಾನದ ಹಸಿವನ್ನು ನೀಗಿಸುವ ಅಮೃತಫಲಗಳಿದ್ದಂತೆ ಹಾಗಾಗಿ ವಿದ್ಯಾರ್ಥಿಗಳು ನಿರಂತರ ಪುಸ್ತಕ ಓದುವ ಮೂಲಕ ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕೆಂದರು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳಸಲು ಇಂಥ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಎಂದರು. ಸಮಾರಂಭದ ಸಾನಿಧ್ಯವಹಿಸಿದ್ದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೊಟ್ಟೂರುಮಹಾಸ್ವಾಮಿಗಳು ಮಾತನಾಡುತ್ತ ವೈವಿದ್ಯಮಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಚಾರಿತ್ರಿಕ, ಸಾಂಸ್ಕೃತಿಕ ಪ್ರಜ್ಞೆ ಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಕೆ. ಚನ್ನಬಸಯ್ಯ ಸ್ವಾಮಿಯವರು ಮಾತನಾಡುತ್ತ ಪುಸ್ತಕಗಳು ಬಾಷಾಜ್ಙಾನವನ್ನು ಬೆಳಸಿಕೊಳ್ಳಲು ನೆರವಾಗುತ್ತವೆ ಎಂದರು ಪ್ರಾಧಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕವಾಗಿ ಮಾತನಾಡುತ್ತ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ 1993 ರಲ್ಲಿ ಪುಸ್ತಕ ಪ್ರಾಧಿಕಾರ ಸ್ಥಾಪನೆಯಾಗಿದೆ. ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ, ಪ್ರಕಾಶಕರಿಗೆ ಪ್ರಶಸ್ತಿ, ಲೇಖಕರಿಗೆ ಪ್ರಶಸ್ತಿ, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಮನೆ ಮನೆಗೆ ಗ್ರಂಥಾಲಯ ಮುಂತಾದ ಕಾರ್ಯಯೋಜನೆಯನ್ನು ಹೊಂದಿದೆ. ಮತ್ತು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನನ್ನ ಮೆಚ್ಚಿನ ಪುಸ್ತಕ ಕುರಿತು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶರಣೆಗೌಡ ಮಾಲೀಪಾಟೀಲ್ ಮತ್ತು ಸಹಾ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ ವಕೀಲರು ಉತ್ತಮವಾಗಿ ಮಾತನಾಡಿದ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪ್ರಾಚಾರ್ಯ ಡಾ.ರವಿ ಚವ್ಹಾಣ ಸ್ವಾಗತಿಸಿದರು. ವೇದಿಕೆಯಲ್ಲಿ ಸದಸ್ಯ ಕಮತಗಿ ಲಿಂಗಪ್ಪ, ಪ್ರಾಚಾರ್ಯರಾದ ವಿ.ಜಿ.ಯಾವಗಲ್, ಬಸವರಾಜ್ ಅಯೋಧ್ಯ ಉಪಸ್ಥಿತರಿದ್ದರು.