Breaking News

ಗುಳೆ ಗ್ರಾಮದಲ್ಲಿ ಮನೆ ಮನೆಗು ವಚನ ಜೋತಿ ಕಾರ್ಯಕ್ರಮ

Door-to-door vow program in Gule village


ಕೊಪ್ಪಳ:1 ನೇ ಶ್ರಾವಣ ಸೋಮವಾರದಿಂದ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣ, ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 21 ರಿಂದ ಒಂದು ತಿಂಗಳ ಕಾಲ ಪ್ರತಿ ಸಂಜೆ 6 ಗಂಟೆಗೆ ಶ್ರಾವಣಮಾಸದ ನಿಮಿತ್ಯ ಮನೆ-ಮನೆಗೆ ವಚನ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲನೆ ದಿನದ ವಚನ ಜೋತಿ ಕಾರ್ಯಕ್ರವನ್ನ ಶರಣ ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ ಇವರ ಮನೆಯಿಂದ ಚಾಲನೆ ನೀಡಿ ಮಾತನಾಡಿದ ಕಾರ್ಯದರ್ಶಿ ಶರಣ ಬಸವರಾಜ ಹೂಗಾರ ಮಾತನಾಡಿ, ಒಂದು ತಿಂಗಳಕಾಲ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರತಿ ದಿನ ವಿಶ್ವ ಗುರು ಬಸವಣ್ಣನವರ ಭಾವಚಿತ್ರದೊಂದಿಗ ವಚನ ಕಟ್ಟು ಹೊತ್ತುಕೊಂಡು ಮನೆ ಮನೆಗೆ ತೆರಳಿ, ಕಟುಂಬಸ್ಥರೆಲ್ಲರನ್ನ ಸಂಗಮಗೊಳಿಸಿ, ಗುರು ಪೂಜೆ, ಲಿಂಗಪೂಜೆ, ವಚನ ಪಠಣ ಮಾಡಿಸಿ, ಅನುಭಾವದ ಅಮೃತದ ನುಡಿಗಳನ್ನ ತಳಿಸುವುದರ ಮೂಲಕ ಶರಣರ ಸಂದೇಶವನ್ನು ವಾಸಿಸುವ ಜನ ಮನಗಳಿಗೆಬಿತ್ತರಿಸಿ, ಕಲ್ಲಿನ ನಾಗರ ದೇವನಿಗೆ ಹಾಲನೆರೆಯುವಂತ ಮೌಢ್ಯ ಆಚರಣೆಗೆ ಮನ ಓಲಿಸದೆ, ನಿಜ ಆಚರಣೆಗಳ ಸಾರುವ ಸಾವಿರಾರು ವಚನಗಳ ತಿರುಳನ್ನ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಜೀವನದಲ್ಲಿ ನಯ ವಿನಯತೆ, ಸುಸಂಸ್ಕೃತ ಮೌಲ್ಯಗಳ
ಬದುಕು ಕಟ್ಟಿಕೊಳ್ಳಲು ವಚನಗಳು ದಾರಿದೀಪವಾಗಿವೆ. ಈ ಯಾಂತ್ರಿಕತೆಯಲ್ಲಿ ಕಳೆದುಹೋಗುತ್ತಿರುವ ಸಮಯದಲ್ಲಿ ವಚನಗಳ ಅಮೃತಸವಿಯನ್ನು ಉಣಬಡಿಸುತ್ತಿವೆ. ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾದ ವಚನಗಳನ್ನು ಮನೆ ಮನಕ್ಕೆ ಮುಟ್ಟಿಸುವ ವಚನ ಶ್ರಾವಣ ಬಹು ಅರ್ಥಪೂರ್ಣವಾಗಿದೆ. ಕಾರಣ ನಾವು ನೀವೆಲ್ಲರು ನೀರಂತರವಾಗಿ ಒಂದು ತಿಂಗಳ ಕಾಲ ಬಸವಾದಿ ಶಿವಶರಣರ ವಚನದ ವಿಚಾರಗಳನ್ನು ಮನೆ ಮನಗಳಲ್ಲಿ ಮೈಗೂಡಿಸಿಕೊಂಡು ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ಕಾರ್ಯಕ್ರಮದಲ್ಲಿ, ಅಕ್ಕನಾಗಲಾಂಬಿಕೆ ಮಹಿಳಾ ಗಣದ ಶರಣೆ ಸಾವಿತ್ರಮ್ಮ ದೇವೇಂದ್ರಪ್ಪ ಆವಾರಿ, ಶಂಕ್ರಮ್ಮ ಹೊಸಳ್ಳಿ, ಚೆನ್ನಮ್ಮ ಮಂತ್ರಿ, ಗುರಲಿಂಗಮ್ಮ ಮಂತ್ರಿ ನಿಂಗಮ್ಮ ಕೋಳೂರು, ನಾಗಮ್ಮ ಜಾಲಿಹಾಳ, ಹಂಪಮ್ಮ ಮೇಟಿ, ಶರಣಮ್ಮ ಹೊಸಳ್ಳಿ ಹಾಗು ಅಧ್ಯಕ್ಷರಾದ ರೇಣುಕಪ್ಪ ಮಂತ್ರಿ, ಬಸವಣ್ಣ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಜಗದೀಶ್ ಮೇಟಿ, ಶಿವಪುತ್ರಪ್ಪ ಉಚ್ಚಲಕುಂಟಿ, ಲಿಂಗನಗೌಡ ದಳಪತಿ, ಯಮನೂರಪ್ಪ ಕೋಳೂರು ಹನಮೇಶ್ ಹೊಸಳ್ಳಿ, ರಾಷ್ಟ್ರಪತಿ, ಶಾಂತಪ್ಪ ಹೊಸಳ್ಳಿ, ಚನ್ನಬಸವಣ್ಣ ನಿಡಶೇಸಿ, ಗಿರಿಮಲ್ಲಪ್ಪ ಪರಂಗಿ ಸಾ ವನಜಭಾವಿ, ಸೋಮಣ್ಣ ಮಂತ್ರಿ, ಮಲ್ಲಿಕಾರ್ಜುನ ಮಂತ್ರಿ ಬಸವರಾಜ ಹೊಸಳ್ಳಿ, ವಿರಪಣ್ಣ ಮಂತ್ರಿ ಸೇರಿದಂತೆ ಹಲವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

✍️ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣಗ್ರಾಮ ಗುಳೆ

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.