Make good use of government facilities : Madhu Bangarappa

ವರದಿ : ಪಂಚಯ್ಯ ಹಿರೇಮಠ ಕೊಪ್ಪಳ,,,,
ಕೊಪ್ಪಳ : ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸರಕಾರದಿಂದ ವಿದ್ಯಾರ್ಥಿ ಗಳ ಶಿಕ್ಷಣ ಗುಣ ಮಟ್ಟಕ್ಕೆ ಹಲವಾರು ಉಚಿತ ಯೋಜನೆಗಳನ್ನು ನೀಡುತ್ತಿದ್ದು ಅವುಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪೂರ ನೂತನ ಸರಕಾರಿ ಪ್ರೌಢಶಾಲೆ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸರಕಾರಿ ಶಾಲೆಗೆ ಉತ್ತಮ ಶಿಕ್ಷಕರನ್ನು ಸರಕಾರವೇ ನೇಮಕ ಮಾಡಿಕೊಳ್ಳುವದರಿಂದ ಅವರು ಗುಣ ಮಟ್ಟದ ಶಿಕ್ಷಣ ನೀಡುತ್ತಾರೆ. ಪಾಲಕರ ತಪ್ಪು ಕಲ್ಪನೆಯಿಂದ ಖಾಸಗಿ ಶಿಕ್ಷಣದತ್ತ ಒಲವು ತೋರಿಸಬಾರದು ಎಂದರು.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ನಮ್ಮ ಗಮನಕ್ಕೆ ಇದೆ, ಈ ಮೊದಲು ಬೊಮ್ಮಾಯಿ ಸರಕಾರದಲ್ಲಿ 53 ಸಾವಿರ ಅತಿಥಿ ಶಿಕ್ಷಕರ ಕೊರತೆ ಇತ್ತು ಆದರೆ ಮೂರೂವರೆ ವರ್ಷದಲ್ಲಿ ಕೇವಲ 4900 ಶಿಕ್ಷಕರನ್ನು ನೇಮಕ ಮಾಡಿಕೊಂಡರು, ಆದರೆ ನಾನು ಸಚಿವರಾದ ಮೇಲೆ ಹದಿಮೂರುವರೆ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಇನ್ನೂ ಮುಂದಿನ ದಿನಗಳಲ್ಲಿ ಹತ್ತರಿಂದ ಹನ್ನೆರಡು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದರು.
ಎಲ್ ಕೆ ಜಿ, ಯುಕೆಜಿಗಳನ್ನು ಬಂದ್ ಮಾಡಿ ಪ್ರಾಥಮಿಕ ಶಾಲೆಗೆ ಸೇರಿಸುತ್ತೇವೆ ಎಂದಿದ್ದು, ಯಾವುದೇ ಕಾರಣಕ್ಕೂ ಅಂಗನವಾಡಿಯನ್ನು ಬಂದ್ ಮಾಡುವುದಿಲ್ಲ, ಅಂಗನವಾಡಿ ಶಿಕ್ಷಕಿಯರು ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.
ಒಟ್ಟಾರೇ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣಕ್ಕೆ ನಮ್ಮ ಸಿದ್ರಾಮಯ್ಯ ನೇತೃತ್ವದ ಸರಕಾರ ಮಹತ್ವ ನೀಡಿದ್ದು ಇನ್ನೂ ಉನ್ನತ ಶಿಕ್ಷಣ ನೀಡುವ ಗುರಿಹೊಂದಿದೆ. ಮತ್ತು ನಿಟ್ ಕ್ಲಾಸ್, ಸಿಇಟಿ ಕ್ಲಾಸ್ ಗಳನ್ನು ಸರಕಾರದಿಂದ ಉಚಿತವಾಗಿ ಮಾಡಲು ತಿರ್ಮಾನಿಸಲಾಗಿದೆ ಎಂದರು.
ನಮ್ಮ ಅಭಿವೃದ್ದಿ ಸಹಿಸದ ಬಿಜೆಪಿಯವರು ಅನಗತ್ಯ ಟೀಕೆ ಮಾಡ್ತಾ ಇದ್ದಾರೆ ಬಿಜೆಪಿ ಅವರಿಗೆ ತಪ್ಪು ಹುಡುಕುವುದೇ ದೊಡ್ಡ ಕೆಲಸ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ನಂತರ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ ಬಂಗಾರಪ್ಪನವರು ನಮ್ಮ ರಾಜಕೀಯ ಗುರು ಇವರ ಆಡಳಿತಾವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಯೋಜನೆ ನೀಡಿದ್ದು ಅದು ಇಂದಿಗೂ ಪ್ರಸ್ತುತವಾಗಿದೆ. ನಮ್ಮ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದ್ದು, ಅನ್ನಬಾಗ್ಯ, ಸ್ತ್ರೀ ಶಕ್ತಿ , ಗೃಹ ಲಕ್ಷ್ಮೀ, ಉಚಿತ ವಿದ್ಯುತ್ ಯೋಜನೆಯಂತಹ ಮಹತ್ತರ ಜನಪರ ಯೋಜನೆಗಳನ್ನು ನಮ್ಮ ಸರಕಾರ ನೀಡುತ್ತಿದೆ.
ದಕ್ಷ ಆಡಳಿತ ನೀಡುವಲ್ಲಿ ಸರಕಾರ ಕೆಲಸ ಮಾಡಬೇಕು, ಕೇವಲ ಟೀಕೆ, ಟಿಪ್ಪಣೆ ಮಾಡುವುದು ಸರಿಯಲ್ಲ, ನಮ್ಮ ಕ್ಷೇತ್ರಕ್ಕೆ ಇನ್ನೂ 12ಸರಕಾರಿ ಪ್ರೌಢಶಾಲೆ, 5ಜೂನಿಯರ್ ಕಾಲೇಜು, 3 ಹೊಸ ಮೊರಾರ್ಜಿ, ಇಟಗಿ ಕಾಮರ್ಸ್, ಸೈನ್ಸ್ ಕಾಲೇಜ್ ಮಂಜೂರಾಗಿವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ್ ರಾಯರೆಡ್ಡಿ, ಏ.ಡಿ.ಸಿ. ಮಹೇಶ್ ಮಾಲಗಿತ್ತಿ, ತಹಶೀಲ್ದಾರ್ ರಾದ ಪ್ರಾಣೇಶ್, ಬಸವರಾಜ್ ತೆನ್ನಳ್ಳಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿರಾದರ್ , ವಕೀಲ ರಾಮಣ್ಣ ಸಾಲಭಾವಿ, ಭಾನಾಪೂರ ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಮಾಜಿ ಅಧ್ಯಕ್ಷ ಭೀಮಣ್ಣ, ತಳಕಲ್ ಪಂಚಾಯಿತಿ ಅಧ್ಕಕ್ಷೆ ಜಹೀರಾಬೇಗಂ ಜಾಕಿರ್ ಹುಸೇನ್ ಕೊಪ್ಪಳ,ಮೈಲಾರಗೌಡ ಹೊಸ್ಮನಿ, ಕ್ಷೇತ್ರ ಶಿಕ್ಷಣಧಿಕಾರಿ ಕೆ.ಟಿ. ನಿಂಗಪ್ಪ, ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ. ಕಳ್ಳಿ ಮುಖ್ಯೋಪಾಧ್ಯಾಯ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದ