A lamb supported for a self-reliant life: Vimukti Institute
ಮಾನ್ವಿ :ತಾಲ್ಲೂಕಿನ ಪೋತ್ನಾಳ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಪೋತ್ನಾಳ್ ವತಿಯಿಂದ ಗ್ರಾಮದ ವಿಮುಕ್ತಿ ಸಭಾಂಗಣದಲ್ಲಿ ಸೋಮವಾರ ಸ್ವಸಾಯ ಸಂಘದ ಮಹಿಳೆಯರಿಗೆ ಕುರಿಮರಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಸ್ವಸಾಯ ಸಂಘದ ಮಹಿಳೆಯರಿಗೆ ಕುರಿಮರಿ ವಿತರಿಸುವ ಮೂಲಕ ಸ್ವಾವಲಂಬಿ ಜೀವನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಡತನ ನಿರ್ಮೂಲನೆ ಹಾದಿಯಲ್ಲಿ ಮುಂದುವರಿದು ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಂಸ್ಥೆಯ ಮೂಲಕ ಕುರಿಮರಿ ವಿತರಣೆ ಮಾಡಿ ಸಮುದಾಯದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಭಾಗವಹಿಸುವಂತೆ ಪ್ರೇರಣೆ ನೀಡಲಾಯಿತು ಎಂದು ವಿಮುಕ್ತಿ ಸಂಸ್ಥೆಯ ತಾಲೂಕ ಸಂಯೋಜಕರಾದ ಜಯಶೀಲ ದೋತರಬಂಡಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು
ನಂತರ ಮಾತನಾಡಿದ ಅವರು ಗ್ರಾಮೀಣ ಮಹಿಳೆಯರು ಸ್ವ ಉದ್ಯೋಗದಿಂದ ದೂರವಿದ್ದಾರೆ ಸರ್ಕಾರದಿಂದ ಬರುವ ಯೋಜನೆಗಳನ್ನು ಪಡೆದುಕೊಳ್ಳುವವರಿಲ್ಲ ಅದರಲ್ಲಿ ಪ್ರಮುಖವಾಗಿ ಹೈನುಗಾರಿಕೆ ಕುರಿಸಾಕಾಣಿಕೆ ಕೋಳಿ ಸಾಕಾಣಿಕೆ ಹೀಗೆ ಅನೇಕ ಯೋಜನೆಗಳಿದ್ದರೂ ಈ ಯೋಜನೆಗಳು ಬಡವರ ಕೈ ಸೇರುವುದಿಲ್ಲ ಅದಕ್ಕಾಗಿ ವಿಮುಕ್ತಿ ಸಂಸ್ಥೆಯು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಜೀನೂರು ಮತ್ತು ಈರಲಗಡ್ಡಿ ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಅಂದರೆ ಒಟ್ಟಾರೆ ಮೂರು ಸಂಘಗಳಿಗೆ ಸುಮಾರು 32 ಕುರಿ ಮರಿಗಳನ್ನು ನೀಡುವ ಮೂಲಕ ಆರ್ಥಿಕ ಸಹಾಯ ನೀಡಿ ಅವರ ಆದಾಯ ಅಭಿವೃದ್ಧಿಗೆ ಆಸರೆಯಾಗಿದೆ ಇದರ ಪ್ರಯೋಜನವನ್ನು ಮಹಿಳೆಯರು ಪಡೆದು ಆರ್ಥಿಕ ಸಂಕಷ್ಟದಿಂದ ಹೊರಬರಬೇಕು ಎಂದು ನುಡಿದರು
ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿ ಮತ್ತು ಕುರಿ ಮರಿಗಳನ್ನು ವಿತರಿಸಿ ಮಾತನಾಡಿದ ವಿಮುಕ್ತಿ ಸಂಸ್ಥೆಯ ನಿರ್ದೇಶಕರಾದ ವಂ ಫಾ ಸತೀಶ್ ಫೆರ್ನಾಂಡಿಸ್ ಇವರು ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಬೇಕಾದಷ್ಟು ಯೋಜನೆಗಳು ಸರ್ಕಾರ ಜಾರಿಗೆ ತಂದಿದ್ದರು ಅಧಿಕಾರಿಗಳ ಬೇ ಜವಾಬ್ದಾರಿಯಿಂದ ನಿಜವಾದ ಫಲಾನುಭವಿಗಳು ವಂಚಿತರಾಗಿದ್ದಾರೆ ಸಂಘದ ಮಹಿಳೆಯರು ಪ್ರಜ್ಞಾವಂತರಾಗಬೇಕು ಶಿಕ್ಷಣವಂತರಾಗಬೇಕು ಆಗ ಮಾತ್ರ ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಸಂಘದ ಅಧ್ಯಕ್ಷರುಗಳಾದ ಶ್ರೀಮತಿ ಶ್ರೀದೇವಿ ಜಿನೂರು ಶಿವಮ್ಮ ಮಡಿವಾಳ ಕುಮಾರಿ ಚೌಡಮ್ಮ ಈರಲಗಡ್ಡಿ ಉಪಸ್ಥಿತರಿದ್ದರು ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಮತಿ ಶಿಲ್ಪ ಶ್ರೀಮತಿ ಸುಂಕ್ಲಮ್ಮ ಕುಮಾರಿ ಮಮತಾ ಚಾರ್ಲಿ ಉದ್ಬಾಳ ಉಪಸ್ಥಿತರಿದ್ದರು ಶ್ರೀಮತಿ ಜೆಸ್ಸಿಂತಾ ಮುದ್ದನಗುಡ್ಡಿ ಸ್ವಾಗತಿಸಿ ನಿರೂಪಿಸಿದರು.