Breaking News

ಬುಡ್ಡೆಕಲ್ಲಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ

Put water on the stone and pray for rain

ಜಾಹೀರಾತು
ಜಾಹೀರಾತು

ಮಾನ್ವಿ :ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ಹಿರಿಯರು ಯುವಕರು ಸಮ್ಮುಖದಲ್ಲಿ
ಅಗಸೆ ಬುಡ್ಡೆಕಲ್ಲಿಗೆ ಯುವಕರು ನೂರಂದು ಕೊಡ ನೀರು ಸುರಿದು ಬಾರಯ್ಯ ಮಳೆರಾಯ ಎಂದು ಪ್ರಾರ್ಥಿಸುತ್ತ ಬುಡ್ಡೆಕಲ್ಲಿಗೆ ಸಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿದರು.

ಗ್ರಾಮದಲ್ಲಿ ನಡೆದ ಊರ ದೇವರಿಗೆ ನೀರು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕಳೆದ ಕೆಲ ದಿನಗ ಳಿಂದ ಮಳೆ ಬರದೆ ರೈತರಲ್ಲಿ ದೊಡ್ಡ ಚಿಂತೆ ಮೂಡಿಸಿತ್ತು.ಅದಕ್ಕಾಗಿ ಶ್ರಾವಣ ಮಾಸ ಆರಂಭಗೊಂಡಿದ್ದು ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ಜನರು ಭಕ್ತಿಯಿಂದ ದೇವರಿಗೆ ನೀರು ನೀಡಿ ದೇವರಲ್ಲಿ ಪ್ರಾರ್ಥಿಸಿ ನಮ್ಮ ಊರು ಮಾತ್ರವಲ್ಲದೆ ನಾಡಿನೆಲ್ಲೆಡೆ ಉತ್ತಮವಾಗಿ ಮಳೆ ಬಂದು ಜನರಿಗೆ ನೆಮ್ಮದಿ ದೊರೆಯಲೆಂದು ಊರಿನ ಎಲ್ಲಾ ದೇವರಿಗೆ ನೀರು ನೀಡಿ ಪ್ರಾರ್ಥಿಸಲಾಗಿದೆ ಎಂದರು.

ಮಂಗಳವಾರ ಮತ್ತು ಶುಕ್ರ ವಾರ ಸೇರಿ ನಾಲ್ಕು ವಾರಗಳ ಕಾಲ ವಿಶೇಷ ಪೂಜೆ ಕಾರ್ಯಕ್ರಮ ನಡೆದಿದ್ದು, ಈ ಕೊನೆಯ ಮಂಗಳವಾರ ರಂದು ಬೆಳಿಗ್ಗೆಯಿಂದ ವಾದ್ಯಮೇಳಗಳೂಂದಿಗೆ ವಿಶೇಷ ಪೂಜೆ ಹಾಗೂ ನೈವೇದ್ಯ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಗ್ರಾಮ ದೇವತೆ ದ್ಯಾವಮ್ಮ ಮತ್ತು ಚೌಡಮ್ಮ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಈಶ್ವರ್, ಬಸವಣ್ಣ ಸೇರಿದಂತೆ ಗ್ರಾಮದಲ್ಲಿನ ಎಲ್ಲಾ ದೇವಸ್ಥಾನಗಳಿಗೆ ಕೊಡಗಳ ಮೂಲಕ ನೀರು ನೀಡಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರು ಸೇರಿದಂತೆ ಸಮಸ್ತ ಗ್ರಾಮದ ಜನರು ಭಾಗವಹಿಸಿದ್ದರು.

About Mallikarjun

Check Also

ಕಳೆದುಕೊಂಡ ದುಬಾರಿ ಮೊಬೈಲ್ ಗಳನ್ನು ಹಿಂತಿರುಗಿಸಿದ ನಗರ ಠಾಣೆ ಪಿ.ಐ.ಪ್ರಕಾಶ್ ಮಾಳೆ:

City police station PI Prakash Male returns lost expensive mobile phones: ಗಂಗಾವತಿ:17 ನಗರದಲ್ಲಿರುವ ಸಾರ್ವಜನಿಕರು ತಮ್ಮ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.