ಮಾತು ಕೊಟ್ಟಂತೆ ಏಮ್ಸ್ ರಾಯಚೂರಿಗೆ ಕೊಡಿ: ಯಮನೂರ್ ಭಟ್ ಆಗ್ರಹ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Give AIIMS Raichur as promised: Yamanur Bhat Agraha

ಜಾಹೀರಾತು

ಗಂಗಾವತಿ: ಹೈದ್ರಾಬಾದ್ ಕರ್ನಾಟಕದ ಹಿಂದುಳಿದ ಜಿಲ್ಲೆ ರಾಯಚೂರಿಗೆ ಹಿಂದಿನ ಸರಕಾರ ಐಐಟಿ ಘೋಷಿಸಿತ್ತು ಕೆಲ ರಾಜಕಾರಣಿಗಳ ಕುತಂತ್ರದಿAದ ಅದು ಧಾರವಾಡಕ್ಕೆ ಹೋಗಿದ್ದು, ಬದಲಾಗಿ ಏಮ್ಸ್ ಕೊಡುವುದಾಗಿ ಅಂದು ಭರವಸೆ ನೀಡಲಾಗಿತ್ತು ಆದರೆ ಅದನ್ನು ಕೂಡಾ ಧಾರವಾಡದ ರಾಜಕಾರಣಿಗಳು ಕಸಿಯುವ ಹುನ್ನಾರ ನಡೆಸಿದ್ದು ಪ್ರಧಾನಿ ಮೋದಿಯವರು ಮಾತು ಕೊಟ್ಟಂತೆ ರಾಯಚೂರಿಗೆ ಏಮ್ಸ್ ನಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟz) ಅಧ್ಯಕ್ಷ ಯಮನೂರ್ ಭಟ್ ಒತ್ತಾಯಿಸಿದರು.
ಅವರು ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಮುಖಂತರ ಮನವಿ ಸಲ್ಲಿಸಿ ಮಾತನಾಡಿದರು.
ಏಮ್ಸ್ ಹೋರಾಟ ಸಮಿತಿಯು ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಅದಕ್ಕೆ ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಎಲ್ಲ ಸಮಾಜದ ಸಂಘಟನೆಗಳು ಸಾತ್ ನೀಡಿದ್ದು, ಸುಮಾರು ೨೬ ತಿಂಗಳಿAದಲೂ ಸತ್ಯಗ್ರಹ ನಡೆಸುತ್ತ ಬರತ್ತಿದ್ದು, ಈ ಭಾಗದ ಬಹುದಿನ ಕನಸಾಗಿರುವ ಏಮ್ಸ್ ಧಾರವಾಡದಕ್ಕೆ ನೀಡದೆ ರಾಯಚೂರಲ್ಲಿ ಸ್ಥಾಪಿಸಬೇಕು, ಹಿಂದಿನ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರನ್ನು ರಾಯಚೂರಿನ ನಿಯೋಗ ಭೇಟಿಯಾಗಿತ್ತು ಆಗ ತಾವು ಭರವಸೆ ನೀಡಿ ಕಳುಹಿಸಿದ್ದೀರಿ, ಪತ್ರ ಬರೆದರೆ ಸಪರ್ಮಕ ಉತ್ತರ ನೀಡುತ್ತಿಲ್ಲ, ಸ್ಪಂದಿಸುತ್ತಿಲ್ಲ ಈ ಜನರ ಬೇಡಿಕೆ ನಿಮಗೆ ಮುಖ್ಯ ಅನಿಸುತ್ತಿಲ್ಲವೆ ಎಂದು ಪ್ರೆಶ್ನಿಸಿದರು.
ಭಾರತಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾರಂಭದಿAದ ಇಲ್ಲಿನ ಜನರ ಶಿಕ್ಷಣದ ಗುಣಮಟ್ಟ ಸುಧಾರಣೆಗೊಳ್ಳಲಿದ್ದು, ವಿಪುಲ ಅವಕಾಶಗಳು ದೊರೆಯಲಿವೆ, ಹಿಂದುಳಿದ ರಾಯಚೂರು ಜಿಲ್ಲೆಗೆ ಇದುವರೆಗೂ ಯಾವುದೇ ಮಹತ್ವಾಕಾಂಕ್ಷೆಯ ಯೋಜನೆಗಳು ಜಾರಿಯಾಗಿಲ್ಲ, ನಂಜುAಡಪ್ಪ ವರದಿಯಂತೆ ಪ್ರಾದೇಶಿಕ ಅಸಮತೋಲನೆ ತೊಡೆದು ಹಾಕಲು ಇದು ಸಕಾಲವಾಗಿದ್ದು ಗೌರವಾನ್ವಿತ ಪ್ರಧಾನಿಗಳು ನಮ್ಮ ಬೇಡಿಕೆಯನ್ನು ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷರಾದ ಸುರೇಶ್ ಚನ್ನಳ್ಳಿ, ನಹೀಮ್ ಪಾಶಾ, ರಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಗಡ್ಡಿ, ಸಂಚಾಲರಾದ ಮುತ್ತುರಾಜ್ ಗಡ್ಡಿ, ಮಾರುತಿ, ಕಾರ್ಯದರ್ಶಿ ಹುಲಿಯಪ್ಪ ಹಾರೆಗೆರ, ನಗರಘಟಕದ ಅಧ್ಯಕ್ಷ ಹನುಮೇಶ್ ಕುರುಬರ, ತಾಲೂಕಾ ಯುವ ಘಟಕದ ಅಧ್ಯಕ್ಷ ಶಿವುಕುಮಾರ್ ಕುಲಕರ್ಣಿ, ಉಪಾಧ್ಯಕ್ಷ ಅಂಬಾಸ್, ನಾಸೀರ್ ಹುಸೇನ್ ಇತರರಿದ್ದರು

Total Views: 0
Share This Article