Breaking News

ರೈಲ್ವೆ ಹೋರಾಟ ಸಮಿತಿಯಿಂದ ಸಿಎಂ ಭೇಟಿ, ಅನುದಾನಕ್ಕೆ ಒತ್ತಾಯಬಾಗಲಕೋಟೆ ರೈಲ್ವೇಗೆ ಪಕ್ಷಾತೀತವಾಗಿ ಸಹಕರಿಸಲು ಶ್ರೀನಾಥ್ ಮನವಿ

Railway Struggle Committee visits CM, insists on grant
Srinath appeals to cooperate impartially with Bagalkote Railway

ಜಾಹೀರಾತು
ಜಾಹೀರಾತು

ಗಂಗಾವತಿ: ಮಾಜಿ ಸಂಸದ ಕರಡಿ ಸಂಗಣ್ಣ ಅವರ ಮುತುವರ್ಜಿಯಿಂದಾಗಿ ದರೋಜಿ ರೈಲ್ವೇ ಸರ್ವೇಕಾರ್ಯ ಆರಂಭವಾಗಿದ್ದು, ಬಾಗಲಕೋಟೆ ರೈಲ್ವೇ ಯೋಜನೆಗೂ ಡ್ರೋನ್ ಸರ್ವೇ ಮಾಡಲಾಗುತ್ತಿದೆ ಕೇವಲ ದರೋಜಿ ರೈಲ್ವೇ ಯೋಜನೆ ಎಂದು ಮನವಿ ನೀಡುವ ಮೂಲಕ ಜನಪ್ರತಿನಿಧಿಗಳು ಗೊಂದಲ ಮೂಡಿಸದೆ ದರೋಜಿ ಬಾಗಲಕೋಟೆ ರೈಲ್ವೇ ಯೋಜನೆಗೆ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಸಹಕರಿಸಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ದರೋಜಿ ಬಾಗಲಕೋಟೆ ರೈಲ್ವೇ ಹೋರಾಟ ಸಮಿತಿ ಸಂಚಾಲಕ ಹೆಚ್.ಆರ್. ಶ್ರೀನಾಥ್ ಮನವಿ ಮಾಡಿದರು.
ಅವರು ತಮ್ಮ ನಿವಾಸದಲ್ಲಿ ಶನಿವಾರ ಆಯೋಜಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಗಂಗಾವತಿ, ಕನಕಗಿರಿ, ತಾವರಗೆರಾ, ಕುಷ್ಟಗಿ, ಹುನಗುಂದು, ಅಮೀನಗಡ ಹಾಗು ಇಲಕಲ್ ಈ ಜನರನ್ನೊಳಗೊಂಡ ರೈಲ್ವೇ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡಲಾಗುತ್ತಿದೆ, ಈ ಮಾರ್ಗ ಉತ್ತರ ಮತ್ತು ದಕ್ಷಿಣ ಹಾಗು ದಕ್ಷಿಣ ಭಾರತ, ಅಯೋಧ್ಯೆ ಮತ್ತು ಅಂಜನಾದ್ರಿ, ಮಹಾರಾಷ್ಟçವನ್ನೂ ಸಂಪರ್ಕಿಸಿ, ಹಂಪಿ, ಆನೆಗೊಂದಿ, ಕನಕಗಿರಿ, ಬಾದಮಿ ಹಾಗು ಪಟ್ಟದಕಲ್ಲು ಐತಿಹಾಸಿಕ ಐತಿಹಾಸಿಕ, ಪೌರಾಣಿಕ ಸ್ಥಳಗಳನ್ನು ಸಂಪರ್ಕಿಸುವ ಬಹುದೊಡ್ಡ ಮಾರ್ಗವಾಗಲಿದೆ, ಬರಪ್ರದೇಶದ ಜನತೆ ಬೆಳವಣಿಗೆಗೆ ಈ ಮಾರ್ಗ ಪೂರಕವಾಗಲಿದ್ದು, ಸೊಲ್ಲಾಪುರದವರೆಗೆ ಸಂಪರ್ಕ ಸಾಧಿಸಬಹುದಾಗಿದೆ, ಉದ್ಯಮ ವಲಯದ ಬೆಳವಣಿಗೆ ಇದರಿಂದ ಲಭ್ಯವಾಗಲಿದ್ದು ಉದ್ಯೋಗ ಸೃಷ್ಟಿಗು ವಿಪುಲ ಅವಕಾಶಗಳಿವೆ ಎಂದು ವಿವರಿಸಿದರು.
ಕೆಲ ಮುಖಂಡರು ಗಂಗಾವತಿ ದರೋಜಿ ರೈಲ್ವೆ ಯೋಜನೆ ಎಂದು ಮನವಿ ಕೊಡುತ್ತಿರುವುದು ಸರಿಯಲ್ಲ ಎಲ್ಲರೂ ಒಂದೇ ವೇದಿಕೆಯಡಿ ಬಾಗಲಕೋಟೆ ರೈಲ್ವೆಗೆ ಹೋರಾಟ ನಡೆಸಬೇಕಿದ್ದು, ಅಭಿವೃದ್ಧಿಗೆ ಯಾರೇ ಹೋರಾಟ ಮಾಡಿದರು ಬೆಂಬಲಿಸಲಿದ್ದು, ಬಾಗಲಕೋಟೆ ಯೋಜನೆ ಪೂರ್ಣಗೊಂಡರೆ ಸೊಲ್ಲಾಪುರ ಕೂಡಾ ಸಮೀಪವಾಗಲಿದೆ, ಕರ್ನಾಟಕ ಸರಕಾರದಿಂದ ಮ್ಯಾಚಿಂಗ್ ಗ್ರಾಂಟ್ ಕೊಡಿಸುತ್ತಿದ್ದಾರೆ, ಶಾಸಕ ಜನಾರ್ದನರೆಡ್ಡಿ ಹಾಗು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ನಿಯೋಗದೊಂದಿಗೆ ಒತ್ತಾಯ ಮಾಡುವ ಉದ್ದೇಶ ಹೊಂದಲಾಗಿದೆ, ಕನಕಗಿರಿಯಲ್ಲಿ ಎರಡು ಬಾರಿ ಹೋರಾಟ ಸಮಿತಿಯಿಂದ ಸಭೆ ಮಾಡಲಾಗಿದೆ, ತಾವರಗೆರೆಯಲ್ಲಿ ಈ ತಿಂಗಳ ಕೊನೆಗೆ ಸಭೆ ಕರೆಯಲಾಗಿದೆ ದೊಡ್ಡ ಯೋಜನೆಯಾಗಿದ್ದು ಚಿಕ್ಕ ಮನವಿ ಕೊಟ್ಟು ದಕ್ಕೆ ತರಬೇಡಿ, ರಾಜಕೀಯ ಮಾಡುವ ಬದಲು ಒಗ್ಗಟ್ಟಿನಿಂದ ಅಭಿವೃದ್ಧಿಪಡಿಸೋಣ ಎಂದರು.
ಕೇAದ್ರ ಸರಕಾರ ಕಾಳಜಿ ವಹಿಸಿದರೆ ಕೇವಲ ಎರಡೇ ವರ್ಷಗಳಲ್ಲಿ ಈ ಯೋಜನೆ ಮುಗಿಯಲಿದ್ದು, ದೊಡ್ಡ ದೊಡ್ಡ ಕೈಗಾರಿಕೆ ಸಂಸ್ಥೆಗಳು ಕನಕಗಿರಿಯಲ್ಲಿ ಸ್ಥಾಪನೆಯಾಗಲಿವೆ ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ, ರೈಲ್ವೆ ಸಚಿವ ಸೋಮಣ್ಣ ಅವರಿಗೆ ಮತ್ತೆ ಮನವಿ ಸಲ್ಲಿಸಲಾಗುವುದು, ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ್ ಹಿಟ್ನಾಳ್ ಅವರೊಟ್ಟಿಗೆ ಸಿಎಂ ಅವರಿಗೆ ಮನವಿ ಸಲ್ಲಿಸಿ ಅನುದಾನ ಒದಗಿಸುವಂತೆ ಕೋರಲಾಗುವುದು. ೧೯೯೪ ರಲ್ಲಿ ಗಿಣಿಗೇರಾ ಗದ್ವಾಲ್ ರೈಲ್ವೆ ಯೋಜನೆ ನನ್ನ ಮುಂಚೂಣಿ ನಾಯಕತ್ವದಲ್ಲಿ ರೈಲ್ವೆ ರುಕೋ ಚಳುವಳಿ ಮಾಡಿದ ಪರಿಣಾಮ ಇಂದು ರೈಲು ಗಂಗಾವತಿವರೆಗೆ ಯಶಸ್ವಿಯಾಗಿದೆ ಎಂದರು. ಹೋರಾಟ ಸಮಿತಿಯ ಸಹ ಸಂಚಾಲಕ ದುರ್ಗಾದಾಸ್ ಯಾದವ್, ಮುಖಂಡರಾದ ರಾಜಶೇಖರ್ ಮುಷ್ಟೂರು, ನಗರಸಭೆ ಮಾಜಿ ಅಧ್ಯಕ್ಷ ನಾರಾಯಣಪ್ಪ ನಾಯಕ, ಮುಖಂಡರಾದ ಸುರೇಶ್ ಗೌರಪ್ಪ, ಯಂಕರೆಡ್ಡಿ ಓಣಿಮನಿ, ರಂಗಪ್ಪ ಕುರುಬರು ಇತರರಿದ್ದರು.

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.